2023ರ ಚುನಾವಣೆಯಲ್ಲಿ ಜೆಡಿಎಸ್ ನಂ.1 ಸ್ಥಾನಕ್ಕೆ ಸಿಎಂ ಇಬ್ರಾಹಿಂ ಆತ್ಮವಿಶ್ವಾಸ

0
742

ಕಲಬುರಗಿ, ಜೂ. 05: ಬರುವ 2023ರ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ರಾಷ್ಟಿçÃಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡು ಪಕ್ಷಗಳಿಂದ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ರಾಜ್ಯವನ್ನು ಆಳುತ್ತೇವೆ ಎಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಅವರು ಶನಿವಾರ ಸಂಜೆ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡುತ್ತ, 1994-95ರಲ್ಲಿ ನಮ್ಮ ಪಕ್ಷಕ್ಕೆ ಎಲ್ಲ ನಾಯಕರಿದ್ದ ಸಮ ಯದಲ್ಲಿ 38 ಸ್ಥಾನಗಳು ವಿಧಾನಸಭೆ ಚುನಾವಣೆಯಲ್ಲಿ ಬಂದಿದ್ದ ಬಗ್ಗೆ ಮೆಲಕು ಹಾಕಿದ ಅವರು, ಈ ಬಾರಿಯೂ ರಾಜ್ಯದಲ್ಲಿ ಅಂತಹದೇ ವಾತಾವರಣ ಗೋಚರವಾಗುತ್ತಿದೆ, ಈಗಾಗಲೇ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರುಗಳು ನಮ್ಮ ಸಂಪರ್ಕ ದಲ್ಲಿದ್ದು, ಲಿಂಗಾಯಿತ ಸಮುದಾ ಯದ ಹೆಚ್ಚಿನ ನಾಯಕರು ಜೆಡಿಎಸ್ ಸೇರುವುದರಿಂದ ಅಲ್ಪಸಂಖ್ಯಾತರ ಜೊತೆಗೆ ಪ್ರಬಲ ಕೋಮಾದ ಲಿಂಗಾ ಯಿತರ ಅಲ್ಲದೇ ಇನ್ನುಳಿದ ಹಿಂದು ಳಿದ ಜಾತಿಯ ಮತಗಳು ಜೆಡಿಎಸ್‌ಗೆ ಬರಲಿವೆ ಎಂದರು.
ಇತ್ತಿಚಿಗೆ ನಡೆದ ಜಲಧಾರೆ ಯಾತ್ರೆಯ ಸಮಾರೋಪ ಸಮಾ ರಂಭದಲ್ಲಿ ನಮಗೆ ಅಧಿಕಾರ ನೀಡಿ ದರೆ ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಕೆಲಸ ನಾವು ಮುಗಿಸದಿದ್ದರೆ ಮುಂ ದು ನಾವು ನಿಮ್ಮ ಮುಂದೆ ಬರು ವುದಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮರಾಸ್ವಾ ಮಿಯವರು ಘಂಟಾಘೋಷವಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ನಮ್ಮ ಮುಂದಿನ ವಿಧಾನಸಭಾ ಚುನಾವಣೆಗಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ನೂರಕ್ಕೆ ನೂ ರಷ್ಟು ಮತ್ತೇ ಕುಮಾರಣ್ಣ ಅವರು ಮುಖ್ಯ ಮಂತ್ರಿಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿ ಆಯ್ಕೆ ಕುರಿತು ಪತ್ರಿಕರ್ತರು ಕೇಳಿದ ಪ್ರಶ್ನೆಗೆ ಉತ್ತರಿ ಸಿದ ಇಬ್ರಾಹಿಂ ದಯವಿಟ್ಟು ಕೋ ಮುವಾದಿ ಶಕ್ತಿಗಳನ್ನು ಸೋಲಿಸು ವುದರಿದ್ದರೆ ನಮಗೆ ಸಹಾಯ ಮಾಡಿ ಎಂದು ಕಾಂಗ್ರೆಸ್‌ಗೆ ನಮ್ಮ ಪಕ್ಷದ ವರಿಷ್ಠರು ಮನವಿ ಮಾಡಿದ್ದಾರೆ. ವಿಧಾನಸಭೆಯಲ್ಲಿ ನಮ್ಮದ್ದು 32 ಮತ್ತು ಕಾಂಗ್ರೆಸ್ ಪಕ್ಷದ 24 ಮತಗ ಳಿದ್ದು, ಕಾಂಗ್ರೆಸ್ ಬೆಂಬಲಿಸಿದರೆ ಕುಪೇಂದ್ರರೆಡ್ಡಿ ಅವರು ಪರಿಷತ್‌ಗೆ ಆಯ್ಕೆಯಾಗಲಿದ್ದಾರೆ ಎಂದರು.
