ಕಲಬುರಗಿ ಜಿಲ್ಲೆಯಲ್ಲಿ ಶೇ.67.72 ರಷ್ಟು ಮತದಾನ : ಜಿಲ್ಲಾಧಿಕಾರಿ

0
934

ಕಲಬುರಗಿ.ಅ.28: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದಿಂದ ಬುಧವಾರ ನಡೆದ ಚುನಾವಣೆಯು ಕಲಬುರಗಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 67.72 ರಷ್ಟು ಮತದಾನವಾಗಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾö್ನ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತ ಚಲಾಯಿಸಲು ಹಕ್ಕು ಹೊಂದಿದ ಒಟ್ಟು 9529 ಮತದಾರ ಪೈಕಿ 6453 ಮತದಾರರು ಮತ ಚಲಾಯಿಸಿದ್ದಾರೆ. ಇದರಲ್ಲಿ 4245 ಪುರುಷರು ಹಾಗೂ 2208 ಮಹಿಳಾ ಮತದಾರರು ಇದ್ದಾರೆ. ಲಿಂಗವಾರು ಮತದಾನದ ಪ್ರಮಾಣ ನೋಡಿದಾಗ ಪುರುಷರ ಪ್ರಮಾಣ ಶೇ. 76.13 ಇದ್ದರೆ ಮಹಿಳೆಯರ ಪ್ರಮಾಣ ಶೇ. 55.87 ರಷ್ಟಿದೆ ಎಂದರು.
ಕಲಬುರಗಿ ನಗರದ 8 ಸೇರಿದಂತೆ ಜಿಲ್ಲೆಯ ಒಟ್ಟು 41 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾö್ನ ಅವರು ನಗರದ ಮತಗಟ್ಟೆ ಸಂಖ್ಯೆ 66 ಹಾಗೂ 67 ಸೇರಿದಂತೆ ಮುಂತಾದ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನದ ಪ್ರಕ್ರಿಯೇ ವೀಕ್ಷಿಸಿದರು. ಕೋವಿಡ್-19 ಹಿನ್ನೆಲೆಯಲ್ಲಿ ಮತದಾನಕ್ಕೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿತ್ತು.
ಶೇ.73.32 ರಷ್ಟು ಮತದಾನ:
ಬುಧವಾರ ನಡೆದ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 73.32 ರಷ್ಟು ಮತದಾನವಾಗಿದೆ.
ಕ್ಷೇತ್ರದಲ್ಲಿ ಮತ ಚಲಾಯಿಸಲು ಹಕ್ಕು ಹೊಂದಿದ ಒಟ್ಟು 29236 ಮತದಾರ ಪೈಕಿ 21436 ಮತದಾರರು ಮತ ಚಲಾಯಿಸಿದ್ದು, ಇದರಲ್ಲಿ 15058 ಪುರುಷರು ಹಾಗೂ 6378 ಮಹಿಳಾ ಮತದಾರರು ಇದ್ದಾರೆ. ಲಿಂಗವಾರು ಮತದಾನದ ಪ್ರಮಾಣ ನೋಡಿದಾಗ ಪುರುಷರ ಪ್ರಮಾಣ ಶೇ. 79.47 ಇದ್ದರೆ ಮಹಿಳೆಯರ ಪ್ರಮಾಣ ಶೇ. 62.01 ರಷ್ಟಿದೆ
ಜಿಲ್ಲಾವಾರು ಮತದಾನದ ವಿವರ ಇಂತಿದೆ. ಕಲಬುರಗಿ ಜಿಲ್ಲೆಯಲ್ಲಿ ಶೇ. 67.72, ಯಾದಗಿರಿ ಶೇ. 81.59, ರಾಯಚೂರು ಶೇ. 74.97, ಬೀದರ ಶೇ. 74.40, ಬಳ್ಳಾರಿ ಶೇ. 74.34 ಹಾಗೂ ಕೊಪ್ಪಳ ಶೇ. 80.86 ರಷ್ಟು ಮತದಾನವಾಗಿದೆ.

LEAVE A REPLY

Please enter your comment!
Please enter your name here