ರಾಜಕೀಯ ಆರಂಭವೋ, ಅಂತ್ಯವೋ ಎಲ್ಲವೂ ಶ್ರೀ ಕೃಷ್ಣನ ಕೈಯಲ್ಲಿದೆ

0
854
Anand Singh not happy with assigned Portfolio - hospet.online

ಬೆಂಗಳೂರು,ಆ.11- ತಮ್ಮ ರಾಜಕೀಯ ಆರಂಭವೋ ಅಂತ್ಯವೋ ಗೊತ್ತಿಲ್ಲ. ಎಲ್ಲವೂ ಶ್ರೀ ಕೃಷ್ಣನ ಕೈಯಲ್ಲಿದೆ.
ಹೀಗೆಂದವರು ಬರ‍್ಯಾರೂ ಅಲ್ಲ ಖಾತೆಗಾಗಿ ಕ್ಯಾತೆ ತೆಗೆದ ಸಚಿವ ಆನಂದಸಿAಗ್.
ಅವರು ಬುಧುವಾರ ಹೊಸಪೇಟೆಯ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕೃಷ್ಣನಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕಳೆದ ಮೂರು ದಿನಗಳಿಂದ ದೇವಸ್ಥಾನದಲ್ಲಿ ಪೂಜಾ ಕಾರ್ಯದಲ್ಲಿ ಇದ್ದುದ್ದರಿಂದ ಯಾರ ದೂರವಾಣಿ ಕರೆಗಳನ್ನು ಸ್ವೀಕರಿಸಲಾಗಲಿಲ್ಲ ಎಂದು ಅವರು ಯಾರನ್ನೂ ಬ್ಲಾಕ್‌ಮೇಲ್ ಮಾಡಿಲ್ಲ, ಒತ್ತಡ ಹೇರುವ ಪ್ರಯತ್ನವನ್ನೂ ಮಾಡಿಲ್ಲ, ನಾನು ಏನು ಹೇಳಬೇಕೋ ಅದನ್ನು 4 ಗೋಡೆಯ ನಡುವೆ ಹೇಳಿದ್ದೇನೆ. ರಾಜಕೀಯವಾಗಿ ನನ್ನ ನಿರ್ಧಾರವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಆ ನಿರ್ಧಾರದಲ್ಲಿ ಬದಲಾವಣೆಗಳಿಲ್ಲ ಎಂದರು.
ತಮ್ಮ ನಿರ್ಧಾರದಲ್ಲಿ ಯಾವ ಬದಲಾವಣೆಯೂ ಇಲ್ಲ. ತಮ್ಮ ನಿರ್ಧಾರ ಏನು ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಈಗಾಗಲೆ ಕಳೆದ ಮೂರು ದಿನಗಳ ಹಿಂದೆಯೇ ಹೇಳಿದ್ದೇನೆ ಎಂದಿದ್ದಾರೆ.
ನಾನೇನೂ ದೊಡ್ಡ ರಾಜಕಾರಣಿ ಅಲ್ಲ, 4 ಬಾರಿ ಹೊಸಪೇಟೆ ಕ್ಷೇತ್ರದ ಜನ ಆರ್ಶೀವಾದ ಮಾಡಿದ್ದಾರೆ. ನನ್ನ ರಾಜಕೀಯ ಜೀವನ ಸಣ್ಣದು, ನಾನು ನೇರವಾಗಿ ಮಾತನಾಡುವವನು ಎಂದರು.ರಾಜಕೀಯದಲ್ಲಿ ನನ್ನ ರಕ್ಷಣೆಗೆ ಜನ ಇದ್ದಾರೆ ಎಂದು ನಂಬಿದ್ದೆ. ಅದು ಭ್ರಮೆ ಎಂದು ಈಗ ಅನಿಸುತ್ತಿದೆ. ಆದರೂ ನಾನು ಆತ್ಮ ವಿಶ್ವಾಸ ಕಳೆದುಕೊಂಡಿಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷಕ್ಕೆ ಅಗೌರವ ತರುವ ರೀತಿಯಲ್ಲಿ ಮುಜುಗರವಾಗುವಂತೆ ನಡೆದುಕೊಂಡಿಲ್ಲ ಎಂದರು.
