ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆಅಕ್ರಮ ಮದ್ಯ ಸಾಗಾಟ ಬಸ್ ವಶಕ್ಕೆ:ಮೂವರ ಬಂಧನ

0
674

ಕಲಬುರಗಿ, ಸೆ. 28:ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಅರುಣಾಚಲ ಪ್ರದೇಶದ ಪಾಸಿಂಗ್ ಹೊಂದಿರುವ ಬಸ್ ಮೇಲೆ ದಾಳಿ ನಡೆಸಿದ ಅಬಕಾರಿ ಪೋಲಿಸರು ಮದ್ಯದ ಬಾಟಲಿಗಳು ಸೇರಿದಂತೆ ತೆಲಂಗಾಣ ರಾಜ್ಯದ ಮೂವರನ್ನು ವಶಕ್ಕೆ ಪಡೆದ ಘಟನೆ ಇಂದು ನಗರದ ಹೊರವಲಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಮಧ್ಯಮದವರಿಗೆ ಮಾಹಿತಿ ನೀಡಿದ ಅಬಕಾರಿ ಡಿವೈಎಸ್‌ಪಿ ದೊಡ್ಡಪ್ಪ ಹೆಬಳಿ, ಈ ಅಕ್ರಮ ದಂಧೆ ಕಳೆದ ಹಲವಾರು ವಾರಗಳಿಂದ ನಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಇಂದು ಯಶಸ್ವಿಯಾಗಿದೆ ಎಂದರು.
ಅರುಣಾಚಲ ಪ್ರದೇಶ ಪಾಸಿಂಗ್ ಹೊಂದಿದ ಎಸ್‌ವಿಆರ್ ಟ್ರಾವೇಲ್ಸ್ಗೆ ಸೇರಿದ ಬಸ್ ಹಾಗೂ ವಿವಿಧ ಬ್ರಾö್ಯಂಡ್‌ಗಳ 9 ಲೀಟರ್ ಮಧ್ಯ ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಎರಡು ವಾರಗಳಿಂದ ಗೋವಾ ರಾಜ್ಯದಿಂದ ಹೈದ್ರಾಬಾದಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಇಂದು ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯದಲ್ಲಿ ತಪಾಸಣೆ ನಡೆಸಿದ ವೇಳೆ ಈ ಅಕ್ರಮ ಮದ್ಯ ಮರಾಟದ ಬಸ್ ಹಾಗೂ ಮದ್ಯ ವಶಕ್ಕೆ ಪಡೆದು, ಬಸ್ ಚಾಲಕ, ನಿರ್ವಾಹಕ ಸೇರಿ ಮೂವರನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here