ವ್ಯಕ್ತಿ ನೋಡಿ ಮತ ಹಾಕಬೇಡಿ ಸಂಸ್ಥೆಯ ಏಳಿಗೆಗೆ ಮತಹಾಕಿ:ಡಾ.ಜವಳಿ

0
944

ಕಲಬುರಗಿ, ಫೆ. 22: ವಯಕ್ತಿಕ ಕಾರಣಕ್ಕಾಗಿ, ವ್ಯಕ್ತಿ ನೋಡಿ ಮತ ಹಾಕದೇ, ಸಂಸ್ಥೆಯ ಅಭಿವೃದ್ದಿಗಾಗಿ ಮತ ಹಾಕಿ ಎಂದು ಮಾಜಿ ಸಂಸದ ಡಾ. ಬಿ. ಜವಳಿ ಅವರು ಇಂದು ಕರೆ ನೀಡಿದರು.
ಅವರು ಸೋಮವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ. ಭೀಮಾಶಂಕರ ಬಿಲಗುಂದಿ ಪೆನಾಲ್‌ನ ಪ್ರಣಾಳಿಕೆ ಬಿಡುಗಡೆ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಬರುವ ಫೆ. 27ರಂದು ನಡೆಯಲಿರುವ ಇಲ್ಲಿಯ ಪ್ರತಿಶಿಷ್ಟ ಶಿಕ್ಷಣ ಸಂಸ್ಥೆಯಾದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡಾ. ಬಿಲಗುಂದಿ ಅವರ ಪೆನಾಲ್‌ಗೆ ಮತ ಹಾಕುವುದು ಅಭಿವೃದ್ಧಿಪರ ಮತ ಹಾಕುವುದು ಸಮಾನ ಎಂದರು.
1958ರಲ್ಲಿ ರೈತರಿಂದ ರೈತರಿಗಾಗಿ ದಿ. ಮಹಾದೇವಪ್ಪ ರಾಂಪುರೆ ಅವರು ಸ್ಥಾಪಿಸಿರುವ ಈ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿ ಯಾಗಿರುವುದು ಡಾ. ಭೀಮಾಶಂಕರ ಬಿಲಗುಂದಿ ಅವರ ಅಧ್ಯಕ್ಷರಾದ ಮೇಲೆ ಎಂದು ಹೇಳಲು ಸಂಸತವೆನಿಸುತ್ತದೆ ಎಂದ ಅವರು ಈ ಹಿಂದೆ ಈ ಸಂಸ್ಥೆಗೆ ಇಷ್ಟೋಂದು ಪೈಪೋಟಿ ಇರುತ್ತಿರಲಿಲ್ಲ, ಇಂದು ಸಂಸ್ಥೆಯ ಅಧ್ಯಕ್ಷ ಗಾದಿಯ ಮೇಲೆ ಎಷ್ಟು ಜನರ ಕಣ್ಣು ಬಿದ್ದಿದೆ ಎಂಬುದು ತಮಗೆಲ್ಲ ಗೊತ್ತಿರುವ ವಿಷಯವಾಗಿದೆ, ಪ್ರಸ್ತುತ ಅಧ್ಯಕ್ಷರಾಗಿರುವ ಬಿಲಗುಂದಿ ಅವರು ಸಂಸ್ಥೆಗಾಗಿ ಹಣ ಇಡದೇ ಸಾಲ ಮಾಡಿದ್ದು ಆಗಿದ್ದರೆ ಇಷ್ಟೊಂದು ಪೈಪೋಟಿ ಇರುತ್ತಿಲ್ಲ ಎನಿಸುತ್ತಿದೆ ಎಂದರು.
ಈಗಾಗಲೇ ಈ ಚುನಾವಣೆಯ ಮತದಾನ ಮುಂದಿಯಿದ್ದರೂ ಕೂಡಾ ಈಗಲೇ ಡಾ. ಬಿಲಗುಂದಿ ಅವರ ಪೆನಾಲ್ ಗೆಲುವು ಸಾಧಿಸಿದೆ ಎಂಬುದು ನೀವು ಇಷ್ಟು ಸಂಖ್ಯೆಯಲ್ಲಿ ಸೇರಿದ್ದಕ್ಕೆ ಸಾಕ್ಷಿಯಾಗಿದೆ ಎಂದು ಜವಳಿ ಅವರು ಭವಿಷ್ಯ ನುಡಿದರು.
ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಬಿ. ಜಿ. ಪಾಟೀಲ್ ಅವರು ಡಾ. ಭೀಮಾಶಂಕರ ಬಿಲಗುಂದಿ ಅವರ ಆಡಳಿತಾವಧಿಯಲ್ಲಿ ಸಾಧಿಸಿದ ಕಾರ್ಯಗಳೆ ಅವರ ಪೆನಾಲ್‌ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.
