ಕಲಬುರಗಿಯಲ್ಲಿ ಮಂಗಳವಾರ 36 ಹೊಸ ಕರೊನಾ ಪ್ರಕರಣಗಳು, 1 ಸಾವು

0
1067

ಕಲಬುರಗಿ, ಡಿ. 22: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಏರಿಳತಗಳಾಗುತ್ತಿದ್ದು, ನಿನ್ನೆ 10 ಜನರಿಗೆ ಪಾಸಿಟಿವ್ ಇದ್ದ ಸಂಖ್ಯೆ ಇಂದು 36ಕ್ಕೆ ಏರಿದೆ.
ಕಳೆದ ಒಂದು ವಾರದಿಂದ ಕರೊನಾಗೆ ಯಾವುದೇ ಬಲಿಯಾಗಿದಿಲ್ಲ, ಆದರೆ ಇಂದು ಒಂದು ಬಲಿಯಾಗಿದೆ.
ಮಂಗಳವಾರು ಹೊಸದಾಗಿ 36 ಜನರಿಗೆ ಕರೊನಾ ಸೋಂಕು ದೃಡಪಟ್ಟಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 20933 ಜನರಿಗೆ ಈ ಸೋಂಕು ತಗುಲಿದ್ದು, 20381 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು 11 ಜನರು ಗುಣಮುಖರಾಗಿದ್ದಾರೆ.
ಇಂದು ಒಂದು ಸಾವು ಸೇರಿದಂತೆ ಒಟ್ಟು ಇಲ್ಲಿಯವರೆಗೆ 322 ಮಂದಿ ಈ ರೋಗಕ್ಕೆ ಬಲಿಯಾದಂತಾಗಿದೆ.
ವಿವಿಧ ಆಸ್ಪತ್ರೆಗಳಲ್ಲಿ 230 ಸಕ್ರೀಯ ಪ್ರಕರಣಳಿದ್ದು, ಅವರನ್ನು ಆಸ್ತತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಹೊಸದಾಗಿ ವರದಿಯಾದ 36 ಪ್ರಕರಣಗಳಲ್ಲಿ 25 ಪ್ರಕರಣಗಳು ಕಲಬುರಗಿ ನಗರದಲ್ಲಿದ್ದು, ಉಳಿದ 11 ಪ್ರಕರಣಗಳು ಜಿಲ್ಲೆಯ ವಿವಿಧ ತಾಲೂಕುಗಳಿಂದ ವರದಿಯಾಗಿವೆ. ಇದರಲ್ಲಿ 11 ಮಂದಿ ಮಹಿಳೆಯರು ಮತ್ತು 25 ಮಂದಿ ಪುರುಷರಿಗೆ ಹೊಸದಾಗಿ ಕರೊನಾ ಸೋಂಕು ತಗುಲಿದೆ. ಒಟ್ಟು 36 ಪ್ರಕರಣಗಳು.

LEAVE A REPLY

Please enter your comment!
Please enter your name here