ನೀರು ತುಂಬಿದ ಕಲ್ಲುಗಣಿಯಲ್ಲಿ ಬಿದ್ದು 8 ವರ್ಷದ ಬಾಲಕ ಸಾವು

0
895

ಕಲಬುರಗಿ, ಆಗಸ್ಟ. 20: ಇತ್ತಿಚೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ನೀರು ತುಂಬಿದ ಕಲ್ಲು ಗಣಿಯಲ್ಲಿ ಕಾಲು ಜಾರಿ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ ಘಟನೆ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದ ಬಸವನಗುಡಿ ಬಡಾವಣೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮಂಗೇಶ ಮಿಥುನ್ ಜಾಧವ ಎಂಬ ಎಂಟು ವರ್ಷದ ಬಾಲಕ ತಂದೆಯೊAದಿಗೆ ಗಣಿಗೆ ಹೋದಾಗ ಈ ಘಟನೆ ಸಂಭವಿಸಿದೆ.
ಮಳೆ ನೀರಿನಲ್ಲಿ ಮುಳುಗಿದ್ದ ಹಾಸುಗಲ್ಲು ಕತ್ತರಿಸುವ ವಿದ್ಯುತ್ ಕೇಬಲ್ ಎಳೆಯುವಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಗಣಿಗಾರಿಕೆ ಮಾಡಿದ ಬಳಿಕ ಅದನ್ನು ಮುಚ್ಚುವ ಕೆಲಸ ವಾಗದೇ ಇರುವುದಿರಂದ ಇಂತಹ ಘಟನೆಗಳು ನಡೆಯುತ್ತಿವೆ, ಪತ್ರಿ ವರ್ಷ ಬರುವ ಮಳೆಯಿಂದಾಗಿ ತುಂಬಿದ ತಗ್ಗುಗಳಲ್ಲಿ ಸಾವು ಸಂಭವಿಸಿದ್ದು ಇದು ಮೊದಲನೇಯದೆನಲ್ಲ, ಈ ಹಿಂದೆ ಹಲವಾರು ಬಾರಿ ಇಂತಹ ಘಟನೆಗಳು ಜರುಗಿವೆ.
ಗುತ್ತಿಗೇದಾರರು ಸಣ್ಣ ಬಾಲಕರನ್ನು ಗಣಿಗಾರಿಕೆ ಕೆಲಸಕ್ಕೆ ಬಳಸಿಕೊಳ್ಳದಿದ್ದರೂ ಕೂಡ ಬಾಲಕರಿಗೆ ಪ್ರವೇಶ ನಿಷಿಧ ಮಾಡದೇ ಇರುವುದು ಅಲ್ಲದೇ ವಯಸ್ಕರು ಕೂಡಾ ಕಲ್ಲು ಗಣಿಯಲ್ಲಿ ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಅಪಾಯಾಕಾರಿಯಾಗಿದೆ.
ಇಂತಹ ಘಟನೆಗಳಿಗೆ ಯಾರು ಹೊಣೆ? ಕಲ್ಲು ಗಣಿ ಮಾಡಲಿಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕಿದೆ.
ಜಿಲ್ಲಾಡಳಿತ ಈ ಬಗ್ಗೆ ತನಿಖೆ ನಡೆಸಿ, ಕೂಡಲೇ ಗಣಿಗಾರಿಕೆ ಮಾಡಿದ ಕಲ್ಲುಗಣಿಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳಬೇಕು.
ಮೃತ ಬಾಲಕ ದೇಹವನ್ನು ವಾಡಿ ಸರಕಾರಿ ಆಸ್ಪತ್ರೆಯಲ್ಲಿ ಪಂಚನಾಮೆ ಮಾಡಿ ಬಳಿಕ ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Total Page Visits: 959 - Today Page Visits: 1

LEAVE A REPLY

Please enter your comment!
Please enter your name here