ನಮ್ಮದು ಸರ್ವ ಧರ್ಮ ಸರ್ವೇ ಸುಖಿ ಜನ ಪಾರ್ಟಿ ಯಾವುದೇ ನಾವು ಕೋಮುವಾದದ ಬಗ್ಗೆ ತಲೆ ಹಚ್ಚಕೊಂಡವರಲ್ಲ ಎಂದು ಇಬ್ರಾ ಹಿಂ ಇಂದು ಯಾಕೆ ಬರೀ ದರ್ಗಾಕ್ಕೆ ಭೇಟಿ ನೀಡಿದರು ಎಂಬುದು ಸಾರ್ವಜನಿಕವಾಗಿ ಎದ್ದಿರುವ ಪ್ರಶ್ನೆ ಯಾಗಿದೆ
ಈಗಾಗಲೇ ಪಕ್ಷದ ವರೀಷ್ಠ ಎಚ್. ಡಿ ಕುಮಾರಸ್ವಾಮಿ ಅವರು ಕಲಬುರಗಿ ಜಿಲ್ಲೆಯಲ್ಲಿ 1,2,3 ಎಂಬAತೆ ಸೇಡಂ ಕ್ಷೇತ್ರೆಕ್ಕೆ ಬಾಲ ರಾಜ ಗುತ್ತೇದಾರ, ಆಳಂದ ಕ್ಷೇತ್ರ ಮಹೇಶ್ವರಿ ವಾಲಿ ಮತ್ತು ಸೇಡಂ ಕ್ಷೇತ್ರಕ್ಕೆ ಬಾಲರಾಜ ಗುತ್ತೇದಾರ ಅವರ ಹೆಸರು ಈಗಾಗಲೇ ಬಹಿರಂಗ ಪಡಿಸಿದ್ದು, ಆದರೆ ಇಬ್ರಾಹಿಂ ಹೇಳಿಕೆ ಪ್ರಕಾರ ಇನ್ನು ಯಾವುದು ನಿರ್ಣಯವಾಗಿಲ್ಲ ಇದರ ಬಗ್ಗೆ ನಿರ್ಣಯಿಸಲು ಸಂಸದೀಯ ಮಂಡಳಿ ರಚಿಸಲಾಗಿದೆ ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.
ಇವತ್ತು ರಾಜ್ಯದಲ್ಲಿ ಜನತಾ ದಳ ಎರಡು ರಾಷ್ಟಿçÃಯ ಪಕ್ಷಗಳ ಮಧ್ಯದಲ್ಲಿ ಬೆಳೆತಕ್ಕಂತ ಪ್ರಯತ್ನ ಮತ್ತು ಜನರ ಆಶೀರ್ವಾದದಿಂದ ನಾನು 1994ರಲ್ಲಿ ಜನತಾ ದಳದ ಅಧ್ಯಕ್ಷನಾಗಿದ್ದಾಗ ಏನೋ ಒಂದು ಜನರ ಆಶೀರ್ವಾದ ಜನತಾ ದಳ ಪರ ವಾತಾವರಣ ನಿರ್ಮಾಣ ವಾಗಿತ್ತೋ ಅದನ್ನು ಪಡೆಯಬೇ ಕೆಂದು ಸಂಕಲ್ಪ ಮಾಡಿಕೊಂಡು ಈ ತಿಂಗಳು 15 ರಿಂದ ಅಧಿಕೃತವಾಗಿ ಮೊದಲು ಬೀದರ ನಂತರ ಕಲಬು ರಗಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಬಲಪಡಿಸುವುದಾಗಿ ಅವರು ಹೇಳಿದರು.
1994-95ರಲ್ಲಿ ನಮ್ಮ ಪಕ್ಷಕ್ಕೆ ಎಲ್ಲ ನಾಯಕರಿದ್ದ ಸಮಯದಲ್ಲಿ 38 ಸ್ಥಾನಗಳು ವಿಧಾನಸಭೆ ಚುನಾವಣೆಯಲ್ಲಿ ಬಂದಿದ್ದವು, ಈಗ ಯಾವ ನಾಯಕರೂ ಇಲ್ಲ, ಕಾರ್ಯಕರ್ತರೇ ಪಕ್ಷದ ಜೀವಾಳವಾಗಿ ನಿರಂತವಾಗಿ ಕಳೆದ 20 ವರ್ಷಗಳಿಂದ ಬೇರೆಯಾವುದೇ ಪಕ್ಷಕ್ಕೆ ಹೋಗದೇ ಪಕ್ಷದಲ್ಲಿಯೇ ಉಳಿದಿದ್ದು ತುಂಬಾ ಸಂತೋಷವಾಗಿದೆ. ಪಕ್ಷದ ಕಾರ್ಯಕರ್ತರಿಗೆ ನಾನು ಚಿರಣಿಯಾಗಿದ್ದೇನೆ ಅಲ್ಲದೇ ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ರಾಜ್ಯ ಸರಕಾರ ಪಠ್ಯಪುಸ್ತಗಳ ಪರಿಷ್ಕರಣೆಯಲ್ಲಿ ಬಸವಣ್ಣನವರ, ಕುವೆಂಪು ಅವರ ಬಗ್ಗೆ ಸೇರಿಸದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಪ್ಪು ಕೆಲಸ ಮಾಡುತ್ತಿದ್ದಾರೆ.
