ಕಲಬುರಗಿ ಪಾಲಿಕೆ ಬಿಜೆಪಿ ತೆಕ್ಕೆಗೆ
ಮೇಯರ್ ಆಗಿ ಧರ್ಗಿ, ಪಿಸ್ತಿ ಉಪಮೇಯರ್

0
1984

ಕಲಬುರಗಿ, ಮಾ. 23: ಕಳೆದ 18 ತಿಂಗಳಿoದ ಚುನಾವಣೆ ನಡೆದು ಮಹಾನಗರಪಾಲಿಕೆಗೆ ಅಧಿಕಾರಿಗಳ ನಡೆದ ದರ್ಬಾರ ಇಂದಿಗೆ ಕೊನೆಗೊಂಡಿದ್ದು, ಈ ಮುಂಚೆಯೆ ಯೋಚಿಸಿ, ಯೋಜನೆ ರೂಪಿಸಿ ಕೊನೆಗೂ ಭಾರತೀಯ ಜನತಾ ಪಕ್ಷ ಕಲಬುರಗಿ ಮಹಾನಗರಪಾಲಿಕೆ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿಯ ಸದಸ್ಯ ವಿಶಾಲ್ ಧರ್ಗಿ ಅವರು ಮಹಾಪೌರರರಾಗಿ ಹಾಗೂ ಶಿವಾನಂದ ಪಿಸ್ತಿ ಉಪಮಹಾಪೌರರಾಗಿ ಆಯ್ಕೆಯಾಗಿದ್ದಾರೆ.
ವಿಶಾಲ್ ಧರ್ಗಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅವರ ಆಪ್ತರಲ್ಲೊಬ್ಬರಾಗಿದ್ದು, ಶಿವಾನಂದ ಪಿಸ್ತಿ ಕ್ರೇಡಲ್ ಅಧ್ಯಕ್ಷ ಕಲಬುರಗಿ ಉತ್ತರ ಮತಕ್ಷೇತ್ರದ ಆಕಾಂಕ್ಷಿ ಚಂದು ಪಾಟೀಲ್ ಅವರ ಆಪ್ತರಾಗಿದ್ದಾರೆ.
ಅಧಿಕೃತ ಘೋಷಣೆವೊಂದೆ ಬಾಕಿಯಿದ್ದು, ಚುನಾವಣೆ ಪ್ರಕ್ರಿಯೆ ಮುಗಿದಿದ್ದು, ಇನ್ನು ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಯ ಚುನಾವಣೆ ನಡೆಯುತ್ತಿದೆ.
ಕಲಬುರಗಿ ಮಹಾನಗರಪಾಲಿಕೆಯ ಒಟ್ಟು 55 ಸದಸ್ಯ ಬಲಹೊಂದಿದ್ದು, ಮೇಯರ್ ಚುನಾವಣೆಗೆ ವಿಧಾನ ಪರಿಷತ್ ಸದಸ್ಯರು, ವಿಧಾನಸಭೆ ಸದಸ್ಯರು, ರಾಜ್ಯ ಸಭೆ ಮತ್ತು ಲೋಕಸಭೆಯ ಸದಸ್ಯರು ಸೇರಿದಂತೆ ಅದರ ಸಂಖ್ಯೆ 68 ಆಗಿದ್ದು, ಮ್ಯಾಜಿಕ್ ನಂಬರ್ 35 ಆಗಿತ್ತು.
ಬಿಜೆಪಿ 22 ಸದಸ್ಯರು ಮತ್ತು ಒಂಬತ್ತು ಜನ ವಿಧಾನಪರಿಷತ್ ಸದಸ್ಯರು ಮೂರು ಜನ ವಿಧಾನಸಭೆ ಸದಸ್ಯರು ಓರ್ವ ಎಂ.ಪಿ. ಸೇರಿ 35 ಸದಸ್ಯ ಬಲ ಹೊಂದಿತ್ತು.

LEAVE A REPLY

Please enter your comment!
Please enter your name here