ಕಲಬುರಗಿಯಲ್ಲಿ ಅಬ್ಬರದ ಮಳೆ ಚರಂಡಿಯಾದ ರಸ್ತೆಗಳು: ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾದ ನಗರ

0
720

ಕಲಬುರಗಿ, ಮೇ. 17: ನಗರದಲ್ಲಿ ಸಂಜೆ ಬಿದ್ದ ಭಾರೀ ಅಬ್ಬರದ ಮಳೆಗೆ ಕಲಬುರಗಿ ನಲುಗಿ ಹೋಗಿದ್ದು, ರಸ್ತೆ ಬದಿಯಲ್ಲಿನ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ವ್ಯಾಪಾರಸ್ಥರು ಪರದಾಡುವಂತಾಯಿತು.
ರಸ್ತೆಗಳೆಲ್ಲ ಚರಂಡಯAತಾಗಿದ್ದು, ಸರಕಾರ ಮಾಡಿದ ಕಳಪೆ ಕಾಮಗಾರಿಗೆ ನಿದರ್ಶನವೆಂಬAತೆ ನಾಲೆಗಳಲ್ಲಿನ ಹೊಲಸು ಎಲ್ಲ ರಸ್ತೆಯೇ ಮೇಲಿ ಬಂದು ಜನರು ಮೂಗು ಮುಚ್ಚುಕೊಂಡು ಓಡಾಡುವಂತಾಗಿದೆ.

ಸೂಪರ್ ಮಾರ್ಕೆಟ್‌ನಿಂದ ಜಗತ್ ರಸ್ತೆಯ ಬದಿಯಲ್ಲಿ ಇತ್ತಿಚೆಗೆ ಏರಟೇಲ್ ಕಂಪನಿಯವರು ಫೈಬರ್ ಕೆಬಲ್‌ಗಾಗಿ ಕೆಬಲ್ ಹಾಕಲು ತೊಡಿದ ತಗ್ಗುಗಳು ಅರ್ಧ ಮರ್ಧ ಮುಚ್ಚಿದ್ದರಿಂದ ರಸ್ತೆ ಪಕ್ಕದಲ್ಲಿ ನಿರ್ಮಿಸಲಾದ ನಾಲೆಗಳಿಗೆ ನೀರು ