ಪಿಎಸ್‌ಐ ನೇಮಕಾತಿ ಹಗರಣ-ತನಿಖೆ ನಡೆಸಲು ಸಿಐಡಿಗೆ ಸಂಪೂರ್ಣ ಸ್ವತಂತ್ರ:ಗೃಹಸಚಿವ ಆರಗ ಜ್ಞಾನೇಂದ್ರ

0
2515

ಕಲಬುರಗಿ, ಮೇ 06:ಮುಂದಿನ ದಿನಗಳಲ್ಲಿ ಯಾವುದೇ ಪರೀಕ್ಷಾ ಅಕ್ರಮಗಳು ನಡೆಯಬಾರದು. ಆನಿಟ್ಟಿನಲ್ಲಿ ಈಗ ಪಿಎಸ್ ಐ ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆಯನ್ನು ಸಿಐಡಿ ನಡೆಸುತ್ತಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟವಾಗಿ ಹೇಳಿದರು.
ಕಲಬುರಗಿ ನಗರದ ಕೆಎಸ್ ಆರ್ ಪಿ 6ನೇ ಪಡೆಯ ಹೆಚ್ಚುವರಿ ತರಬೇತಿ ಶಾಲೆಯ ಮೈದಾನದಲ್ಲಿ
ವಿಶೇಷ ಮೀಸಲು ಪೊಲೀಸ್ ಕಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿಗಳ 4ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪೊಲೀಸ್ ತುಕಡಿಗಳಿಂದ ಶಸ್ತ್ರವಂದನೆ ಸ್ವೀಕರಿಸಿ ಕವಾಯಿತು ಪರಿವೀಕ್ಷಣೆ ಮಾಡಿ ಅವರು ಮಾತನಾಡುತ್ತಿದ್ದರು .
ಪಿಎಸ್ ಐ ನೇಮಕಾತಿ ಹಗರಣದಲ್ಲಿ ಯಾರೇ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ರೂ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಸಿಐಡಿಗೆ ಸಂಪೂರ್ಣ ಸ್ವತಂತ್ರ ಅಧಿಕಾರ ನೀಡಲಾಗಿದೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಗರಣದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆ ಕೊಡಿಸುವ ಮೂಲಕ ಯಾರೂ ಇಂತಹ ಅವ್ಯವಹಾರ ಮಾರ್ಗ ತುಳಿಯಬಾರದು ಎಂಬ ಸಂದೇಶ ನೀಡಲಾಗುವುದು ಎಂದರು.
ನೇಮಕಾತಿ ಪರೀಕ್ಷೆ ಹಗರಣ ನನ್ನ ಗಮನಕ್ಕೆ ಬಂದ ಕೇವಲ 2 ಗಂಟೆಯಲ್ಲಿ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಸಿಐಡಿ ತನಿಖೆಗೆ ಆದೇಶಿಸಿದ್ದೇನೆ.ಕೂಡಲೇ ಸಿಐಡಿ ತಂಡ ವಿಮಾನದ ಮೂಲಕ ಕಲಬುರಗಿಗೆ ಬಂದು ಚೌಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿತು ಎಂದು ಅವರು ತಿಳಿಸಿದರು.
ಕಲಬುರಗಿಯಲ್ಲಿ ನಿನ್ನೆ ಓರ್ವ ಡಿವೈಎಸ್ಪಿ ,ಓರ್ವ ಇನ್ಸ್ ಪೆಕ್ಟರ್ ಹಾಗೂ 6 ಮಂದಿ ಪೋಲಿಸರನ್ನು ನಾವು ಪ್ರಕರಣಕ್ಕೆ ಸಂಬAಧಿಸAತೆ ಒಟ್ಟು 47 ಮಂದಿಯನ್ನು ಬಂಧಿಸಿದ್ದೇವೆ ಎಂದು ಹೇಳಿದ ಗೃಹ ಸಚಿವರು ಈ ಬಂಧಿತ ಅಧಿಕಾರಿಗಳು ಹಾಗೂ ಪೊಲೀಸರು ಸಹ ಇದೇ ರೀತಿ ತರಬೇತಿ ಪಡೆದು ರಾಷ್ಟ್ರಧ್ವಜದ ಕೆಳಗೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಅದರೆ, ಈಗ ಹಗರಣದಲ್ಲಿ ಸಿಕ್ಕಿಕೊಂಡಿರುವುದು ಹೇಸಿಗೆ ತರುವಂತಿದೆ ಎಂದು ತೀವ್ರ ನೊಂದು ನುಡಿದರು.
