ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಿಂದ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ

0
1045

ಕಲಬುರಗಿ, ಆಗಸ್ಟ. 19: ಎಪಿಎಂಸಿಯಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ಪ್ರವೇಶವಿಲ್ಲದಂತ ಸಮಯದಲ್ಲಿ ಸರಕಾರ ತರಾತುರಿಯಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಪೋರೇಟ್ ಕಂಪನಿಗಳು ಎಪಿಎಂಸಿಯಲ್ಲಿ ನುಗ್ಗಲು ಅನುಕೂಲ ಮಾಡುವುದರೊಂದಿಗೆ ರೈತರಿಗೆ ದಿವಾಳಿ ಅಂಚಿನಲ್ಲಿ ನೂಕಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ ಅವರು ಹೇಳಿದ್ದಾರೆ.
ಈ ಕುರಿತಂತೆ ಇಂದು ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಪರ ವಲ್ಲದ ಯೋಜನೆಗಳನ್ನು ಜಾರಿಗೆ ತಂದು ರೈತರ ಬೆನ್ನುಲುಬಾಗದೆ ರೈತರ ಬೆನ್ನುಮುರಿಯುವಂತಹ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿಯೇತರ ಬಂಡವಾಳಶಾಹೀಗಳಿಗೆ ಭೂಮಿ ಖರೀದಿಸಲು ಅನುಕೂಲ ಮಾಡುವ ಮೂಲಕ ರೈತರ ಬಾಯಿಗೆ ಮಣ್ಣು ಹಾಕಿದೆ ಎಂದು ತಿಳಿಸಿದರು.
ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾದ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಿಂಪಡೆಯುವAತೆ ಸರಕಾರಕ್ಕೆ ಆಗ್ರಹಿಸಿದ ಅವರು ಅಗತ್ಯ ಬಿದ್ದರೆ ಬೀದಿಗೀಳೀದು ಹೋರಾಟ ಮಾಡಿ ಸರಕಾರವನ್ನು ಬದಲಿಸುವ ಶಕ್ತಿ ರೈತರಿಗೆ ಇದೆ ಎಂದು ಗುಡುಗಿದರು.
ಕೇಂದ್ರ ಎನ್.ಡಿ.ಎ. ನೇತೃತ್ವದ ಸರಕಾರದ ಪಿಎಂ ನರೇಂದ್ರ ಮೋದಿ ಅವರು ಯಾವುದೇ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೇ ಸಾರ್ವಜನಿಕ ಉದ್ಯಮ ವಲಯಗಳನ್ನು ಖಾಸಗೀಯವರ ಕೈಗೆ ಕೊಡುವ ಮೂಲಕ ಖಾಸಗೀಕರಣಕ್ಕೆ ಮುಂದಾಗಿದ್ದು, ಇದು ರೈತರಿಗೆ ಅಷ್ಟೇ ಅಲ್ಲ ಸಾರ್ವಜನಿಕರಿಗೂ ಕೂಡಾ ಅಪಾಯ ಕಾರಿ ಎಂದು ಹೇಳಿ, ಈ ಕಾಯ್ದೆಗಳು ಸೇರಿದಂತೆ ಇನ್ನು ಹಲವಾರು ಜಾರಿಗೆ ಉದ್ದೇಶಿಸುವ ಯೋ ಜನೆಗಳ ಸುಗ್ರಿವಾಜ್ಞೆಯನ್ನು ಹಿಂಪಡೆಯಬೇಕೆAದು ಕೂಡ ಅವರು ಆಗ್ರಹಿಸಿದರು.

LEAVE A REPLY

Please enter your comment!
Please enter your name here