ಕಲಬುರಗಿ, ಸೆ. 01: ಪಾಲಿಕೆಯ ಒಡೆತನದ ಹಳೆ ತರಕಾರಿ ಮಾರುಕಟ್ಟೆಯ ಮಳಿಗೆಗಳು ಶೀಥಿಲಗೊಂಡಿರುವುದರಿAದ ತರಕಾರಿ ಮಾರುಕಟ್ಟೆ ನೆಲಸಮಗೊಳಿಸಲು ಮಹಾನಗರಪಾಲಿಕೆ ನಿರ್ಧರಿಸಿದೆ ಎಂದು ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ತರಕಾರಿ ಮಾರುಕಟ್ಟೆಯಲ್ಲಿ ಲೀಜು/ಬಾಡಿಗೆ ಪಡೆದಿರುವವರಿಗೆ ಈಗಾಗಲೇ ಪಾಲಿಕೆಯಿಂದ ನಿರ್ಮಿಸಲಾದ ಟೀನ್ ಶೆಡ್‌ಗಳನ್ನು ಸದರಿ ರವರಿಗೆ ತಾತ್ಕಲಿಕವಾಗಿ ಬಾಡಿಗೆಗೆ ನೀಡಲು ದಿನಾಂಕ 01.09.2022 ರಿಂದ ದಿನಾಂಕ 21.09.2022 ರವರೆಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.
ಇತ್ತೀಚೆಗೆ ಕಲಬುರಗಿ ಉತ್ತರ ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಹಳೆ ತರಕಾರಿ ಮಾರುಕಟ್ಟೆ ಕಟ್ಟಡ ಶಿಥಿಲಗೊಂಡಿರುವುದರಿAದ, ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಕಟ್ಟಡವನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ.
ಅರ್ಜಿಯೊಂದಿಗೆ ಈ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
ಲೀಜು/ಬಾಡಿಗೆದರರ ಹೆಸರಿನ ಗುರುತಿನ ಚೀಟಿ:
ಪಾಲಿಕೆಯಿಂದ ಲೀಜು ಪಡೆದ ಹಂಚಿಕೆ ಪತ್ರ:
ಲೀಜು ಪಡೆದ ಅಂಗಡಿ ಸಂಖ್ಯೆ ಮತ್ತು ಅಂತಸ್ತು:
ಪಾಲಿಕೆಗೆ 2020-21 ನೇ ಸಾಲಿನವರೆಗೆ ಲೀಜು/ಬಾಡಿಗೆ ಪಾವತಿ ಮಾಡಿದ ರಸೀದಿ:
ಪಾಲಿಕೆಗೆೆ ಭರಿಸಿದ ಠೇವಣಿ ಮೊತ್ತದ ವಿವರ ಮತ್ತು ಪಾವತಿ ಮಾಡಿದ ರಸೀದಿ:
ಪಾಲಿಕೆಯಿಂದ ನಿರ್ಮಿಸಲಾಗುವ ಹೊಸ ಕಟ್ಟಡದಲ್ಲಿ ಖighಣ oಜಿ ಜಿiಡಿsಣ ಡಿeಜಿusಚಿಟ ಆಯ್ಕೆ ಮಾಡಿಕೊಳ್ಳುವ ಕುರಿತು ತಮ್ಮ ಆಯ್ಕೆಯ ಪತ್ರ.