ಹೋಟೆಲ್-ರೆಸ್ಟೋರೆಂಟ್ ಮಧ್ಯರಾತ್ರಿ 1 ಗಂಟೆಗೆ ಕ್ಲೋಸ್
ಮಾಸ್ಕ್ ಕಡ್ಡಾಯ: ಖಡಕ್ ರೂಲ್ಸ್ ಜಾರಿ ಮಾಡಿದ ಡಿಸಿ

0
898

ಕಲಬುರಗಿ, ಡಿ. 30:ಹೊಸ ವರ್ಷಾಚರಣೆಯ ಮುನ್ನಾ ದಿನ ಹಾಗೂ ವರ್ಷಾಚರಣೆಗೆ ಸಂಬoಧಪಟ್ಟAತೆ ಎಲ್ಲಾ ಆಚರಣೆಗಳನ್ನು ಡಿ. 31 ಮತ್ತು ಜನವರಿ 1 ರಂದು ತಡರಾತ್ರಿ ರಾತ್ರಿ 1 ಗಂಟೆಯ ಒಳಗೆ ಪೂರ್ಣಗೊಳಸಬೇಕು. ವರ್ಷಾಚರಣೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಒಂದೆಡೆ ಸೇರುವ ಸಂದರ್ಭದಲ್ಲಿ ಕಾರ್ಯಕ್ರಮ ಹಗಲು ಹೊತ್ತಿನಲ್ಲಿ ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಬೇಕು. ಹೋಟೆಲ್, ಪಬ್, ರಸ್ಟೋರೆಂಟ್‌ಗಳ, ಕ್ಲಬ್, ರೆಸಾರ್ಟ್ ಇತ್ಯಾದಿ ಒರಂಗಣಗಳ ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ನಿಗದಿತ ಸಂಖ್ಯೆಗಿAತ ಹೆಚ್ಚಿನ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವಂತಿಲ್ಲ ಎಂದು ಡಿ.ಸಿ. ಎಚ್ಚರಿಕೆ ನೀಡಿದ್ದಾರೆ.
ವಿದೇಶಗಳಲ್ಲಿ ಕೋವಿಡ್ ದಿಢೀರ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಜಿಲ್ಲೆಯ ಜನತೆ ಮೈ ಮರೆಯಬಾರದು. ಮಹಾಮಾರಿ ಕೋವಿಡ್ ಸೋಂಕಿನ ಮುನ್ನೆಚ್ಚರಿಕೆ ಅಗತ್ಯ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಯಶವಂತ ವಿ. ಗುರುಕರ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರದಲ್ಲಿದರೂ ಸಹ ಅದಾಗ್ಯೂ ಪ್ರಪಂಚದ ಕೆಲವು ದೇಶಗಳಲ್ಲಿ ಪ್ರಕರಣ ಏರುಗತಿ ಹಿನ್ನೆಲೆಲೆಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ ಎಂದಿದ್ದಾರೆ.
ಅAತರಾಷ್ಟಿoಯ ಪ್ರಯಾಣಿಕರು ವಿದೇಶದಿಂದ ಕಲಬುರಗಿ ಜಿಲ್ಲೆಗೆ ಬಂದಾಗ ಏರ್‌ಪೋರ್ಟ್ನಲ್ಲಿ ಕೋವಿಡ್ ಸ್ಯಾಂಪಲ್ ನೀಡಿದಲ್ಲಿ ಫಲಿತಾಂಶ ಬರುವವರೆಗೂ 7 ದಿನಗಳ ವರೆಗೆ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಜ್ವರದ ಲಕ್ಷಣ ಕಂಡುಬoದಲ್ಲಿ ಹತ್ತಿರದ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಬೇಕು. ಫಲಿತಾಂಶ ಪಾಸಿಟಿವ್ ಬಂದು ರೋಗ ಲಕ್ಷಣ ರಹಿತವಾಗಿದಲ್ಲಿ ಹೋಂ ಐಸೋಲೇಷನ್‌ನಲ್ಲಿರಬೇಕು. ಲಕ್ಷಣ ತೀವ್ರತೆ ಹೆಚ್ಚಾದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಅವರು ತಿಳಿಸಿದ್ದಾರೆ.