ಕಳೆದ ಮೂರು ದಿನಗಳಿಂದ ಪೂಜೆಯಲ್ಲಿ ನಿರತನಾಗಿದ್ದೆ. ಹಾಗಾಗಿ, ದೂರವಾಣಿ ಕರೆಗಳನ್ನು ಸ್ವೀಕರಿಸಿಲ್ಲ. ಎಲ್ಲರ ಕ್ಷಮೆ ಕೋರುತ್ತೇನೆ. ಎಲ್ಲರ ಜತೆಯೂ ಮಾತನಾಡುತ್ತೇನೆ ಎಂದರು.
ಮುಖ್ಯಮAತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡುವ ಬಗ್ಗೆ ಇನ್ನು ನಿರ್ಧರಿಸಿಲ್ಲ. ಪಕ್ಷದ ನಾಯಕರ ಮೇಲೆ ನನಗೆ ವಿಶ್ವಾಸವಿದೆ. ರಾಜಕಾರಣದಲ್ಲಿ ಇರುವವರೆಲ್ಲ ಕೆಟ್ಟವರಲ್ಲ, ಒಳ್ಳೆಯವರು ಇದ್ದಾರೆ ಎಂದರು.ರಾಜಕೀಯ ಜೀವನವನ್ನು ವೇಣುಗೋಪಾಲಸ್ವಾಮಿ ದೇವಾಲಯದಿಂದ ಆರಂಭ ಮಾಡಿದ್ದೆ. ಈಗಲೂ ನನ್ನ ರಾಜಕೀಯ ಅಂತ್ಯವಾಗುತ್ತದೋ ಪುನರಾರಂಭವಾಗುತ್ತದೋ ಗೋಪಾಲ ಕೃಷ್ಣ ದೇವರೆ ನಿರ್ಧರಿಸುತ್ತಾನೆ, ದೇವರನ್ನು ನಂಬಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಜತೆಯೂ ಎಲ್ಲ ವಿಚಾರ ಚರ್ಚೆ ನಡೆಸಿದ್ದೇನೆ. ಅವರು ನನಗೆ ಎಲ್ಲ ರೀತಿಯಲ್ಲೂ ಒಳ್ಳೆಯದನ್ನೇ ಮಾಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ 3 ಬಾರಿ ನನಗೆ ಖಾತೆ ಬದಲಾವಣೆ ಮಾಡಿದ್ದರು. ನನಗೆ ಹೊಗಳುವ ಕಲೆ ಗೊತ್ತಿಲ್ಲ. ಅರ್ಜುನನಿಗೆ ಶ್ರೀರಕ್ಷೆಯಾಗಿ ನಿಂತತ್ತೆ ಗೋಪಾಲಕಷ್ಣ ನಿಲ್ಲುತ್ತಾನೆ ಎಂಬ ವಿಶ್ವಾಸವಿದೆ ಎಂದರು.

