ಭೂಸುಧಾರಣೆ ಕಾಯ್ದೆ ಹಿಂಪಡೆಯಲು ಜಯ ಕರ್ನಾಟಕ ರಕ್ಷಣಾ ಸೇನೆ ಆಗ್ರಹ

0
928

ಕಲಬುರಗಿ, ಸೆ. ೨೯: ಕೇಂದ್ರ ಸರಕಾರದ ರೈತ ವಿರೋಧ ನೀತಿಯ ವಿರುದ್ಧ ನಿನ್ನೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕಲಬುರಗಿ ಬಂದ್‌ಗೆ ಜಯ ಕರ್ನಾಟಕ ರಕ್ಷಣಾ ಸೇನೆ ಕಲಬುರಗಿ ಜಿಲ್ಲಾ ಘಟಕವು ಬೆಂಬಲಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಕೇಂದ್ರ ಸರಕಾರ ತಿದ್ದುಪಡಿ ಮಾಡುತ್ತಿರುವ ಭೂ-ಸುಧಾಠಣೆ ಕಾಯ್ದೆಯಿಂದ ಕೃಷಿ ಭೂಮಿಯನ್ನು ಯಾರಾದರೂ ಖರೀದಿ ಮಾಡಲು ಅಧಿಕಾರ ನೀಡಿರುವುದು “ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಮೋಸ ಮಾಡಿದಂತಾಗುತ್ತದೆ. ಇದಲ್ಲದೆ ಈ ಕಾಯ್ದೆ ತಿದ್ದುಪಡಿಗಳು ರೈತರ ಪರವಾಗಿ ಇರದೇ ಕಾರ್ಪೋರೇಟ ಪರವಾಗಿ ಇರುತ್ತದೆ. ಅಲ್ಲದೆ ಇದೊಂದು ಎ.ಪಿ.ಎಂ.ಸಿ. ಕಾಯ್ದೆ ರೈತರ ವಿರೋಧಿಯಾಗಿದ್ದು, ಇದನ್ನು ಕೇಂದ್ರ ಸರಕಾರವು. ರಾಜ್ಯ ಸರಕಾರಕ್ಕೆ ಹೇರಲು ಒತ್ತಾಯ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರಕಾರವು ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ಮಾಡಬಾರದು, ಕೇಂದ್ರ ಸರಕಾರವು
ತಿದ್ದುಪಡಿಗಳನ್ನು ಈ ಕೂಡಲೇ ‘ಹಿಂಪಡೆದÀÄ ರೈತರಿಗೆ ಅನೂಕೂಲವಾಗುವ ಶಾಸನಗಳನ್ನು ಜಾರಿಗೆ
ತರಬೇಕು. ಈ ಕೂಡಲೇ ಈ ಎರಡು ತಿದ್ದುಪಡಿಗಳನ್ನು ಕೇಂದ್ರ ಸರಕಾರವು ಹಿಂಪಡೆಯಬೇಕು ಎಂದು ಈ ಮನವಿ ಪತ್ರದ ಮೂಲಕ ತಮ್ಮಲ್ಲಿ ನಮ್ಮ ಜಯ ಕರ್ನಾಟಕ ರಕ್ಷಣಾ ಸೇನೆ ಕಲಬುರಗಿ ಜಿಲ್ಲಾ ಘಟಕ ತಿಳಿಸಿದೆ.
ಜಯ ಕರ್ನಾಟಕ ರಕ್ಷಣಾ ಸೆನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್.ಕಿಳ್ಳಿ, ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷರಾಧ ನಾಗಠಾಜ ಪಿ. ಬಾಣೇಕರ್, ರೋಹಿಣಿ ಎಸ್. ಕಿವಡೆ, ಶರಣಮ್ಮ ಪೂಜಾರಿ ಉದಯ ಆರ್ ಕಟ್ಟಿಮನಿ ಶಿವಕುಮಠ ಮೀಸಿ, ಪ್ರಕಾಶ ಪೂಜಾರಿ ಮೌನೇಶ ವಿಶ್ವಕರ್ಮ ಮುಂತಾದವರಿದ್ದರು.

LEAVE A REPLY

Please enter your comment!
Please enter your name here