ನಗರದಲ್ಲಿ ವಿದ್ಯುತ್ ಕಣ್ಮುಚ್ಚಾಲೆ ಹೆಸರಗೆ ಮಾತ್ರ 1912 ಕರೆ ದಿನದ 24 ಗಂಟೆನೂ ಸ್ಥಗೀತ

0
29
Blackout, electricity off, energy crisis or power outage, concept image.

(ರಾಜು ದೇಶಮುಖ)
ಕಲಬುರಗಿ, ಮೇ. 18:ನಿರಂತರ ವಿದ್ಯುತ್ ಪೂರೈಕೆ ಮಾಡುವ ವಾಗ್ದಾಣ ನೀಡುತ್ತ ಬಂದ ಗುಲಬರ್ಗಾ ವಿದ್ಯುತ್‌ಛಕ್ತಿ ಸರಬರಾಜು ಕಂಪನಿ ಮಾಡುವುದು ಮಾತ್ರ ನಿರಂತರ ವಿದ್ಯುತ್ ದಿನಕ್ಕೆ 18 ರಿಂದ 20 ಗಂಟೆ ಮಾತ್ರ.
ಇಡೀ ಕಲಬುರಗಿ ನಗರವೇ ವಿದ್ಯುತ್‌ಛಕ್ತಿ ಕಣ್ಮುಚ್ಚಾಲೆಯಿಂದ ಬೆಂದು ಹೋಗಿದ್ದು, ಬೇಸಿಗೆ ಇರುವುದರಿಂದ ವಿದ್ಯುತ್ ದಿನಕ್ಕೆ 24 ಗಂಟೆನೂ ಅನಿವರ‍್ಯವಾಗಿದೆ.
ನಗರದ ಹಲವು ಪ್ರದೇಗಳಂತೂ ಅದರಲ್ಲೂ ಎಂ.ಬಿ. ನಗರ 1ನೆ ಹಂತ ಹಿಡಿದು ನಾಲ್ಕನೆ ಹಂತದ ವರೆಗೂ ಹಗಲು – ರಾತ್ರಿಯೆನ್ನದೇ ವಿದ್ಯುತ್ಛಕ್ತಿ ಕನಿಷ್ಟ 6 ರಿಂದ 8 ಗಂಟೆಗಳ ಕಾಲ ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಎಂ.ಬಿ. ನಗರ ಎಇಇ ಅವರನ್ನು ಕೇಳಿದರೆ ಲೈನ್ ಜಂಪ್ ಆಗಿದೆ ಎಲ್ಲಿ ಆಗಿದೆ ಅನ್ನುವುದು ಕನ್ಫರಮ್ ಆಗಿ ಹೇಳಲು ಸಾಧ್ಯವಿಲ್ಲ, ಬರುತ್ತೇ ಇನ್ನೆರಡು ಗಂಟೆ – ಒಂದು ಗಂಟೆ ಹದಿನೈದು ನಿಮಿಷ ಹೀಗೆ ಅವರ ಪರಸನಲ್ ಮೋಬೈಲ್ ನಂಬರ್‌ಗೆ ಕರೆ ಮಾಡಿದಾಗ ಬರುವ ಉತ್ತರಗಳು.
ಇದು ಒಂದೇ ಬಡಾವಣೆಯ ಸಮಸ್ಯೆಯಲ್ಲ, ಎಲ್ಲ ಬಡಾವಣೆಯ ಸವiಸ್ಯೆಗಳು ಒಂದೇ ಆಗಿವೆ. ನಿರಂತರ ವಿದ್ಯುತ್ ಕಡಿತ ಮಾಡಲು ಸಬಲ ಕಾರಣಗಳಿಲ್ಲ. ಏಕೆಂದರೆ ಇವರಿಗೆ ನಿರಂತರ ವಿದ್ಯುತ್ ಸರಬರಾಜ ಮಾಡಲಾಗುತ್ತಿಲ್ಲ.
ಸ್ವಲ್ಪ ಮಳೆ ಬಂದರೆ ಸಾಕು ಧಿಡೀರನೆ ವಿದ್ಯತ್ ಹೋಗುತ್ತೇ, ಕೇಳಿದರೆ ಅಲ್ಲಿ ಮರ ಬಿದ್ದಿದೆ, ಇಲ್ಲಿ ಮರ ಬಿದ್ದಿದೆ ಕ್ಲಿಯರ ಮಾಡಬೇಕು ಎನ್ನುವ ಆಯಾ ಬಡಾವಣೆಯ ಎಇಇ ಗಳ ಹಾರಿಕೆ ಉತ್ತರಗಳು ಜನ ಕೇಳಿ ಕೇಳಿ ಸುಸ್ತಾಗಿದ್ದಾರೆ.
ವಿದುತ್ಯ್ಗೆ ಸಂಬAಧಿಸಿದAತೆ ದೂರುಗಳಿದ್ದರೆ ಪರಿಹರಿಸಿಕೊಳ್ಳಲು ಸರಕಾರ 1912 ದೂರವಾಣಿ ಸಂಖ್ಯೆ ಕೊಟ್ಟಿದೆ, ಆದರೆ ಇದು ಕನಿಷ್ಟ ನೀವು ಬೇಕಾದರೆ ಪ್ರಯತ್ನಿಸಿ ಒಂದು ತಿಂಗಳು ಕಳೆದರೂ ಕೂಡ ಕರೆ ಹತ್ತುವುದಿಲ್ಲ. ಏನಾದರೂ ಸುಳ್ಳು – ಸತ್ಯ ಸಬಬೂಗಳು ಹೇಳಲಿ, ಆದರೆ ಈ ಕರೆ ಮಾಡಿದ ಕ್ಷಣ ಬಿಪ್ ಶಬ್ಧ ಬಂದು ಕಟ್ ಆಗುತ್ತೆ. ಇದು ಗಾದೆ ಹೇಳಿದಂತೆ ಆಟಕ್ಕುಂಟು ಲೆಕ್ಕಕಿಲ್ಲ ಎಂಬoತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ, ನಗರದಲ್ಲಿ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆಗೆ ಕಡಿವಾಣ ಹಾಕುವರೇ ನೋಡಬೇಕಾಗಿದೆ.
ಕಲಬುರಗಿಯಲ್ಲಿ ಜೇಸ್ಕಾಂಗೊಬ್ಬ ನಿರ್ದೇಶಕರನ್ನು ಸಹ ನೇಮಿಸಲಾಗಿದೆ ಅವರಾದರು ಈ ಬಗ್ಗೆ ಗಮನ ಹರಿಸಿ ಈ ಸಮಸ್ಯೆ ಪರಹರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯುವರೇ?

LEAVE A REPLY

Please enter your comment!
Please enter your name here