ಸಚಿವ ಸ್ಥಾನಕ್ಕಾಗಿ ಮುಂದುವರಿದ ಅತೃಪ್ತ ಶಾಸಕರ ಲಾಬಿ
ಸಚಿವ ಸ್ಥಾನ ಸಿಗದ ಶಾಸಕರುಗಳ ಮುನಿಸು ಸ್ಪೋಟಗೊಂಡಿದ್ದು, ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಅಸಮಾಧಾನಿತ ಶಾಸಕರುಗಳ ಜತೆಗೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ರೇಣುಕಾಚಾರ್ಯ ಸಹ ಸೇರಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಚಿವ ಸ್ಥಾನ ವಂಚಿತ ಸಿ.ಪಿ. ಯೋಗೇಶ್ವರ್, ಸೀಮಂತಪಾಟೀಲ್, ಆರ್. ಶಂಕರ್ ಮತ್ತು ರಮೇಶ್ ಜಾರಕಿಹೊಳಿ ಇವರುಗಳು ವರಿಷ್ಠರ ಭೇಟಿಗೆ ಪ್ರಯತ್ನ ನಡೆಸಿ ಸಚಿವರಾಗಲು ಹರಸಾಹಸ ನಡೆಸಿದ್ದಾರೆ. ನಿನ್ನೆ ರಾತ್ರಿ ದಿಢೀರ್‌ನೆ ಸಚಿವ ರೇಣುಕಾಚಾರ್ಯ ದೆಹಲಿಗೆ ತೆರಳಿದ್ದು, ಅವರು ಸಹ ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರೆ. ಸರ್ಕಾರ ರಚನೆಗೆ ಕಾರಣರಾದ ತಮ್ಮನ್ನು ಸಂಪುಟದಿAದ ಕೈಬಿಟ್ಟಿರುವುದರಿಂದ ಅಸಮಾಧಾ ನಗೊಂಡಿರುವ ಈ ಶಾಸಕರುಗಳು, ಇಂದು ವರಿಷ್ಠ ನಾಯಕರನ್ನು ಭೇಟಿ ಮಾಡಿ ಸಚಿವ ಸ್ಥಾನದ ಬೇಡಿಕೆ ಇಡಲಿದ್ದಾರೆ ಎಂದು ಹೇಳಲಾಗಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿರುವ ಈ ಶಾಸಕರಿಗೆ ಇನ್ನೂ ವರಿಷ್ಠರ ಭೇಟಿ ಲಭ್ಯ
ವಾಗಿಲ್ಲ. ಇಂದು ಸಂಜೆಯೊಳಗೆ ವರಿಷ್ಠರು ಇವರ ಭೇಟಿಗೆ ಸಮಯ ನೀಡುವ ಸಾಧ್ಯತೆಗಳಿವೆ.
ದೆಹಲಿಗೆ ತೆರಳಿರುವ ರೇಣುಕಾಚಾರ್ಯ ಈ ಅಸಮಾಧಾನಿತ ಶಾಸಕರ ಜತೆ ಸೇರದೆ ಪ್ರತ್ಯೇಕವಾಗಿಯೇ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದು, ಈ ನಾಲ್ಕು ಸ್ಥಾನಗಳಿಗಾಗಿ ಇವರೆಲ್ಲಾ ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಬೀರಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ನಡೆಸಿದ್ದಾರೆ. ಪಕ್ಷದ ವರಿಷ್ಠರು ಸಚಿವ ಸ್ಥಾನ ವಂಚಿತ ಶಾಸಕರ ಮಾತುಗಳಿಗೆ ಮಣೆ ಹಾಕುತ್ತಾರೆಯೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

ಬಿಕ್ಕಟ್ಟು ಶಮನ ರೇಣುಕಾ ವಿಶ್ವಾಸ
ಸಚಿವರಾದ ಆನಂದ್‌ಸಿAಗ್ ನನ್ನ ಆತ್ಮೀಯ ಮಿತ್ರರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಅವರಿಗೆ ಮನವಿ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದರು.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಪಥನವಾಗುವಲ್ಲಿ ಆನಂದ್‌ಸಿAಗ್‌ರವರ ಕೊಡುಗೆ ದೊಡ್ಡದಿದೆ. ಅವರಿಗೆ ಒಳ್ಳೆಯ ಖಾತೆ ಸಿಗದೇ ಇರುವ ನೋವು ಮೊದಲೂ ಇತ್ತು ಈಗಲೂ ಇದೆ ಎಂದರು.
