ಕಲಬುರಗಿ,ಡಿ.13:ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ 2022-23ನೇ ಸಾಲಿನ ಮುಂಗಾರು ಋತುವಿನಲ್ಲಿ ಜಿಲ್ಲೆಯಲ್ಲಿ ಭತ್ತ ಮತ್ತು ಜೋಳ ಬೆಳೆದ ರೈತರಿಂದ ಭತ್ತ ಹಾಗೂ ಜೋಳ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ತಲಾ 7 ಭತ್ತ ಹಾಗೂ ಜೋಳ ಖರೀದಿ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
ಭತ್ತ (ಸಾಮಾನ್ಯ) 2,040 ರೂ., ಭತ್ತ (ಗ್ರೇಡ್-ಎ) 2,060 ರೂ., ಬಿಳಿ ಜೋಳ(ಹೈಬ್ರಿಡ್) 2,970 ರೂ. ಹಾಗೂ ಬಿಳಿ ಜೋಳ (ಮಾಲ್ದಂಡಿ) 2,990 ರೂ. ಗಳಂತೆ ಖರೀದಿಸಲಾಗುವುದು. ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನAತೆ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಭತ್ತ ಹಾಗೂ ಪ್ರತಿ ಎಕರೆಗೆ 10 ಕ್ವಿಂಟಾಲ್‌ನAತೆ ಗರಿಷ್ಠ 20 ಕ್ವಿಂಟಾಲ್ ಮೀರದಂತೆ ಜೋಳ ಖರೀದಿಸಲಾಗುತ್ತದೆ.
ಡಿ.15 ರಿಂದ ನೋಂದಣಿ, ಜ.1 ರಿಂದ ಖರೀದಿ:
ಭತ್ತ ಹಾಗೂ ಜೋಳ ನೀಡಲು ಇಚ್ಛೆ ವ್ಯಕ್ತಪಡಿಸುವ ರೈತರ ನೋಂದಣಿ ಪ್ರಕ್ರಿಯೆ ಇದೇ ಡಿಸೆಂಬರ್ 15 ರಿಂದ ಪ್ರಾರಂಭಗೊಳ್ಳಲಿದೆ. 2023ರ ಜನವರಿ 1 ರಿಂದ 31ರ ವರೆಗೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬಹುದಾಗಿದೆ. ಆಸಕ್ತ ರೈತರು ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಡಿ.ಸಿ. ಅವರು ಮನವಿ ಮಾಡಿದ್ದಾರೆ.
ಭತ್ತ ಖರೀದಿಗೆ ಚಿತ್ತಾಪೂರ ತಾಲೂಕಿನ ಸನ್ನತ್ತಿ ಮತ್ತು ಕಲ್ಲೂರು, ಸೇಡಂ ತಾಲೂಕಿನ ಮುಧೋಳ, ಕೋಳಕುಂದಾ ಹಾಗೂ ನಾಡೆಪಲ್ಲಿ, ಜೇವರ್ಗಿ ತಾಲೂಕಿನ ಬಳಬಟ್ಟಿ ಹಾಗೂ ಯಡ್ರಾಮಿ ತಾಲೂಕಿನ ಮಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗುರುತಿಸಲಾಗಿದೆ.
ಅದೇ ರೀತಿ ಜೋಳ ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಫಜಲಪೂರ, ಆಳಂದ, ಚಿಂಚೋಳಿ, ಚಿತ್ತಾಪೂರ, ಕಲಬುರಗಿ, ಜೇವರ್ಗಿ ಹಾಗೂ ಸೇಡಂ ಕೇಂದ್ರಗಳನ್ನು ಗುರುತಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕ-9448496023 ಸಂಪರ್ಕಿಸಲು ಕೋರಿದೆ.