ಅನಾರೋಗ್ಯದಿಂದ ಮಾಜಿ ಸಚಿವ ಸಿ. ಎಂ. ಉದಾಸಿ ನಿಧನ

0
774

ಬೆಂಗಳೂರು, ಜೂನ್ 8:ಕರ್ನಾಟಕದ ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಸಿ.ಎಂ. ಉದಾಸಿ ಅವರು ಅನಾರೋಗ್ಯದ ಕಾರಣದಿಂದಾಗಿ ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು. ಮಗಳು ಮತ್ತು ಮಗ ಶಾಸಕ ಶಿವಕುಮಾರ ಉದಾಸಿ ಇದ್ದಾರೆ. ಕುಟುಂಬ ಮೂಲಗಳ ಪ್ರಕಾರ ಬುಧವಾರ ಅವರ ಸ್ಥಳೀಯ ಗ್ರಾಮವಾದ ಹಾನಗಲ್‌ನಲ್ಲಿ ಕೊನೆಯ ವಿಧಿಗಳನ್ನು ನಡೆಸಲಾಗುವುದು.
ಮೃತರು ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಬಗ್ಗೆ ಮೂಲಗಳು ಬಹಿರಂಗಪಡಿಸಿವೆ ಮತ್ತು ಇತ್ತೀಚೆಗೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಧ್ಯಾಹ್ನ ಅವರು ಕೊ£ಯುಸಿರೆಳೆದರು.
ಉದಾಸಿ 1983 ರಲ್ಲಿ ಕರ್ನಾಟಕ ವಿಧಾನಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದರು. ನಂತರ 1985 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿ ಅವರು ದಿವಂಗತ ರಾಮಕೃಷ್ಣ ಹೆಗಡೆ ಸಚಿವಾಲಯದಲ್ಲಿ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ ಅವರು ಅವರು ಬಿಜೆಪಿಗೆ ಸೇರ್ಪಡೆಯಾಗಿ 2004 ರಲ್ಲಿ ಪುನಃ ಶಾಸಕರಾಗಿ ಆಯ್ಕೆಯಾದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ, ಗೃಹ ಸಚಿವ ಬಸವರಾಝ ಬೊಮ್ಮಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Total Page Visits: 894 - Today Page Visits: 1

LEAVE A REPLY

Please enter your comment!
Please enter your name here