ಸಚಿವ ಆನಂದ್‌ಸಿAಗ್‌ರವರನ್ನು ಸಮಾಧಾನಪಡಿಸುವ ಕೆಲಸವನ್ನು ಪಕ್ಷದ ವರಿಷ್ಠರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡುತ್ತಾರೆ ಎಲ್ಲವೂ ಸರಿ ಹೋಗಲಿದೆ ಎಂದರು. ಸಚಿವ ಸ್ಥಾನ ಸಿಗದೆ ಇದ್ದುದ್ದಕ್ಕೆ ತಮಗೆ ಬೇಸರವಿಲ್ಲ. ಹೋರಾಟದ ಮೂಲಕ ನಾನು ಬೆಳೆದಿದ್ದೇನೆ. ನಾನು ಆಶಾವಾದಿ ಎಂದು ರೇಣುಕಾಚಾರ್ಯ ಹೇಳಿದರು.

ಖಾತೆ ಕ್ಯಾತೆ ಸುಖಾಂತ್ಯ ಸೋಮಣ್ಣ ವಿಶ್ವಾಸ
ಖಾತೆ ಹಂಚಿ ಕೆಯಿಂದ ಮುನಿಸಿಕೊಂಡಿರುವ ಆನಂದ್‌ಸಿAಗ್‌ರವರ ಅಸಮಾಧಾನಗಳು ಇನ್ನೆರೆಡು ದಿನಗಳಲ್ಲಿ ಸರಿಯಾಗಲಿದೆ. ಎಲ್ಲವೂ ಸುಖಾಂತ್ಯವಾಗಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ವಿಧಾನಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 327ರಲ್ಲಿ ಪೂಜೆ ಸಲ್ಲಿಸಿ ಕಚೇರಿ ಪ್ರವೇಶ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೈಕಮಾಂಡ್ ಜತೆ ಚರ್ಚಿಸಿ ನಂತರ ಆನಂದ್‌ಸಿAಗ್ ಜತೆ ಮಾತನಾಡಿ ಎಲ್ಲವನ್ನೂ ತಿಳಿಗೊಳಿಸುತ್ತಾರೆ ಎಂದರು.
ಸಚಿವ ಆನಂದ್‌ಸಿAಗ್ ಬುದ್ಧಿವಂತರಿ ದ್ದಾರೆ. ಅವರಿಗೂ ಎಲ್ಲವೂ ಅರ್ಥವಾ ಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ಷ್ಮವಾಗಿ ಎಲ್ಲವನ್ನೂ ನಿಭಾಯಿಸುತ್ತಾರೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ತಾವು ಭೇಟಿ ಮಾಡಿದ ಬಗ್ಗೆ ಟೀಕೆ ಮಾಡಿದ್ದ ಶಾಸಕ ಪ್ರೀತಂಗೌಡ ಅವರಿಗೆ ನಯವಾಗಿಏ ತಿರುಗೇಟು ನೀಡಿದ ಸಚಿವ ಸೋಮಣ್ಣ ಅವರು, ಹಾಸನದ ಉಸ್ತುವಾರಿ ಸಚಿವನಾಗಿ ಹಿಂದೆ ಚುನಾವಣೆ ಮಾಡಿದ್ದೆ.
ಆಗ ಇವರೆಲ್ಲ ಎಲ್ಲಿದ್ದರೋ ಗೊತ್ತಿಲ್ಲ, ದೇವೇಗೌಡರ ಹಿರಿತನಕ್ಕೆ ಗೌರವ ಕೊಡಬೇಕು.
ಸೋಮಣ್ಣನವರ ಒಳ್ಳೆಯತನ ಪ್ರೀತಂಗೌಡ ಅವರಿಗೆ ಕೆಟ್ಟದ್ದಾಗಿ ಕಾಣಿಸಿರಬಹುದು. ಅವರಿಗೆ ಒಳ್ಳೆ ಯದಾಗಲಿ. ಇನ್ನು ಮುಂದೆ ನಾನು ಬಹುವಚನದಲ್ಲೇ ಮಾತನಾಡುತ್ತೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here