150 ಅಂಕಗಳ ಪ್ರಶ್ನೆ ಪತ್ರಿಕೆ ಬಿಡಿಸಲು ಎಷ್ಟು ಸಮಯ ಬೇಕು? ಇಲ್ಲಿ ಕೇಳಿ…. ಕೇವಲ 90 ನಿಮೀಷ ಇದೇಂಥ ಪ್ರಶ್ನೆ ಪತ್ರಿಕೆ?

0
980

(ನಮ್ಮ ಪ್ರತಿನಿಧಿಯಿಂದ)
ಕಲಬುರಗಿ, ಜ. 23: 100 ಅಂಕಗಳ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾದರೆ ಕನಿಷ್ಟ ಪಕ್ಷ 3 ಗಂಟೆ ಸಮಯ ಸರಕಾರ ಈ ಹಿಂದೆ ಪ್ರಶ್ನೆ ಪತ್ರಿಕೆಯಲ್ಲಿ ನಮೂದಿಸಲಾಗಿತ್ತು, ಆದರೆ ಇಂದು ನಡೆದ ಕನ್ನಡ ಪರೀಕ್ಷೆಯಲ್ಲಿ 150 ಅಂಕಗಳಿಗೆ ಕೇವಲ 90 ನಿಮೀಷ ಸಮಯ ನೀಡಿದ್ದು ಅಲ್ಲದೇ ಪ್ರಶ್ನೆ ಪತ್ರಿಕೆ ನೋಡಿದರೆ ಎಂತಹವರು ದಂಗಾಬೇಕು.
ಕೆಪಿಎಸ್‌ಸಿಯಲ್ಲಿ ಕಡ್ಡಾಯ ಕನ್ನಡ ಪರೀಕ್ಷೆ ಅನುಗುಣವಾಗಿ ಎಫ್‌ಡಿಎ ಹುದ್ದೆಗೆ ಅರ್ಹರಾಗಬೇಕಾದರೆ ಇಂದಿನ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ನೇಮಕಾತಿಯಲ್ಲಿನ ಒಂದು ಪ್ರಮುಖ ಘಟ.
ಪಾಸೇಜ್ 25 ಅಂಕಗಳನ್ನು ಒಂದು ಪುಟಕ್ಕೆ ಕಡಿಮೆ ಇಲ್ಲದಂತೆ ಉತ್ತರಿಸಬೇಕು, ಅಲ್ಲದೇ ಪ್ರಿಸಿಸ್ ಬರವಣೆಗೆ ಕೂಡಾ 25 ಅಂಕಗಳನ್ನು ನಿಗದಿ ಪಡಿಸಲಾಗಿದ್ದು, ಇದು 3 ಪುಟಗಳಿಗೆ ಕಡಿಮೆಯಿಲ್ಲದಂತೆ ಬರೆಯಬೇಕು, ಹೀಗೆ 150 ಅಂಕಗಳ ಪ್ರಶ್ನೆ ಪತ್ರಿಕೆ ಬರೆಯಲು ಕನ್ನಡ ಕಲಿಯದ ಅನ್ನ ಭಾಷಿಕರಿಗೆ (ಯಾವುದೇ ಪೂರ್ವ ಪದವಿಯಲ್ಲಿ 100ಕ್ಕೆ 100 ಅಂಕ ಪಡೆದವರು) ಕೂಡಾ ಈ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕು.
ಇನ್ನು ಕನ್ನಡ ತರಗತಿಯ ವಿದ್ಯಾರ್ಥಿಗಳು ಕೂಡಾ ಒಂದರಿAದ 7ನೇ ತರಗತಿಯವ ರೆಗೆ ಕನ್ನಡದಲ್ಲಿಯೇ ವ್ಯಾಸಾಂಗ ಮಾಡಿ, ಮುಂದೆ 8ನೇ ತರಗತಿಯಿಂದ ಪೂರ್ವ ಪದವಿಯವರೆಗೆ ಕನ್ನಡ ಕಲಿಯದೇ ಇದ್ದ ಪಕ್ಷದಲ್ಲಿ ಈ ಪರೀಕ್ಷೆ ಬರೆಯಬೇಕಾದರೆ ಅವರಿಗೆ ಕಷ್ಟವಾಗುವಾಗ ಕನ್ನಡವೇ ತೆಗೆದುಕೊಳ್ಳದ ಹಿಂದಿ ಅಲ್ಲದೇ ಅನ್ಯ ಭಾಷಿಕರಿಗೆ ಎಷ್ಟು ತೊಂದರೆಯಾಗಬಹುದು ಊಹಿಸಬೇಕಾಗುತ್ತದೆ.
ಒಟ್ಟಿನಲ್ಲಿ ಕನ್ನಡ ಕಡ್ಡಾಯವಿರುವುದು ಪ್ರಶಂಸಾರ್ಹ ಆದರೆ ಕನ್ನಡದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಕಷ್ಟ ಸಾಧ್ಯವಾಗದ ಇಂತಹ ಪರೀಕ್ಷೆ ಎಷ್ಟರ ಮಟ್ಟಿಗೆ ಕನ್ನಡದ ಕಂಪು ಹರಡುವ ಸಾಧ್ಯತೆ ಎದೆ ಎಂಬುದು ಪ್ರಶ್ನೆಯಾಗಿದೆ.
ಇಂದಿನ ಪ್ರಶ್ನೆ ಪತ್ರಿಕೆಗೆ ಪ್ರಶ್ನೆ ಪತ್ರಿಕೆ ತಯಾರಿಸಿದ ಆಯೋಜಕರೇ ಇಷ್ಟು ಕನಿಷ್ಟ ಸಮಯದಲ್ಲಿ ಉತ್ತರಿಸಲು ಸಾಧ್ಯವೆ? ಇದು ವಿದ್ಯಾರ್ಥಿಗಳು ಎತ್ತಿದ ಪ್ರಶ್ನೆಯಾಗಿದೆ?

LEAVE A REPLY

Please enter your comment!
Please enter your name here