ಕಲಬುರಗಿಯಲ್ಲಿ ಬ್ಯ್ಲಾಕ್ ಫಂಗಸ್ ಪ್ರಕರಣ ಪತ್ತೆ ಎರಡು ಕಣ್ಣು, ಕೈ, ಕಾಲು ಕಳೆದುಕೊಂಡು ವ್ಯಕ್ತಿ

0
8518

(ಮನೀಷ ನ್ಯೂಜ್)
ಕಲಬುರಗಿ, ಮೇ. 14: ಕೊರೊನಾದಿಂದ ಪಾರಾಗಿ ನೆಗೆಟಿವ್ ವರದಿ ಬಂದರೂ ಸಹ ಬೆಂಬಡದ ಭೂತದಂತೆ ರಾಜ್ಯದಲ್ಲ ಹೊಸದಾಗಿ ವಕ್ಕರಿಸುವ ಬ್ಲಾö್ಯಕ್ ಫಂಗಸ್ ಅಂದರೆ ಮ್ಯೂಕೋರ್ಮೈಕೋಸಿಸ್ ಪ್ರಕರಣ ಕಲಬುರಗಿ ನಗರದ ರೋಗಿಯೊಬ್ಬರಲ್ಲಿ ಪತ್ತೆಯಾಗಿದೆ. ಈ ಬ್ಲಾö್ಯಕ್ ಫಂಗಸ್ ರೋಗ ಬರುವುದು ಮನುಷ್ಯನ ಮೂಗಿನ ಮೂಲಕ ನರಗಳಲ್ಲಿ ಸೇರಿ ಅನಂತರ ಅದು ಕಣ್ಣು, ಮೆದುಳು, ಕಿಡ್ನಿಗಳಿಗೆ ಹರಡಿ ರೋಗಿ ಅಂಧ ವಾಗುವುದರ ಜೊತೆಗೆ ಸಾವು ನಿಶ್ಚಿತ ಎಂಬoತಾಗಿದೆ.
ಇoತಹದೊoದು ಪ್ರಕರಣ ನಗರದ ಶಹಾಬಾದ ರಸ್ತೆಯ ಬಡಾವಣೆಯ ನಿವಾಸಿಯೋರ್ವರಿಗೆ ತಗುಲಿದ್ದು, ಅವರು ಈ ಬ್ಲಾö್ಯಕ್ ಫಂಗಸ್‌ನಿAದಾಗಿ ಎರಡು ಕಣ್ಣುಗಳು, ಒಂದು ಕಾಲು ಮತ್ತು ಕೈಯನ್ನು ಪಾಶ್ವರ್ವಾಯುವದಿಂದ ಕಳೆದುಕೊಂಡು ಈ ಜೀವನ್ಮರಣದ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡಾತ್ತಿದ್ದಾರೆ.
ನಗರದ ಹೊರ ವಲಯದ ಮಿರ್ಚಿ ಗೋದಾಮ ಹತ್ತಿರ ಕ್ಯೂಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಸ್ಪತ್ರೆಯ ವೈದ್ಯರು ಕೂಡಾ ಕೈ ಮೇಲಿತ್ತೇದ್ದು, ಇವರನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು ನೋಡಿದರೆ ಈ ರೋಗ ಎಷ್ಟು ಭಯಾನಕ ಎಂಬುದು.
ಮೊದಲು ಇವರ ಒಂದು ಕಣ್ಣು ಹೋಗಿದ್ದು ನಂತರ ಅವರನ್ನು ನೇತ್ರ ತಜ್ಞರ ಹತಿರ ತೋರಿಸಿದಾಗ, ಅವರು 6 ಚುಚ್ಚುಮದ್ದು ಕೊಟ್ಟಿದ್ದರೂ ಕೂಡಾ ಎರಡನೇ ಕಣ್ಣು ಕೂಡಾ ಉಳಿಯಲಿಲ್ಲ. ಅವರನ್ನು ಇದರ ಬಗ್ಗೆ ವಿಚಾರಿಸಿದಾಗ ಇಂತಹ ಪ್ರಕರಣ ನಾನು ನೋಡಿದ್ದು ಇದೇ ನನ್ನ ವೈದ್ಯಕೀಯ ಜೀವನÀದಲ್ಲಿ ಮೊದಲು ಎಂದು ಚಿಕಿತವಾಗಿ ಹೇಳಿದ್ದಾರೆ.
ಕಳೆದ 20 ವರ್ಷಗಳಿಂದ ಪೋಲಿಸ್ ಇಲಾಖೆಯಲ್ಲಿ ಅದರಲ್ಲೂ ಈ ಮುಂಚೆ ಟ್ರಾಫಿಕ್ ಠಾಣೆ 1ರಲ್ಲಿ ಪೇದೆಯಾಗಿ ಕೆಲಸಮಾಡುತ್ತಿದ್ದ 45 ವರ್ಷದ ಮಲ್ಲಿಕಾರ್ಜುನ ಬೆಳಗುಂಪಿ ಅವರು ಈ ಪ್ರಸ್ತುತ ಅಶೋಕ ನಗರ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಕಳೆದ ಒಂದು ತಿಂಗಳ ಹಿಂದೆ ಕೊರೊನಾ ಪಾಸೀಟಿವ್ ಆಗಿ ನಂತರ ಆಸ್ಪತ್ರೆಗೆ ಸೇರಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಿಕೊಡಲಾಗಿತ್ತು, ನಂತರ 15 ದಿನಗಳಲ್ಲಿ ಇತ್ತಿಚೆಗೆ ರಾಜ್ಯದಲ್ಲಿ ಕಾಣಿಸಿಕೊಂಡ ಬ್ಲಾö್ಯಕ್ ಫಂಗಸ್ ಅಂಟಿಕೊoಡಿತ್ತು.
ಆದರೆ ಇವರ ಮನೆಯಲ್ಲಿ ಇವರ ಪತ್ನಿ ಮತ್ತು ತಮ್ಮ ಇರುವುದು, ಅವರ ತಾಯಿಗೂ ಕೂಡಾ ಕೊರೊನಾ ರೋಗದಿಂದ ಆಸ್ಪತ್ರೆ ಸೇರಿದ್ದಾರೆ. ಈಗ ಇವರ ಪರಿಸ್ಥಿತಿ ಇಂದು, ನಾಳೆಯೋ ಎಂಬoತಾಗಿದೆ.

LEAVE A REPLY

Please enter your comment!
Please enter your name here