ರವಿವಾರ ನಗರಕ್ಕೆ ನಟಿ ಸಾಕ್ಷಿ ಮೇಘನಾ, ಅಮೂಲ್ ಗೌಡ, ವೀರ ಕನ್ನಡಿಗರ ಸೇನೆಯಿಂದ ಕನ್ನಡದ ಹಬ್ಬ

0
408

ಕಲಬುರಗಿ, ನ. 26: ಖ್ಯಾತ ಚಲನಚಿತ್ರ ನಟಿ ಕು. ಸಾಕ್ಷಿ ಮೇಘನಾ ಹಾಗೂ ಕು. ಅಮೂಲ್ ಗೌಡ ಅವರುಗಳು ಆಗಮಿಸಲಿದ್ದಾರೆ.
ನಗರದ ಡಾ. ಎಸ್. ಎಂ. ಪಂಡಿತ ರಂಗಮAದಿರದಲ್ಲಿ ರವಿವಾರ ಬೆಳಿಗ್ಗೆ 11.30ಕ್ಕೆ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಏರ್ಪಡಿಸಲಾದ ಕನ್ನಡದ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವೀರ ಕನ್ನಡಿಗರ ಸೇನೆ ಹಾಗೂ ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ಧಿಪರ ಸಂಘದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಸಮಾರಂಭದ ಸಾನಿಧ್ಯವನ್ನು ಸಂಸ್ಥಾನಮಠ ಕವಲಗಾದ ಶ್ರೀ ಅವಧೂರ ಶರಣ ನಾಗಲಿಂಗ ಮುತ್ತö್ಯ, ಪಾಳಾ ಕಟ್ಟಿಮನಿ ಮಠದ ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯರು, ಮುಗುಳನಾಗಾಂವಿ ಸಂಸ್ಥಾನ ಕಟ್ಟಿಮನಿ ಮಠದ ಶ್ರೀ ಷ. ಬ್ರ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಮಂಗಲಗಿ ಸಂಸ್ಥಾನ ಹಿರೇಮಠದ ಶ್ರೀ ಷ. ಬ್ರ. ಡಾ. ಶಾಂತ ಸೋಮನಾಥ ಶಿವಾಚಾರ್ಯರು, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮುತ್ತಾö್ಯ ನಿರಗುಡಿ, ದಂಡಗುAಡ ಸಂಸ್ಥಾನ ಹಿರೇಮಠದ ಶ್ರೀ ಬಾಲಶಿವಯೋಗಿ ಶಂಕರಲಿAಗ ಅವಧೂತ ಮಹಾರಾಜರು ಹಾಗೂ ವಾಡಿ-ಕುಮಸಿ ಹಿರೇಮಠದ ಶ್ರೀ ಬಾಲಯೋಗಿ ಚೆನ್ನವೀರ ಶಿವಾಚಾರ್ಯರು ಅವರುಗಳು ವಹಿಸಲಿದ್ದಾರೆ.
ಸಮಾರಂಭದ ಉದ್ಘಾಟಕರಾಗಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶೀ, ಶಾಸಕರುಗಳಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ಶರಣು ಸಲಗರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ಮಾಜಿ ಜಿ.ಪಂ. ಅಧ್ಯಕ್ಷ ನಿತೀನ ಗುತ್ತೇದಾರ ಅವರು ಆಗಮಿಸಲಿದ್ದಾರೆ ಎಂದು ವೀರ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಅಮೃತ ಪಾಟೀಲ್ ಸಿರನೂರ್ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮನ್ನೂರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಫಾರುಖ ಅಹ್ಮದ ಮನ್ನೂರ ಹಾಗೂ ಎಸ್‌ಎಎಮ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಮೀರ್ಜಾ ಅಫ್ರೋಜ್ ಅವರು ನೆರವೇರಿಸಲಿದ್ದಾರೆ.
ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಶಿಕ್ಷಕರು, ಪೋಲಿಸ್ ಇಲಾಖೆಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿದ ಗಣ್ಯರಿಗೆ ಕಿತ್ತೂರ ಚೆನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಕನ್ನಡ ಪ್ರಜಾಶಕ್ತಿ ಮತ್ತು ಕ.ಕ. ಪಸಂ. ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ವಿಶ್ವನಾಥ ಜಿ.ಪಿ., ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಎಮ್. ಬಸವರಾಜ ಪಡಕೋಟಿ ಹಾಗೂ ಉದ್ದಿಮೆದಾರರು ಕುಲದೀಪಕುಮಾರ ಗುಂಡಗುರ್ತಿ ಅವರುಗಳು ಪ್ರಶಸ್ತಿ ವಿತರಿಸುವರು.
ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಬಿಜೆಪಿ ಮುಖಂಡ ಅರುಣಕುಮಾರ ಪಾಟೀಲ, ಯುನೈಟೆಡ್ ಆಸ್ಪತ್ರೆಯ ಮುಖ್ಯಸ್ಥ ಡಾ. ವಿಕ್ರಮ ಸಿದ್ದಾರೆಡಡಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರು, ವೈದರು, ಉದ್ಯಮಿದಾರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

LEAVE A REPLY

Please enter your comment!
Please enter your name here