ಇಂದಿನಿoದ 5ರ ವರೆರಗೆ ರಂಗಾಯಣದಲ್ಲಿ ತ್ರಯಸ್ಥ ನಾಟಕ ಪ್ರದರ್ಶನ:ಪ್ರಭಾಕರ ಜೋಷಿ

0
838

ಕಲಬುರಗಿ ಜ. 1: ಕಲಬುರಗಿ ರಂಗಾಯಣದ ರೆಪರ್ಟರಿ ತಂಡದ ಎರಡನೆಯ ನಾಟಕ ತ್ರಯಸ್ಥ (ಲೇಖಕ: ಶ್ರೀನಿವಾಸ ವೈದ್ಯ.ನಿರ್ದೇಶನ: ವಿಶ್ವರಾಜ ಪಾಟೀಲ) ನಾಟಕದ ಪ್ರದರ್ಶನ ಇಂದಿನಿAದ ಜನವರಿ 5ರ ರವರೆಗೆ ರಂಗಾಯಣ ಆವರಣದಲ್ಲಿ ನಡೆಯಲಿದೆ.
ಪ್ರತಿ ದಿನ ಸಂಜೆ 6.30 ಕ್ಕೆ ನಾಟಕ ನಡೆಯುತ್ತಿದ್ದು ಕೇವಲ 50 ರಿಂದ 60 ಜನ ಪ್ರೇಕ್ಷಕರಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗುವದು ಎಂದು ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ನಿನ್ನೆ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ಈ ವಿಷಯ ತಿಳಿಸಿದ್ದು, ಅವರು ಮುಂದುವರಿದು ಜನವರಿ 5 ಮತ್ತು 6 ರಂದು ಪತ್ರಕರ್ತರು ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗಾಗಿ ನಾಟಕ ವಿಮರ್ಶಾ ಕಮ್ಮಟ ಏರ್ಪಡಿಸಲಾಗಿದೆ. ಜನವರಿ 10 ಮತ್ತು 11 ರಂದು ಮೈಸೂರಿನ ರಂಗಾಯಣದಲ್ಲಿ ಕಲಬುರಗಿ ರಂಗಾಯಣ ತಂಡದಿAದ ಶ್ರೀರಂಗರು ರಚಿಸಿದ ಸಿರಿ ಪುರಂದರ ಮತ್ತು ತ್ರಯಸ್ಥ ನಾಟಕ ಪ್ರದರ್ಶನ ನಡೆಯಲಿದೆ.
ಫೆಬ್ರವರಿ ಕೊನೆಯ ವಾರದಲ್ಲಿ ಕಲಬುರಗಿ ರಂಗಾಯಣದ ಆವರಣದಲ್ಲಿ ಒಂದು ವಾರದ ರಂಗ ಕಲ್ಯಾಣ (ಸ್ಥಳೀಯ ಕಲಾಪ್ರಕಾರದ ಪ್ರದರ್ಶನ) ಕಾರ್ಯಕ್ರಮ ಅಯೋಜಿಸಲಾಗಿದೆ. ಈಗ ಕಲಬುರಗಿ ರಂಗಾಯಣದಲ್ಲಿ 12 ಜನ ಪೂರ್ಣಾವಧಿಯ ಕಲಾವಿದರಿದ್ದು 3 ಜನ ತಂತ್ರಜ್ಞರಿದ್ದಾರೆ ಎಂದರು.
ವಾರ್ಷಿಕ ವರದಿ ಬಿಡುಗಡೆ:
ಕಲಬುರಗಿ ರಂಗಾಯಣದ ನಿರ್ದೇಶಕರಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಭಾಕರ ಜೋಶಿ ಅವರು ವಾರ್ಷಿಕ ವರದಿ ಬಿಡುಗಡೆ ಮಾಡಿದರು.
ಕೋವಿಡ್ ಲಾಕಡೌನ್ ಹಿನ್ನೆಲೆಯಲ್ಲಿ ಸುಮಾರು 6 ತಿಂಗಳು ರಂಗಾಯಣದ ರಂಗಚಟುವಟಿಕೆ ಸ್ಥಗಿತಗೊಂಡಿದ್ದವು ಆದರೂ ಕಳೆದ ವರ್ಷದ ಆರಂಭದಲ್ಲಿ ನೀಡಿದ ವಾಗ್ದಾನದಂತೆ ಶೇ 95 ಚಟುವಟಿಕೆಗಳು ಪೂರೈಸಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿನಾಥ ಜಿ ಎಲ್, ಅಮರನಾಥ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here