ರಾಜ್ಯ ಮಟ್ಟದ ಬೃಹತ್ ಬ್ರಾಹ್ಮಣ ವಧು- ವರ ಸಮಾವೇಶ: ಕರಪತ್ರ ಬಿಡುಗಡೆ

0
772

ಕಲಬುರ್ಗಿ, ಸೆ.29- ಸಮಸ್ತ ಬ್ರಾಹ್ಮಣ ಸಮಾಜ, ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ, ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ವಿಜಯಪುರ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಮೈಸೂರು ವತಿಯಿಂದ ಲೋಕಕಲ್ಯಾಣಕ್ಕಾಗಿ ಅಕ್ಟೋಬರ್ 15ರಂದು ಶನಿವಾರ ಶ್ರೀನಿವಾಸ್ ಕಲ್ಯಾಣೋತ್ಸವ ಹಾಗೂ 16ರಂದು ಭಾನುವಾರ 42ನೇ ರಾಜ್ಯ ಮಟ್ಟದ ಬೃಹತ್ ಬ್ರಾಹ್ಮಣ ವಧು- ವರ ಸಮಾವೇಶವನ್ನು ನಗರದ ಉದನೂರ್ ರಸ್ತೆಯಲ್ಲಿರುವ ಜಯತೀರ್ಥ ನಗರದ ನ್ಯೂ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ವಿನುತ ಎಸ್. ಜೋಶಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಪೂರ್ವದಲ್ಲಿ ಉತ್ತರಾದಿ ಮಠದ 1008 ಸತ್ಯಾತ್ಮತೀರ್ಥ ಸ್ವಾಮೀಜಿಯವರು ಗುರುವಾರ ನಗರದಲ್ಲಿ ಜರುಗಿದ ಆಶೀರ್ವಚನ ಕಾರ್ಯಕ್ರಮದಲ್ಲಿ ಸಮಾವೇಶ ಕಾರ್ಯಕ್ರಮದ ಕರಪತ್ರ (ಬ್ಯಾನರ್) ಬಿಡುಗಡೆಗೊಳಿಸಿ, ವಧು- ವರರಿಗೆ ಶುಭ ಹಾರೈಸಿದರು. ವಿಪ್ರ ಮುಖಂಡರಾದ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷ ರವಿ ಲಾತೂರಕರ್, ಸುಧೀಂದ್ರ ಕುಲಕರ್ಣಿ, ಗೋವಿಂದರಾಜ್ ರಾ. ದೇಶಪಾಂಡೆ, ಶ್ರೀನಿವಾಸ್ ಭಾರದ್ವಾಜ್, ಪ್ರಕಾಶ್ ಕುಲಕರ್ಣಿ, ವಿನುತ್ ಜೋಶಿ ಮುಂತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here