60 ವರ್ಷ ಮೇಲ್ಪಟ್ಟವರು, ವೃದ್ಧರು, ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಇಂತಹ ಆಚರಣೆಗಳಿಂದ ದೂರವಿರುವುದು ಉತ್ತಮವಾಗಿದೆ ಎಂದು ಸಲಹೆ ನೀಡಿರುವ ಅವರು ಕಾರ್ಯಕ್ರಮಗಳ ಆಯೋಜಕರು ಮತ್ತು ಸೇವಾ ಸಿಬ್ಬಂದಿಗಳು ಕೋವಿಡ್ ಲಸಿಕೆಯ ಎರಡು ಡೋಸ್ ಅಥವಾ ಬೂಸ್ಟರ್ ಡೋಸ್ ಪಡೆದಿರಬೇಕು ಎಂದಿದ್ದಾರೆ.
ಜನದಟ್ಟಣೆಯನ್ನು ನಿಯಂತ್ರಿಸಲು ಪ್ರವೇಶ ದ್ವಾರಗಳ ಸಂಖ್ಯೆಯನ್ನು ಹೆಚ್ಚಿಸುವುದು. ಒಳಾಂಗಣ ಪ್ರದೇಶಗಳಲ್ಲಿನ ಆಚರಣೆಯಲ್ಲಿ ಭಾಗವಹಿಸುವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಮಾಸ್ಕ್ ಧರಿಸದವರಿಗೆ ಪ್ರವೇಶ ನೀಡಬಾರದು. ಪ್ರತಿಯೊಬ್ಬರೂ ಥರ್ಮಲ್ ಸ್ಥಾನಿಂಗ್‌ಗೆ ಒಳಪಡಿಸುವುದಲ್ಲದೆ ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಸಹ ಮಾಡಬೇಕು. ಹೆಚ್ಚಿನ ಜನ ಸೇರುವುದುರಿಂದ ಮುಂಜಾಗ್ರತವಾಗಿ ಅಂಬುಲೆನ್ಸ್ ವ್ಯವಸ್ಥೆ ಸಹ ಮಾಡಬೇಕು ಎಂದು ಅವರು ಆಯೋಜಕರಿಗೆ ಸೂಚಿಸಿದ್ದಾರೆ.
ಬೂಸ್ಟರ್ ಡೋಸ್ ಪಡೆಯಲು ಮನವಿ: ಜಿಲ್ಲೆಯಲ್ಲಿ ಇದೂವರೆಗೆ ಬೂಸ್ಟರ್ ಡೋಸ್ ಪಡೆದವರ ಪ್ರಮಾಣ ಶೇ.21 ಇದ್ದು, ಜನವರಿ-2023 ಅಂತ್ಯದ ವರೆಗೆ ಇದರ ಪ್ರಮಾಣ ಶೇ.50ಕ್ಕೆ ಹೆಚ್ಚಿಸುವ ಗುರಿ ಇದೆ. ಕೋವಿಡ್ ಮಹಾಮಾರಿ ತಡೆಗಟ್ಟಲು ಬೂಸ್ಟರ್ ಪಡೆಯುವುದು ಅವಶ್ಯಕವಾಗಿರುವುದರಿಂದ ಎರಡು ಡೋಸ್ ಪಡೆದು ಬೂಸ್ಟರ್ ಡೋಸ್ ಪಡೆಯದವರು ಬೂಸ್ಟರ್ ಡೋಸ್ ಪಡೆಯುವಂತೆ ಡಿ.ಸಿ. ಯಶವಂತ ವಿ. ಗುರುಕರ್ ಮನವಿ ಮಾಡಿದ್ದಾರೆ.
ಸಿನೆಮಾ ಹಾಲ್‌ನಲ್ಲಿ ಮಾಸ್ಕ್ ಕಡ್ಡಾಯ: ಜಿಲ್ಲೆಯ ಎಲ್ಲಾ ಸಿನೆಮಾ ಮಂದಿರ, ಥಿಯೇಟರ್‌ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪ್ರವೇಶದ್ವಾರದಲ್ಲಿ ಸಿಬ್ಬಂದಿಗಳು ಇದನ್ನು ಖಚಿತಪಡಿಸಿಕೊಳ್ಳಬೇಕು ಎಂದಿರುವ ಅವರು ಕೋವಿಡ್ ನಿಯಂತ್ರಣದಲ್ಲಿ ಆಗಾಗ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡುವಂತೆ ಕೋರಿದ್ದಾರೆ.

LEAVE A REPLY

Please enter your comment!
Please enter your name here