26th May 2020

ಶ್ರೀ ಶಾಂತ ರೆಡ್ಡಿ. ಪೆಟ್ ಶಿರೂರ್
ಪ್ರಧಾನ ಕಾರ್ಯದರ್ಶಿಗಳು.
ಅ.ಭಾ. ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಕಲಬುರಗಿ

ಕೊಲೆಗಾರರ ಬಂಧನಕ್ಕೆ ಆಗ್ರಹ.
ಮಹಾರಾಷ್ಟ್ರದ ನಾಂದೇಡ್ನಲ್ಲಿ ವೀರಶೈವ -ಲಿಂಗಾಯತ ಮಠದ ಶಿವಾಚಾರ್ಯರರಾದ ಶ್ರೀ ನಿರ್ವಾಣರುದ್ರ ಪಶುಪತಿನಾಥ್ ಸ್ವಾಮೀಜಿಯವರನ್ನು ಮಠದ ಆವರಣದಲ್ಲಿಯೇ ಘನ ಘೋರವಾಗಿ ಹತ್ಯೆಮಾಡಲಾಗಿದೆ. ಈ ಕೃತ್ಯವನ್ನು, ಅ. ಭಾ. ವಿ. ಮಹಾಸಭಾ ಕಲಬುರಗಿ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಾಂತ ರೆಡ್ಡಿ ಪೆಟ್ ಶಿರೂರ್ ಉಗ್ರವಾಗಿ ಖಂಡಿಸಿದ್ದಾರೆ.
ಕರ್ನಾಟಕ ಸರಕಾರದ ಗೃಹ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಯಿ ಯವರು, ಮಹಾರಾಷ್ಟ್ರದ ಸರಕಾರದ ಮೇಲೆ ಒತ್ತಡ ತಂದು ಕೊಲೆ ಗಾರರನ್ನು ತಕ್ಷಣವೇ ಬಂಧಿಸ, ವೀರಶೈವ ಮಠಗಳಿಗೆ ಮಠಾಧೀಶರಿಗೆ ಸೂಕ್ತ ಭದ್ರತೆಯನ್ನುನೀಡಬೇಕುಯೆಂದು ಅಗ್ರಹಿಸಿದ್ದಾರೆ. ಒಂದು ವೇಳೆ ನಿರ್ಲಕ್ಷ ವಹಿಸಿದರೆ ಪ್ರತಿಭಟನೆ ಮಾಡಬೇಕಾಗುತ್ತದೆಯೆಂದು ಪತ್ರಿಕಾ ಪ್ರಕಟಣೆ ಮೂಲಕ ಅಗ್ರಹಿಸಿದ್ದಾರೆ.