ಹೆಚ್.ಕೆ.ಇ. ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅವರು ಮಾತನಾಡುತ್ತ, ನಾನು ಕಳೆದ ಚುನಾವಣೆಯಲ್ಲಿ ಇದೇ ಸ್ಥಳದ ಸಮಾರಂಭವೊAದರಲ್ಲಿ ಘೋಷಣೆ ಮಾಡಿದ ಚುನಾವಣಾ ಪ್ರಣಾಳಿಕೆಗಳಲ್ಲಿ ಶೇ. 80ರಷ್ಟು ಈಡೇರಿಸಿದ ತೃಪ್ತಿ ನನಗಿದೆ ಎಂದ ಅವರು ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಒಂದು ವರ್ಷ ವ್ಯರ್ಥವಾಯಿತು. ಈ ಹಿನ್ನೆಲೆಯಲ್ಲಿ ನಾನು ನೀಡಿದ ಹಲವಾರು ಚುನಾವಣಾ ಪ್ರಣಾಳಿಕೆಗಳು ಈಡೇರಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಮತ್ತೋಮ್ಮೆ ನನ್ನ ನನ್ನ ಪೆನಾಲ್‌ನ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಆಶೀರ್ವದಿಸಿದರೆ, ಹಿಂದಿನ ಮತ್ತು ಇಂದು ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡಿದ ಭರವಸೆ ಗಳನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.
ಆರAಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ. ಶರಣಬಸಪ್ಪ ಕಾಮರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ತಂದೆಯವರ ಹನಿಗವನ್ನುವೊಂದನ್ನು ಓದುವ ಮೂಲಕ ಡಾ. ಭೀಮಾಶಂಕರ ಬಿಲಗುಂದಿ ಅವರ ಗುಣಮಾಡುವದರೊಂದಿಗೆ ಅವರು ಕೈಗೊಂಡ ಹಲವಾರು ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.ಕೊನೆಯಲ್ಲಿ ನಿತೀನ ಬಿ. ಜವಳಿ ಅವರು ವಂದನಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ 2021ರ ಡಾ. ಭೀಮಾಶಂಕರ ಬಿಲಗುಂದಿ ಅವರ ಪೆನಾಲ್‌ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.
ವೇದಿಕೆಯ ಮೇಲೆ ಡಾ. ಶಿವಾನಂದ ದೇವರಮನಿ , ವಿಜಯಕುಮಾರ ದೇಶಮುಖ, ಡಾ.ಶರಣಬಸಪ್ಪ ಕಾಮರೆಡ್ಡಿ, ನೀತಿನ ಜವಳಿ, ಅನೀಲಕುಮಾರ ಮರಗೋಳಿ, ಸತೀಶ ಹಡಗಲಿಮಠ, ಡಾ.ಜಗನ್ನಾಥ ಬಿಜಾಪೂರ, ಡಾ.ಕೈಲಾಸ ಪಾಟೀಲ, ಸೋಮನಾಥ ನಿಗುಡಗ್ಗಿ, ಆನಂದ ದಂಡೋತಿ, ಬಸವರಾಜ ಖಂಡೆರಾವ, ಸುರೇಶ ಬುಲಬುಲೆ, ಗಂಗಾಧರ ಎಲಿ, ಸಂಗಮೇಶ್ವರ್ ಗಂಗು, ಚಂದು ಪಾಟೀಲ ಇದ್ದರು.

LEAVE A REPLY

Please enter your comment!
Please enter your name here