ಗಣೇಶ ವಿಸರ್ಜನೆಗೆ ಪಾಲಿಕೆಯಿಂದ ನೂತನ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಯೋಜನೆ

0
846

ಕಲಬುರಗಿ, ಆಗಸ್ಟ್,20-ಕೋವಿಡ್ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ 2020ರ ಆಗಸ್ಟ್ 22 ರಂದು ಶ್ರೀ ಗಣೇಶೋತ್ಸವವನ್ನು ಸರಳ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಬೇಕು. ಗಣೇಶ ಮೂರ್ತಿ ವಿಸರ್ಜನೆಗಾಗಿ ಕಲಬುರಗಿ ನಗರದ ಪ್ರಮುಖ 12 ಕಡೆ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣಪನ ಮೂರ್ತಿಯನ್ನು ಮೊಬೈಲ್ ಟ್ಯಾಂಕ್‌ನಲ್ಲಿ ವಿಸರ್ಜಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ ಅವರು ತಿಳಿಸಿದ್ದಾರೆ.
ಇದಕ್ಕಾಗಿ ಕಲಬುರಗಿ ನಗರದ ಅಯ್ಯರವಾಡಿ, ಶಹಾಬಜಾರ ನಾಕಾ, ಜೇವರ್ಗಿ ಕ್ರಾಸ್, ಖರ್ಗೆ ಪೆಟ್ರೋಲ್ ಪಂಪ್, ಓಂ ನಗರ, ವಿದ್ಯಾನಗರ, ರಾಮಂದಿರ ವೃತ್ತ, ಆಳಂದ ಚೆಕ್ ಪೋಸ್ಟ್, ರಾಜಾಪುರದ ಆರ್.ಟಿ.ಓ. ಕ್ರಾಸ್, ಎಂ.ಜಿ. ರಸ್ತೆ, ಪುಟಾಣಿ ಗಲ್ಲಿ ಹಾಗೂ ಕೋರಂಟಿ ಹನುಮಾನ ದೇವಸ್ಥಾನ ಸ್ಥಳಗಳಲ್ಲಿ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತಲಿನ ಜನರು ಈ ಸ್ಥಳಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಜನದಟ್ಟಣೆಯಿಂದ ಹೊರಗುಳಿಯುವ ನಾಗರೀಕರಿಗಾಗಿ ಈ ವ್ಯವಸ್ಥೆ ಮಾಡಲಾಗಿದ್ದು, ಮೊದಲಿನಂತೆ ಮಹಾನಗರಪಾಲಿಕೆಯ ಕೆರೆಯ ಹತ್ತಿರುವ ವಿಸರ್ಜನಾ ಭಾವಿಯೂ ಕೂಡ ಎಂದಿನAತೆ ನಾಗರೀಕರಿಗಾಗಿ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಗಣೇಶ ವಿಸರ್ಜನೆಯೂ ನಗರದ ಕೆಲವು ಬಡಾವಣೆಗಳಲ್ಲಿ ಒಂದೇ ದಿನದ ಗಣೇಶ ಅಂದರೆ 22ರಂದೆ ವಿಸರ್ಜನೆಗೂ ಕೂಡಾ ಮೊಬೈಲ್ ಟ್ಯಾಂಕರ್ ಹಾಗೂ ವಿಸರ್ಜನಾ ಭಾವಿಯಲ್ಲಿ ಕೂಡ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here