ಇಂದು ಸಂಜೆ 5ಗಂಟೆಗೆ ಡಾ.ಪಿ.ಎಸ್ ಶಂಕರ್ ಪ್ರತಿಷ್ಠಾನವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

0
887

ಕಲಬುರಗಿ ಜ. 1: ಡಾ. ಪಿ.ಎಸ್ ಶಂಕರ್ ಪ್ರತಿಷ್ಠಾನದ 21 ನೆಯ ವಾರ್ಷಿಕೋತ್ಸವದ ಸರಳ ಸಮಾರಂಭ ನಾಳೆ ( ಜ.1) ಸಂಜೆ 5 ಗಂಟೆಗೆ ನಗರದ ಜಗತ್ ವೃತ್ತದ ಬಳಿ ಇರುವ ಆಮಂತ್ರಣ ಹೋಟೆ???ನಲ್ಲಿ ನಡೆಯಲಿದೆ.ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಆಮಂತ್ರಿತರ ಸಮ್ಮುಖದಲ್ಲಿ ಕಾರ್ಯ ಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾ.ಶಿ ಇಲಾಖೆ ಅಪರ ಆಯುಕ್ತ ನಲಿನ್ ಅತು¯ ಅವರು ಆಗಮಿಸಲಿದ್ದು,ಪ್ರತಿಷ್ಠಾನದ ಅಧ್ಯಕ್ಷರಾದ ಅಂಬಿಕಾ ಶಂಕರ ಅವರು ಅಧ್ಯಕ್ಷತೆ ವಹಿಸುವರು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಷಿ ಅವರು ನಿನ್ನೆ ಗುರುವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಶಸ್ತಿ ಪ್ರದಾನ:
ಪ್ರತಿಷ್ಠಾನವು ಕೊಡಮಾಡುವ ಈ ಸಾಲಿನ ಡಾ. ಪಿ ಎಸ್ ಶಂಕರ್ ವೈದ್ಯಶ್ರೀ ರಾಷ್ಟ್ರಪ್ರಶಸ್ತಿಯನ್ನು ವೈದ್ಯಕೀಯ ಶಿಕ್ಷಣಖಾತೆ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ನಾಳಿನ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವದು.ಪ್ರಶಸ್ತಿಯು 10 ಸಾವಿರ ರೂ ನಗದು ಪುರಸ್ಕಾರ,ಪ್ರಶಸ್ತಿ ಪತ್ರ ಒಳಗೊಂಡಿದೆ.ಡಾ. ಪಿ ಎಸ್ ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ಬಾಗಿಲುಕೋಟೆ ಜಿಲ್ಲೆ ಬಾದಾಮಿಯ ಜಿಲ್ಲಾ ನಿವೃತ್ತವೈದ್ಯಾಧಿಕಾರಿ ಡಾ. ಕರವೀರಪ್ರಭು ಕ್ಯಾಲಕೊಂಡ ಅವರು ರಚಿಸಿದ ಮೇರಾ ಭಾರತ ಮಧುಮೇಯ ಮಯಂ ಕೃತಿಗೆ ನೀಡಲಾಗುತ್ತಿದ್ದು, ಡಾ.ಕ್ಯಾಲಕೊಂಡರಿಗೆ 5 ಸಾವಿರ ರೂ ನಗದು ಪುರಸ್ಕಾರ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು.ವಿಜ್ಞಾನ ಮತ್ತು ವೈದ್ಯ ವಿಜ್ಞಾನದ ಎರಡು ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು,ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ಉಚಿತವಾಗಿ ನೀಡಲಾಗುವದು ಎಂದರು.
ಈ ಸಾಲಿನಲ್ಲಿ 9 ಬಡ ಪ್ರತಿಭಾವಂತ ವೈದ್ಯ ವಿದ್ಯಾರ್ಥಿಗಳನ್ನು ವೈದ್ಯವಿದ್ಯಾರ್ಥಿ ವೇತನಕ್ಕಾಗಿ ಆಯ್ಕೆ ಮಾಡಲಾಗಿದೆ.ಅವರಿಗೆ ವಾರ್ಷಿಕ ತಲಾ 12 ಸಾವಿರ ರೂ ಗಳಂತೆ ಪ್ರತಿಯೊಬ್ಬರಿಗೆ 54 ಸಾವಿರ ರೂ ವೈದ್ಯವಿದ್ಯಾರ್ಥಿ ವೇತನ ನೀಡಲಾಗುವದು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಎಚ್.ವೀರಭದ್ರಪ್ಪ,ಡಾ.ಪಿ.ಎಂ ಬಿರಾದಾರ, ಎಂ ಸದಾನಂದ,ಡಾ ಎಸ್.ಎ ಮಾಲಿ ಪಾಟೀಲ, ಮಣಿಲಾಲ ಶಹಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here