ಕೆಲವರು ಮಾಡಿದ ಈ ಸಮಸ್ಯೆಯಿಂದ ಕಷ್ಟಪಟ್ಟು ಹಗಲು-ರಾತ್ರಿ ಓದಿದ ಅಭ್ಯರ್ಥಿಗಳು ಇಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ಅವರು ಮರುಕ ವ್ಯಕ್ತಪಡಿಸಿದರು.
ಕರ್ನಾಟಕ ಮೀಸಲು ಪೊಲೀಸ್ ಪಡೆಗೆ ತಮ್ಮ ಮಕ್ಕಳನ್ನು ಕಳಿಸಿದ ಪೋಷಕರಿಗೆ ಅವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ತರಬೇತಿ ವೃತ್ತಿ ಜೀವನದ ಬುತ್ತಿ,ಇಡುಗಂಟು ಇದ್ದಂತೆ’ ಅದನ್ನು ಸದ್ಬಳಕೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿತವಚನ ಹೇಳಿದರು.
ದೇಶದ ಸ್ವಾತಂತ್ರ‍್ಯ ಸಂಗ್ರಾಮದ ಸಂದರ್ಭದಲ್ಲಿನ ಕ್ರಾಂತಿಕಾರಿಗಳ ಚರಿತ್ರೆ ಬಗ್ಗೆ ಮೆಲುಕು ಹಾಕಿದ ಗೃಹಸಚಿವರು, ಜೀವ ಕೊಟ್ಟರೂ ಪರವಾಗಿಲ್ಲ ದೇಶಕ್ಕಾಗಿ ದುಡಿಯಬೇಕೆಂದು ಆತ್ಮಸ್ಥೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಅರ್.ಪಿ.ಯ ಅಪರ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅವರು, 8 ತುಕಡಿಗಳಲ್ಲಿನ ಒಟ್ಟು 209 ಪೊಲೀಸರಿಗೆ ವೃತ್ತಿ ಕುರಿತು ಎಲ್ಲ ಕೌಶಲ್ಯ ತರಬೇತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು. ಮೈ ಮತ್ತು ಮನಸ್ಸನ್ನು ಗಟ್ಟಿ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದ ಅವರು ಮುಂದಿನ ದಿನಗಳಲ್ಲಿ ಪಿಎಸ್ಸೈ ಸೇರಿದಂತೆ ಉನ್ನತ ಹುದ್ದೆಗಳಿಗೆ ಪರೀಕ್ಷೆ ಬರೆಯುವಾಗ ಈಗ ನಡೆದಿರುವ ಅಕ್ರಮದಂತೆ ಯಾರೂ ಅಡ್ಡದಾರಿ ಹಿಡಿಯಬಾರದು ಎಂದು ಹಿತನುಡಿ ಹೇಳಿದರು.
ಕಲಬುರ್ಗಿ ಕೆಎಸ್ ಆರ್ ಪಿ 6ನೇ ಪಡೆಯ ಹೆಚ್ಚುವರಿ ತರಬೇತಿ ಶಾಲೆಯ ಪ್ರಾಂಶುಪಾಲರು ಹಾಗೂ ಕಮಾಂಡೆAಟ್ ಬಸವರಾಜ ಜಿಳ್ಳೆ ಅವರು, ಕೆಎಸ್ ಆರ್ ಪಿ ನಾಲ್ಕನೇ ತಂಡದ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ವರದಿ ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಗೃಹ ಸಚಿವರು, 7ಮಂದಿ ಪ್ರಶಿಕ್ಷಣಾರ್ಥಿಗಳಿಗೆ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಾಧನೆ ತೋರಿದ ಪ್ರಥಮ’ದ್ವಿತೀಯ ಹಾಗೂ ತೃತೀಯ ಮತ್ತು ಸರ್ವೋತ್ತಮ ಪ್ರಶಸ್ತಿಗಳನ್ನು ಪ್ರದಾನ ಮಾಡಿ,ವಾರ್ತಾ ಪತ್ರಿಕೆ ಬಿಡುಗಡೆಗೆuಟಿಜeಜಿiಟಿeಜಳಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ ಜಿ ಪಾಟೀಲ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ರವಿ ಕುಮಾರ್, ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್, ಡಿಸಿಪಿ ಅಡೂರು ಶ್ರೀನಿವಾಸುಲು’ ಜೆಸ್ಕಾಂ ವಿಜಿಲೆನ್ಸ್ ಎಸ್ಪಿ ಸವಿತಾ ಹೂಗಾರ್, ವಿಜಯಪುರ ಐ.ಆರ್ ಬಿ ಕಮಾಂಡೆAಟ್ ಎನ್. ಬಿ ಮೆಳ್ಳಗಟ್ಟಿ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here