ಸೇಡಂನಲ್ಲಿ ನವೆಂಬರ್ 26ರಂದು `ಅಮ್ಮ ಪ್ರಶಸ್ತಿ’ ಪ್ರದಾನ

0
278

ಸೇಡಂ, ನ.23- ನಗರದ ಐತಿಹಾಸಿಕ ಚಾಳುಕ್ಯರ ಕಾಲದ ಶ್ರೀ ಪಂಚಲಿAಗೇಶ್ವರ್ ದೇವಾಲಯದ ಶಾಂಭವಿ ರಂಗಮoಟಪದಲ್ಲಿ ನವೆಂಬರ್ 26ರಂದು ಸಂಜೆ 5.30ಕ್ಕೆ 22ನೇ ವರ್ಷದ ಅಮ್ಮ ಪ್ರಶಸ್ತಿ' ಪ್ರದಾನ ಸಮಾರಂಭ ಜರುಗಲಿದೆ ಎಂದು ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಿಳಿಸಿದ್ದಾರೆ.

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತಅಮ್ಮ ಪ್ರಶಸ್ತಿ’ಗೆ ಈ ಬಾರಿ ಆರು ಜನ ಸಾಹಿತಿಗಳು ಭಾಜನರಾಗಿದ್ದು, ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಡಾ. ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸುವರು. ಶ್ರೀ ಕೊತ್ತಲ ಬಸವೇಶ್ವರ್ ದೇವಾಲಯದ ಸದಾಶಿವ ಮಹಾಸ್ವಾಮಿಗಳು ಸಮ್ಮುಖ ವಹಿಸುವರು. ಮಾಜಿ ಸಚಿವೆ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು ಪ್ರಶಸ್ತಿ ಪ್ರದಾನ ಮಾಡುವರು. ಶಾಸಕರು ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ ಮಾಜಿ ಉಪಸಭಾತಿ ಚಂದ್ರಶೇಖರರೆಡ್ಡಿ ದೇಶಮುಖ್ ಮದನಾ ಅವರು ಮುಖ್ಯ ಅತಿಥಿಗಳಾಗಿರುವರು. ವಿಶ್ರಾಂತ ಪ್ರಿನ್ಸಿಪಾಲ್ ಪ್ರೊ. ಮನ್ನೆ ಹಾಶರೆಡ್ಡಿ ಅವರು ಉಪಸ್ಥಿತರಿರುವರು. ಅಮ್ಮನ ಕುರಿತು ಯುವ ಗಾಯಕ ವೀರೇಂದ್ರ ಭಂಟನಳ್ಳಿ ಅವರು ಹಾಡುಗಳನ್ನು ಹಾಡಲಿದ್ದಾರೆ. ಇದೇ ಸಂದರ್ಭದಲ್ಲಿ ನಿವೃತ್ತ ಮೇಷ್ಟುç ನಾಗಪ್ಪ ಮುನ್ನೂರ್ ಅವರ ಸ್ಮರಣಾರ್ಥ ಇಬ್ಬರು ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಬದುಕಿಗಾಗಿ ಹೊಲಿಗೆ ಮಷಿನ್‌ಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಮ್ಮ ಪ್ರಶಸ್ತಿ ಪುರಸ್ಕೃತರು: ಮಧುರಾಣಿ ಎಚ್.ಎಸ್. (ನೀಲಿ ಚುಕ್ಕಿಯ ನೆರಳು- ಕವನ ಸಂಕಲನ), ಎಸ್. ಗಂಗಾಧರಯ್ಯ (ಮಣ್ಣಿಮ ಮುಚ್ಚಳ-ಕಥಾ ಸಂಕಲನ), ಆಶಾ ರಘು (ಮಾಯೆ- ಕಾದಂಬರಿ), ಸಬಿತಾ ಬನ್ನಾಡಿ (ಇದಿರು ನೋಟ- ಅಂಕಣ ಸಂಕಲನ), ಡಾ. ಅಪ್ಪಗೆರೆ ಸೋಮಶೇಖರ್ (ಬೆವರ ಬವಣೆ-ಲೇಖನಗಳ ಸಂಕಲನ) ಹಾಗೂ ಡಾ. ಎಂ.ಬಿ ಕಟ್ಟಿ (ಆರೂಢ ಪಂಥ-ಲೇಖನಗಳ ಸಂಕಲನ) ಅವರುಈ ಬಾರಿಯ ಅಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಲಾ ಐದು ಸಾವಿರ ನಗದು ಪುರಸ್ಕಾರ, ಸತ್ಕಾರ, ಪ್ರಮಾಣ ಪತ್ರ, ಮೊಮೆಂಟೋ ಸೇರಿದಂತೆ ನೆಲದ ಸಿರಿಧಾನ್ಯ ತೊಗರಿ ಬೇಳೆ ಜತೆಗೆ ಉಡಿ ತುಂಬುವ ಮೂಲಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here