ಆಸೆಯೇ ದುಃಖಕ್ಕೆ ಮೂಲ
ಚಿಂಚನಸೂರ ಕಾಂಗೈ ಸೇರ್ಪಡೆ ಲಾಭ ಯಾರಿಗೆ?

0
1244

ಕಲಬುರಗಿ, ಮಾ. 21: ನಾಲ್ಕು ವರ್ಷಗಳ ಪಕ್ಷಾಂತರದಿAದ ಹೊರಬಂದು ಕೊನೆಗೂ ಮಾತ್ರ ಪಕ್ಷಕ್ಕೆ ಹಿಂದುರುಗುವ ಧೃಢ ನಿರ್ಧಾರದ ಕೈಗೊಂಡ ಬಾಬುರಾವ ಚಿಂಚನಸೂರ ಅವರಿಂದ ಕಾಂಗೈ ಲಾಭವೋ? ಅಥವಾ ಚಿಂಚನಸೂರರಿಗೆ ಲಾಭವೇ ನೋಡೋಣ ಬನ್ನಿ!
ಕಾಂಗೈ ಪಕ್ಷ ಸೇರುವುದರಿಂದ ಬಾಬುರಾವ ಅವರು ಶಾಸಕರಾಗುತ್ತಾರೋ? ಅಥವಾ ಮಂತ್ರಿಯಾಗುತ್ತಾರೋ ಎಂಬ ಬಗ್ಗೆ ಕಾಂಗೈ ವರಿಷ್ಠರು ತಲೆಕೆಡಸಿಕೊಂಡಿಲ್ಲ. ಅವರ ಪ್ಲಾö್ಯನ್ ಮಾತ್ರ ಖತರನಾಕ್ ಆಗಿದೆ.
ಚಿತ್ತಾಪೂರ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುವುದರಿಂದ ಕಾಂಗೈ ಲೆಕ್ಕಾಚಾರ ಇಲ್ಲಿಗೆ ಬಂದು ನಿಂತಿದೆ.
ಈ ಹಿಂದೆ ಬಿಜೆಪಿಗೆ ತೆಕ್ಕೆಗೆ ಸೇರಿದ ಬಾಬುರಾವ ಚಿಂಚನಸೂರ ಮತ್ತು ಮಾಲೀಕಯ್ಯ ಗುತ್ತೇದಾರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಪ್ರತಿಷ್ಞೆ ತೊಟ್ಟು ಕೆಲಸ ಮಾಡಿ ಶತಾಯ-ಗತಾಯವಾಗಿ ಕೊನೆಗೂ ಸೋಲಿಲ್ಲದ ಸರದಾರ ಎಂಬ ಹೆಸರನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾದರು.
ಮತ್ತೆ ಇತ್ತಿಚೇಗಷ್ಟೇ ಮತ್ತೇ ಏನಾದರೂ ಮಾಡಿ ಬರುವ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಂದೆ ಖರ್ಗೆ ಅವರಿಗೆ ಸೋಲಿಸಿದಂತೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರ ಸೋಲಿಗೆ ಪಣ ತೊಟ್ಟ ಬಾಬುರಾವ ಚಿಂಚನಸೂರ ಅವರನ್ನು ಹೇಗಾದರೂ ಮಾಡಿ ಮತ್ತೆ ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಹಳಷ್ಟು ಬಾರಿ ಪ್ರಯತ್ನ ನಡೆಸಿ, ಅಂತಿಮವಾಗಿ ಪ್ರಿಯಾಂಕ್ ಅವರ ನಿರ್ಧಾರಕ್ಕೆ ಬಿಟ್ಟಿದ್ದರು. ಕೊನೆಗೆ ಪ್ರಿಯಾಂಕ್ ಖರ್ಗೆ ಗ್ರೀನ್ ಸಿಗ್ನಲ್ ತೋರಿಸಿದ ಮೇಲೆಯೆ ಚಿಂಚನಸೂರ ಅವರನ್ನು ಪಕ್ಷಕ್ಕೆ ಸೇಳೆಯಲು ಮಾತುಕತೆ ನಡೆಸಿ, ಕೊನೆಗೆ ಯಶಸ್ವಿಯಾದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಬಾಬುರಾವ ಚಿಂಚನಸೂರ ಮತ್ತೇ ಈ ಬಾರಿ ಅದೇ ಕ್ಷೇತ್ರದಿಂದ ಕಣಕ್ಕಿಳಿಯಲು ಮನವಿ ಮಾಡಿಕೊಂಡಾಗಿ ಬಿಜೆಪಿ ಖಡಾಖಂಡಿತವಾಗಿ ಅಲ್ಲಗೆಳೆಯಿತು. ಇದರಿಂದ ಮತ್ತೇ ಚಿಂಚನಸೂರ ಮರಳಿ ಕಾಂಗೈಗೆ ಸೇರಲು ನಿರ್ಧರಿಸಿದರು.
ಕಾಂಗೈ ತೊರೆದು ಬಿಜೆಪಿ ಸೇರ್ಪಡೆಗೊಂ ಕಲ್ಯಾಣ ಕರ್ನಾಟಕದ ಕೋಲಿ ಸಮಾಜ ಅದ್ವೀತಿಯ ನಾಯಕರೆಂದು ಕರೆಸಿಕೊಳ್ಳುವ ಚಿಂಚನಸೂರ ಅವರ ಕ್ಷೇತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರ ಆಪ್ತರಲ್ಲಿ ಒಬ್ಬರಾದ ಶರಣಪ್ಪ ಮಾನೇಗಾರ ಕಳೆದ ಒಂದು ವರ್ಷದಿಂದ ಗುರುಮಿಠಕಲ್ ಕ್ಷೇತ್ರದಲ್ಲಿ ಹಗಲಿರುಳು ನಿರಂತರ ಶ್ರಮವಹಿಸಿ ಮನೆಮನೆಗೆ ಮತದಾರರ ಮನಮುಟ್ಟುವ ಪ್ರಯತ್ನ ಮಾಡಿದ್ದು, ಕೊನೆಗೂ ಕಾಂಗೈ ಅವರಿಗೆ ಸಹ ಕೈಗೊಟ್ಟು ಬಾಬುರಾವ ಚಿಂಚನಸೂರರಿಗೆ ಮಣೆ ಹಾಕಿದ್ದು ನೋಡಿದರೆ ಭಗವಾನ ಗೌತಮ ಬುದ್ಧರ ವಾಣಿಯಂತೆ ಆಸೆಯೇ ದುಃಖಕ್ಕೆ ಮೂಲ ಎಂಬAತಾಗಿದೆ.
ರಾಜಕೀಯ ಲೆಕ್ಕಾಚಾರ ಏನೇ ಇರಲಿ ಚಿತ್ತಾಪೂರದಲ್ಲಿ ಮಾತ್ರ ಪ್ರಿಯಾಂಕ್ ಖರ್ಗೆ ಗೆಲುವಿಗೆ ಬಾಧೆ ಬರದಂತೆ ಗೆಲುವಿನ ದಾಳ ಉದುರಿಸುವುದೇ ಕಾಂಗೈ ಪಂಡಿತರ ಅದರಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರ ಲೆಕ್ಕಾಚಾರವಾಗಿದೆ.
ಅಂತಿಮವಾಗಿ ಇಂದೇ ಅಂದರೆ ಮಂಗಳವಾರ ಕಾಂಗೈ ಸೇರಬೇಕಿದ್ದ ಚಿಂಚನಸೂರ ಅವರು ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಸಮ್ಮುಖದಲ್ಲಿಯೇ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here