ತಳವಾರ ಜನಾಂಗಕ್ಕೆ ಎಸ್.ಟಿ. ಸರ್ಟಿಫಿಕೇಟಗಾಗಿ ಸಿ.ಎಂ ಬಳಿ ನಿಯೋಗ ಒಯ್ಯಲು ಸಂಸದರಿಗೆ ಮನವಿ

0
1161

ಕಲಬುರಗಿ, ಜುಲೈ, 25: ಬಹುದಿನಗಳ ಹೋರಾಟದ ಫಲವಾಗಿ ಕೇಂದ್ರ ಸಕಾರ ಎರಡು ಸದನಗಳಲ್ಲಿ ತಳವಾರ ಜನಾಂಗಕ್ಕೆ ಎಸ್.ಟಿ. ಜಾತಿ ಪ್ರಮಾಣ ಪತ್ರ ನೀಡಲು ನಿರ್ಣಯಿಸಿ ರಾಷ್ಟçಪತಿಯವರಿಗೆ ಕಳುಹಿಸಿದ್ದು, ಅವರು ಕೂಡಾ ಈ ನಿರ್ಣಯಕ್ಕೆ ಅಂಕಿತಹಾಕಿ ಆದೇಶ ಜಾರಿ ಮಾಡಿದು ಆಗಿದ್ದೆ, ಕೇಂದ್ರದ ಗೆಜೆಟ್ ಆದ ಬಳಿಕವು ಕೂಡಾ ಅಧಿಕಾರಿಗಳು ನಮ್ಮ ಜನಾಗಂಕ್ಕೆ ಎಸ್.ಟಿ. ಜಾತಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿರುವುದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಬೆಳಕಿಗೆ ಬಂದಿದೆ.
ಸಮಾಜ ಕಲ್ಯಾಣ ಸಚಿವರೂ ಹಾಗೂ ಉಪ ಮುಖ್ಯಮಂತ್ರಿಗಳೂ ಆದ ಗೋವಿಂದ ಕಾರಜೋಳ ಅವರು ತಳವಾರ ಜನಾಂಗಕ್ಕೆ ಎಸ್.ಟಿ. ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಏನಾದರೂ ತಾರತಮ್ಮ ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಆದರೆ ಉಪಮುಖ್ಯಮಂತ್ರಿಗಳ ಮಾತಿಗೂ ಅಧಿಕಾರಿಗಳು ಕ್ಯಾರೆ ಅನ್ನದೇ ನಮ್ಮ ಜನಾಗಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿ ಅನ್ಯಾಯ ಮಾಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ತಮ್ಮ ಹಾಗೂ ನಮ್ಮ ಕೋಲಿ ಸಮಾಜದ ನಾಯಕರಾದ ಬಾಬುರಾವ ಚಿಂಚನಸೂರ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಬೇಕೆಂದು ಆಗ್ರಹಿಸಿ ಕರ್ನಾಟಕ ರಾಝ್ಯ ತಳವಾರ ಹೋರಾಟ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕರಾದ ಶಾಂತಪ್ಪ ಎ ಕೂಡಿ ಅವರು ಇಂದು ಸಂಸದರಾದ ಡಾ. ಉಮೇಶ ಜಾಧವ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ನಮ್ಮ ಹಿಂದುಳಿದ ಸಮಾಜವಾದ ತಳವಾರ ಜನಾಂಗಕ್ಕೆ ಎಸ್.ಟಿ. ಜಾತಿ ಪ್ರಮಾಣ ಪತ್ರ ನೀಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಕೂಡಲೇ ಒಂದು ದಿನಾಂಕ ನಿಗದಿ ಮಾಡಿ ನಿಯೋಗದ ಮೂಲಕ ಒತ್ತಾಯಿಸಲು ಹಾಗೂ ಸಮಾಜಿಕ ನ್ಯಾಯ ದೊರಕಿಸಬೇಕೆಂದು ಅವರು ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here