ಕಲಬುರಗಿ ಸೇರಿ 6 ತಾಲುಕುಗಳಲ್ಲಿ ಶೇ. 74.86 ಪ್ರತಿಶತ ಮತದಾನ

0
934

ಕಲಬುರಗಿ, ಡಿ.22: ಮೊದಲನೇ ಹಂತವಾಗಿ ಇಂದು ನಡೆದ ಜಿಲ್ಲೆಯ ಆರು ತಾಲೂಕುಗಳ 126 ಗ್ರಾಮ ಪಂಚಾಯತಗಳಿಗೆ ನಡೆದ ಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ. 74.86ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.
ತಾಲೂಕುವಾರು ಶೇಕಡಾವಾರು ಮತದಾನದ ವಿವರ ಇಂತಿದೆ: ಕಲಬುರಗಿಯಲ್ಲಿ ಶೇ. 75.12, ಆಳಂದಲ್ಲಿ 75.12, ಅಫಜಲಪೂರದಲ್ಲಿ 77.09, ಕಮಲಾಪುರದಲ್ಲಿ 72.96, ಕಾಳಗಿ ತಾಲೂಕಿನಲ್ಲಿ 72.57 ಪ್ರತಿಶತ ಮತ್ತು ಶಹಾಬಾದನಲ್ಲಿ 63.34 ಪ್ರತಿಶತ ಮತದಾನವಾಗಿದೆ.
ಕಲಬುರಗಿ ತಾಲೂಕಿನ 28 ಗ್ರಾಮ ಪಂಚಾಯತಗಳಿಗೆ ನಡೆದ ಚುನಾವಣೆಯಲ್ಲಿ 61333 ಮಹಿಳೆಯರು, 65503 ಪುರುಷರು ಸೇರಿದಂತೆ ಒಟ್ಟು 126536 ಜನರು ಮತ ಚಲಾಯಿಸಿದ್ದಾರೆ.
ಆಳಂದ ತಾಲೂಕಿನ 36 ಗ್ರಾಮ ಪಂಚಾಯತಗಳಿಗಾಗಿ ಒಟ್ಟು 144343 ಮತದಾರರು ಮತದಾನ ಮಾಡಿದ್ದು, ಅದರಲ್ಲಿ 76211 ಪುರುಷರು ಮತ್ತು 68132 ಮಹಿಳಾ ಮತದಾರರು ಸೇರಿದ್ದಾರೆ.
ಅಫಜಲಪೂದಲ್ಲಿ 28 ಗ್ರಾಮ ಪಂಚಾಯತಗಳ ಚುನಾವಣೆಯಲ್ಲಿ 119950 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಅದರಲ್ಲಿ 62932 ಪುರುಷರು ಮತ್ತು 57018 ಮಹಿಳೆಯರು ಸೇರಿದ್ದಾರೆ.
ಕಮಲಾಪೂರದ 16 ಗ್ರಾಮ ಪಂಚಾಯತ್‌ಗಳಿಗಾಗಿ 64379 ಮಂದಿ ಮತದಾರರು ಮತ ಹಾಕಿದ್ದು, ಪುರುಷರು 33271, ಮಹಿಳೆಯರು 31108.
ಕಾಳಗಿಯ 14 ಗ್ರಾಮ ಪಂಚಾಯತಗಳಿಗಾಗಿ ನಡೆದ ಚುನಾವಣೆಯಲ್ಲಿ 53326 ಮಂದಿ ಮತದಾನ ಮಾಡಿದ್ದು, 27368 ಪುರುಷರು ಮತ್ತು 25958 ಮಹಿಳೆಯರು ಸೇರಿದ್ದಾರೆ.
ಇನ್ನು ಶಹಾಬಾದದ 04 ಗ್ರಾಮ ಪಂಚಾಯತಗಳಿಗೆ ಒಟ್ಟು 17354 ಮತದಾರರು ಮತ ಚಲಾವಣೆಮಾಡಿದ್ದಾರೆ. ಅದರಲ್ಲಿ ಪುರಷರು 8847, ಮಹಿಳೆಯರು 8507.
ಒಟ್ಟು 126 ಗ್ರಾಮ ಪಂಚಾಯತಗಳಿಗಾಗಿ 526188 ಮತದಾರರು ಮತ ಹಾಕಿದ್ದು ಅದರಲ್ಲಿ 274132 ಪುರುಷರು ಮತ್ತು 252066 ಮಹಿಳೆಯರು ಮತದಾನ ಮಾಡಿದ್ದಾರೆ.

LEAVE A REPLY

Please enter your comment!
Please enter your name here