ಬಸವ ಪರಂಪರೆಯಲ್ಲಿ ಹುಟ್ಟಿರಕಂತಹ ಬೊಮ್ಮಾಯಿ ಅವರು ಇಂದು ಬಸವಣ್ಣನಿಗೆ ಇಂತಹ ಅವಮಾನ ಬಸವಣ್ಣನನ ನಾಡಿನಲ್ಲಿ ನಡೆದಿದ್ದು, ಇದು ಯಾರು ತಪ್ಪು ಮಾಡಿದ್ದಾರೋ ಅಂತಹವರಿಗೆ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಇಂತಹ ತಪ್ಪು ಮುಂದೆ ಆಗದಂತೆ ನೋಡಿಕೊಳ್ಳಬೇಕು.
ಮಸೂದೆಯಲ್ಲಿ ಅಜಾನ್ ಬಗ್ಗೆ ಮುತ್ತಾಲಿಕ ದೇಸಾಯಿಯವರು ಎಲ್ಲ ಮೈಕ್ ಕಿತ್ತಾಹಾಕಿ, ಸುಪ್ರಿಂ ಕೋರ್ಟ ಆದೇಶದಂತೆ ಸರಕಾರ ಅದರ ಮೇಲೆ ಸುತ್ತೋಲೆ ಹೊರಡಿಸಿದೆ. ಅದರ ಮೇಲೆ ಧ್ವನಿ ಎಷ್ಟಿಡಬೇಕು ಎಂಬ ಬಗ್ಗೆ ಪರವಾನಿಗೆ ಪಡೆದರೂ ಕೂಡ ಸರಕಾರದ ಆದೇಶದ ವಿರುದ್ಧ ಹೋರಾಟ ನಡೆಸುತ್ತಿರುವುದು ಒಳ್ಳೆಯದಲ್ಲ.
ಶ್ರೀರಂಗ ಪಟ್ಟಣದ ಘಟನೆಯ ಬಗ್ಗೆ ಮಾತನಾಡಿದ ಅವರು ಈ ಪ್ರಕರಣದಿಂದ ರಾಜ್ಯದಲ್ಲಿ ಮತೀಯ ಗಲಭೆಗೆ ಪ್ರಯತ್ನಿಸುತ್ತಿದ್ದಾರೆ, ರಾಜ್ಯದ ಜನತೆ ಇದಕ್ಕೆ ಯಾರು ಕಿವಿಗೊಡದೆ ಚುನಾವಣೆಗಳು ಹತ್ತಿರ ಬಂದಾಗ ಮತೀಯ ಭಾವನೆಗಳನ್ನು ಕೆರಳಿಸಲು ಪ್ರಯತ್ನಪಡುತ್ತಿದ್ದಾರೆಂದು ಆರೋಪಿಸಿದರು.
ಎಂತಹ ಸಮಸ್ಯೆ ಬಂದರೂ ನೀವು ಬೀದಿ ಬರದೇ ನಮಗೆ ದುರವಾಣಿ ಮಾಡಿ ಎಂದು ಅಲ್ಪಸಂಖ್ಯಾತರಿಗೆ ಅದರಲ್ಲೂ ಎಲ್ಲಾ ಸಮಾಜ ದವಾರಿಗೆ ಕಿವಿಮಾತು ಹೇಳಿದ ಅವರು ಈ ಬಗ್ಗೆ ನಿಮ್ಮ ಧ್ವನಿಯನ್ನು ಸರಕಾರ ತಿಳಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಉಪಾಧ್ಯಕ್ಷ ಉಸ್ತಾದ ನಾಸೀರ ಹುಸೇನ್, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಕೇದಾರಲಿಂಗಯ್ಯ ಹಿರೇಮಠ, ಶಾಮರಾವ ಸೂರನ್ ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here