ಸಾರ್ವಜನಿಕರಿಗೆ ಬುದ್ಧಿ ಹೇಳಬೇಕಾದ ನಾಯಕರೇ ಸಾಮಾಜಿಕ ಅಂತರ ಮರೆತರೆ ಹೇಗೆ?

0
888
ಸಾಮಾಜಿಕ ಅಂತರವಿಲ್ಲದೇ ಪ್ರತಿಭಟನೆಯಲ್ಲಿ ನಿರತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು
ಇನ್ನೊಂದು ಚಿತ್ರದಲ್ಲಿ ಇಂದು ತೆರೆವುಗೊಂಡ ಸಿಮಿಲಾಕ್‌ಡೌನ್‌ನಿಂದ ಸಾರ್ವಜನಿರಕರು ಭರ್ಜರಿ ಖರೀದಿಯಲ್ಲಿ ಸಾಮಾಜಿಕ ಅಂತರವಿಲ್ಲದೇ ಜಾತ್ರೆಯಲ್ಲಿ ಪಾಲ್ಗೊಂಡAತೆ ಓಡಾಡುತ್ತಿರುವ ದೃಶ್ಯ.

ಕಲಬುರಗಿ ಜೂನ್. 14:ಈ ಶತಮಾನದ ಮಹಾಮಾರಿ ಕೊರೊನಾದಿಂದ ಇಡೀ ವಿಶ್ವವೇ ತಲ್ಲಣಗೊಂಡಿದ್ದು, ಕೊರೊನಾ ಹೊಡೆದೊಡಿಸಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಬದು ತಾವೇ ಸಾಮಾಜಿಕ ಅಂತರ ಮರೆತರೆ ಹೇಗೇ?
ಇದು ನಡೆದಿರುವುದು ಇಲ್ಲಿಯ ಕಾಂಗ್ರೆಸ್ ಕಚೇರಿಯಿಂದ ಹಮ್ಮಿಕೊಳ್ಳಲಾದ ಸೈಕಲ್ ಜಾಥಾದಲ್ಲಿ, ಶಾಸಕರಾದ ಪ್ರಿಯಾಂಕ್ ಖರ್ಗೆ, ಅಜಯಸಿಂಗ್, ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಮಾಜಿ ಶಾಸಕ ಬಿ.ಆರ್. ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಂ ಪ್ರಭು ಪಾಟೀಲ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಜಗದೇವ ಗುತ್ತೇದಾ ಸೇರಿದಂತೆ ಸಮಾರು ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಪ್ರತಿಭಟನೆ ನಡೆಸಿದ್ದು ನೋಡಿದರೆ ಇವರುಗಳಿಗೆ ಕೊರೊನಾ ಬಗ್ಗೆ ಜಾಗೃತಿ ಕಾಳಜಿಕ್ಕಿಂತ ಪ್ರತಿಭಟನೆಯೆ ಮುಖ್ಯವಾಗಿತ್ತು ಎಂಬAತಾಗಿದೆ.
ಬೆಳಿಗ್ಗೆ 11ರ ಸುಮಾರಿಗೆ ನಗರದ ಕಾಂಗ್ರೆಸ್ ಕಚೇರಿಯ ಗಾಂಧಿ ಭವನದಿಂದ ಸ್ಟೇಷನ್ ರಸ್ತೆಯಲ್ಲಿರುವ ಲಾಹೋಟಿ ಪೆಟ್ರೋಲ್ ಬಂಕ್ ಎದುರಿಗೆ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧದ ತೈಲ ಬೆಲೆ ಏರಿಕೆಯ ಐದನೇ ದಿನದ ಪ್ರತಿಭಟನೆಯ ಸಾಮಾಜಿಕ ಅಂತರ ಮರೆತ ಪ್ರತಿಭಟನೆಯಾಗಿತ್ತು.
ಯುವ ಕಾಂಗ್ರೆಸ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದ ಈ ಪ್ರತಿಭಟನೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಮುಖಕ್ಕೆ ಮಾಸ್ಕೇ ಧರಿಸದೇ ಭಾಗವಹಿಸಿರುವುದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

LEAVE A REPLY

Please enter your comment!
Please enter your name here