ಕಲಬುರಗಿ, ಆಗಸ್ಟ. 11: ಕಳೆದ ನಾಲ್ಕು ವರ್ಷಗಳಿಂದ ಅವಧಿ ಮುಗಿದರೂ ವಾರ್ಡ ವಿಂಗಡಣೆ ಹಾಗೂ ಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದ ಕಲಬುರಗಿ ಮಹಾನಗರಪಾಲಿಕೆ ಸೆಪ್ಟೆಂಬರ್ 3ರಂದು ಚುನಾವಣೆ ನಡೆಸಲು ಆದೇಶಿ ರಾಜ್ಯ ಚುನಾವಣಾ ಆಯೊಗ ಆದೇಶ ಜಾರಿಮಾಡಿದೆ.
ಕಲಬುರಗಿ ಸೇರಿ ರಾಜ್ಯದ ಬೆಳಗಾವಿ, ಹುಬ್ಬಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆಯಾಗಿವೆ.
ಆಗಸ್ಟ 16ರಂದು ಜಿಲ್ಲಾಧಿಕಾರಿಗಳಿಂದ ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಆಗಸ್ಟ 23ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಸಲ್ಲಿಸಿದ ನಾಮಪತ್ರಗಳ ಪರಿಶೀಲನೆಯು ಆಗಸ್ಟ 24ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂತೆಗೆದುಕೊಳ್ಳಲು 26.08.2021ರಂದು ಕೊನೆಯ ದಿನವಾಗಿದೆ.
ಮತದಾನವು 03.09.2021ರಂದು ಮತದಾನವು ಬೆಳಿಗ್ಗೆ 7 ಗಂಟೆಯಿAದ ಸಾಯಂಕಾಲ 5 ಗಂಟೆಯವರೆಗೆ ನಡೆಯಲಿದೆ.
ಮತಗಳ ಏಣಿಕೆ ಕಾರ್ಯವು ಆಯಾ ಮಹಾನಗರಪಾಲಿಕೆಯಗಳ ವ್ಯಾಪ್ತಿಯಲ್ಲಿ ಸೆಪ್ಟಂಬರ್ 6, 2021ರಂದು ನಡೆಯಲಿದೆ.