ಕಾಂಗೈ ವಿಜಯದ ರ‍್ಯಾಲಿಯಲ್ಲಿಪಾಕ್ ಘೋಷಣೆ, ಧ್ವಜ ಹಾರಾಟ

0
748
ಕಲಬುರಗಿ, ಮೇ. 13:ರಾಜ್ಯ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ, ಕಾಂಗ್ರೆಸ್ ಪಕ್ಷದ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ ಮತ್ತು ಧ್ವಜ ಹಾರಾಡಿದ ಘಟನೆ ಹಲವು ಕಡೆ ನಡೆದಿದೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷಿö್ಮÃ ಹೆಬ್ಬಾಳಕರ್ ಅವರ ವಿಜಯೋತ್ಸವದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ಸೋಷಿಯಲ್ ಮಿಡಿಯಾದಲ್ಲಿ ಹರದಾಡುತ್ತಿದೆ. ಅಲ್ಲದೇ ಭಟ್ಕಳದಲ್ಲಿ ಕೂಡಾ ಪಾಕ್ ಧ್ವಜಗಳು ರಾರಾಜಿಸುತ್ತಿರುವುದು ಕೂಡಾ ಸೋಷಿಯಲ್ ಮೀಡಾಯದಲ್ಲಿ ಹರದಾಡುತ್ತಿದೆ.
ಈ ಸಮಯದಲ್ಲಿ ಬೆಳಗಾವಿಯಲ್ಲಿ ಪೋಲಿಸರು ಘೋಷಣೆ ಕೂಗುತ್ತಿದ್ದವರಿಗೆ ತಾಕಿತ್ತು ಮಾಡಿದ್ದು, ಈ ತರಹ ಘೋಷಣೆ ಕೂಗಿದರೆ ಬೇರೆಯಾಗುತ್ತದೆ ಎಂದರೂ ಕೂಡ ಕ್ಯಾರೆ ಅನ್ನದ ಕಿಡಿಗೇಡಿಗಳು ಪಾಕ್ ಪರ ಘೋಷಣೆಗಳನ್ನು ಕೂಗುತ್ತಿದ್ದರು.
ಇನ್ನು ಫಲಿತಾಂಶ ಬಂದು ಗಂಟೆಗಳು ಕಳೆದಿಲ್ಲ, ಅಂತಹದರಲ್ಲಿ ಮತ್ತೆ ಈ ರೀತಿಯ ದೇಶ ದ್ರೋಹದ ಘಟನೆಗಳು ಸಂಭವಿಸುತ್ತಿರುವುದು ರಾಜ್ಯದ ನಾಗರೀಕರಲ್ಲಿ ಆತಂಕ ಮೂಡಿಸಿದಂತಾಗುತ್ತದೆ. ಈ ಬಗ್ಗೆ ಕಾಂಗೈ ವರಿಷ್ಠರು ಎಚ್ಚೆತ್ತು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಂಡರೆ ಮುಂದಿನ ದಿನಗಳಲ್ಲಿ ಬರುವ ಚುನಾವಣೆಯಗಳಲ್ಲಿ ಮತ್ತೇ ಅಧಿಕಾರಕ್ಕೆ ಬರಬಹುದು, ಇಲ್ಲವಾದರೆ ಮತ್ತೇ ವಿರೋಧಿ ಅಲೆ ಸ್ಪಷ್ಠಿಯಾಗುವ ಸಾಧ್ಯತೆಗಳು ಅಲ್ಲಗಳೆಯುವಂತಿಲ್ಲ.
Total Page Visits: 1217 - Today Page Visits: 4

LEAVE A REPLY

Please enter your comment!
Please enter your name here