ಕಲಬುರಗಿ, ಜ. 23: ಟ್ರಾಫಿಕ್ ಡ್ರೆöÊವ್ ಮಾಡುವಾಗ ಕರ್ತವ್ಯದ ಮೇಲೆ ಇದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕರ್ತವ್ಯ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವೈದ್ಯ ಮತ್ತು ಆತನ ತಂದೆಯ ವಿರುದ್ಧ ಬ್ರಹ್ಮಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಯೊಬ್ಬ ದ್ವೀಚಕ್ರ ವಾಹನ ಚಾಲಕ ಸುಪ್ರೀಂ ಕೋರ್ಟ ಆದೇಶದನ್ವಯ ವಾಹನ ಚಾಲನೆ ಮಾಡುವಾಗ ಹೆಲ್ಮೇಟ್ ಕಡ್ಡಾಯಗೊಳಿಸಿ ಆದೇಶ ಮಾಡಿದೆ.
ಈ ಹಿನ್ನೆಲೆಯಲ್ಲಿ ಸಂಚಾರಿ ಪೋಲಿಸರು ಹೆಲ್ಮೆಟ್ ಇಲ್ಲದವರ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಅವರ ವಿರುದ್ಧ ಅವ್ಯಾಚ್ಚ ಶಬ್ದಗಳನ್ನು ಬಳಸಿದಲ್ಲದೇ ಕರ್ತವ್ಯ ಅಡ್ಡಿಪಡಿಸಿದ ಸಂಚಾರ ಪೋಲಿಸ್ ಠಾಣೆ-1 ಮಹಿಳಾ ಪಿಎಸ್‌ಐ ಶ್ರೀಮತಿ ಭಾರತಿಬಾಯಿ ಧನ್ನಿ ಅವರನ್ನು ಏಕ ವಚನದಲ್ಲಿ ಮಾತನಾಡಿ, ಫೈನ್ ಕಟ್ಟುವದಿಲ್ಲ, ನಿನ್ನನ್ನು ಜನ ಛೀ..ಥೂ.. ಎಂದು ಜನ ಉಗುಳುತ್ತಿದ್ದರೂ ನಿನಗೆ ಬುದ್ಧ ಇನ್ನು ಬಂದಿಲ್ಲ ಎಂದು ಹೇಳುವ ಮೂಲಕ ಸಾರ್ವಜನಿಕ ಜನನಿಬೀಡ ಸ್ಥಳದಲ್ಲಿ ಏರುಧನಿಯಲ್ಲಿ ನಿಂದಿಸಿದ್ದು ಅಲ್ಲದೇ ಏನು ಮಾಡುತ್ತೀ ಮಾಡು ಎಂದು ಹೇಳಿದ ಹಿನ್ನೆಲೆಯಲ್ಲಿ ತಂದೆ ಮಗನ ವಿರುದ್ಧ ಬ್ರಹ್ಮಪೂರ ಠಾಣೆಯಲ್ಲಿ ಕ್ರೆöÊಂ 07/2021 ಅನ್ವ ಗುನ್ನೆ ದಾಖಲಾಗಿಸಲಾಗಿದೆ.
ಘಟನೆಯ ಸಂಕ್ಷಿಪ್ತ ವಿವರ: ದಿನಾಂಕ 23.01.2021ರಂದು ಬೆಳಿಗ್ಗೆ 11.40 ಗಂಟೆ ಸುಮಾರಿಗೆ ನಗರದ ಮಹಾರಾಜಾ ಹೋಟೆಲ್ ಹತ್ತಿರದ ಕೃಷ್ಣಾ ಪ್ರಿಂಟಿAಗ್ ಪ್ರೇಸ್ ಹತ್ತಿರ ಮೋಟಾರ್ ಸೈಕಲ್ ನಂ. ಕೆಎ 32, ಎಂ 0188 ಮೇಲೆ ಇಬ್ಬರು ಮೋಟಾರ್ ಸೈಕಲ್ ಸವಾರರು ಹೇಲ್ಮೇಟ್ ಧರಿಸದೇ ಹಾಗೇಯೆ ಚಲಾಯಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಪಿಎಸ್‌ಐ ಶ್ರೀಮತಿ ಭಾರತಿಬಾಯಿ ಧನ್ನಿ ಅವರು ತಮ್ಮ ಸಿಬ್ಬಂದಿಗಳಾದ ಗುರುನಾಥ ಮತ್ತು ಸಿದ್ರಾಮೇಶ್ವರ ಅವರ ಸಹಾಯದಿಂದ ಅವರನ್ನು ತಡೆದು ವಿಚಾರಿಸಿದಾಗ, ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬರುತ್ತಿದ್ದ ವೈದ್ಯ ಅಭೀಷೇಕ ಎಂಬುವನು ನನ್ನ ಹತ್ತಿರ ಹೇಲ್ಮೇಟ್ ಇರುವುದಿಲ್ಲ, ನಾನು ದಂಡ ಕಟ್ಟುವುದಿಲ್ಲ ಅಂತಾ ನನಗೆ ಏಕ ವಚನದಲ್ಲಿ ಏರು ಧ್ವನಿಯಲ್ಲಿ ಮಾತನಾಡಿದ್ದು ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಿಎಸ್‌ಐ ಭಾರತಿಬಾಯಿ ಧನ್ನಿ ಅವರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಬ್ರಹ್ಮಪೂರ ಠಾಣೆಯಲ್ಲಿ ಐಪಿಸಿ ಸಕ್ಷೆನ್ 341, 186, 353, 504 ಮತ್ತು ಸಂಗಡ 34 ಕಲಂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ವೈದ್ಯ ಅಭೀಷೇಕ ತಂದೆ ಮಹಾದೇವಪ್ಪ ಭೀಮಳ್ಳಿ ಹಾಗೂ ಮಹಾದೇವಪ್ಪ ತಂದೆ ಸೋಮಶೇಖರ ಭೀಮಳ್ಳಿ ಇವರುಗಳು ನಗರದ ವೀರೇಂದ್ರ ಪಾಟೀಲ್ ಬಡಾವಣೆಯ ನಿವಾಸಿಗಳಾಗಿದ್ದಾರೆ.
ಡಾ. ಅಭೀಷೇಕ ಅವರು ನಗರದ ಹೆಸರಾಂತ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.