ಮುoಬೈ, ಮೇ. 06: ಕ್ರಿಕೆಟ್‌ನಲ್ಲಿ ಅಸಾಧ್ಯವೆನ್ನವುದು ಏನು ಇಲ್ಲ ಹಾಗೂ ಕೊನೆಯ ಏಸೆತವರೆಗೂ ಪಂದ್ಯದಲ್ಲಿ ಯಾರು ಗೆಲ್ಲುವರು ಎಂಬುವುದಕ್ಕೆ ಇಂದಿನ ಪಂದ್ಯವೇ ಸಾಕ್ಷಿ. ಇದು ಇಂದು ಜರುಗಿದ 2022ನೇ ಐಪಿಎಲ್‌ನ 15 ಆವೃತ್ತಿಯ ಪಂದ್ಯದಲ್ಲಿ ಟಾಪ್ ಟೀಮ್ ಈ ಸಾಲಿನಲ್ಲೆ ಪದಾರ್ಪಣೆ ಮಾಡಿದ ಗುಜರಾತ್ ಟೈಟನ್ಸ್ ತಂಡವನ್ನು ಪವಾಡವೆಂಬAತೆ ರೋಹಿತ್ ಶರ್ಮಾ ನಾಂiÀiಕತ್ವದ ಮುಂಬೈ ಇಂಡಿಯನ್ಸ್ ತಂಡವು 5 ರನ್‌ಗಳಿಂದ ಜಯಗಳಿಸಿದೆ.
ಈ ವರ್ಷದ ಆವೃತ್ತಿಯಲ್ಲೇ ಪದಾರ್ಪಣೆ ಮಾಡಿದ ಗುಜರಾತ್ ಟೈಟನ್ಸ್ ತಂಡವು ಗೆಲುವಿನ ನಗೆ ಬೀರಲು ಅದರ ಹಿಂದಿನ ಪಂದ್ಯಗಳ ಗೆಲುವಿನ ಆತ್ಮವಿಶ್ವಾಸವೇ ಇಂದಿನ ಸೋಲಿಗೆ ಕಾರಣವಾಗಿದೆ.
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡು ಗೆಲ್ಲಲು 178 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಟೈಟನ್ಸ್ ತಂಡಕ್ಕೆ ಓಪನರ್‌ಗಳಾದ ಶುಭಮನ್ ಗಿಲ್ (52) ಮತ್ತು ವೃದ್ಧಿಮಾನ್ ಸಹಾ (55) ಮೊದಲ ವಿಕೆಟ್‌ಗೆ 106 ರನ್‌ಗಳ ಜೊತೆಯಾಟ ಕಟ್ಟಿ ತಂಡಕ್ಕೆ ಸುಲಭದ ಗೆಲುವಿಗೆ ಬೇಕಿದ್ದ ಅಡಿಪಾಯ ಹಾಕಿದ್ದರು. ಆದರೆ, ಕೊನೇ ಓವರ್‌ನಲ್ಲಿ ಕೇವಲ 9 ರನ್ ಬೇಕಿದ್ದ ಸಂದರ್ಭದಲ್ಲಿ ಒತ್ತಡ ನಿಭಾಯಿಸಲು ವಿಫಲವಾದ ಟೈಟನ್ಸ್ 5 ರನ್‌ಗಳ ಅಂತರದಲ್ಲಿ ಸೋಲಿಗೆ ಶರಣಾಯಿತು.
ಕೊನೇ ಓವರ್ ಎಸೆದ ಡೇನಿಯೆಲ್ ಸ್ಯಾಮ್ಸ್ ಕೇವಲ 3 ರನ್ ಮಾತ್ರವೇ ಕೊಟ್ಟರು. ಇದಕ್ಕೂ ಮುನ್ನ 19ನೇ ಓವರ್‌ನಲ್ಲೂ ಜಸ್‌ಪ್ರೀತ್ ಬುಮ್ರಾ, ಎದುರಾಳಿ ಬ್ಯಾಟರ್‌ಗಳ ಅಬ್ಬರಕ್ಕೆ ಬ್ರೇಕ್ ಹಾಕಿದ್ದರು. 2 ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಮುರುಗನ್ ಅಶ್ವಿನ್ ಮುಂಬೈ ತಂಡದ ಪರ ಯಶಸ್ವಿ ಬೌಲರ್ ಎನಿಸಿದರು. ಇನ್ನು ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ತೆವಾಟಿಯ ರನ್‌ಔಟ್ ಆಗಿದ್ದು, ಮುಂಬೈ ತಂಡಕ್ಕೆ ಜಯದ ಕದ ತೆರೆಯಿತು.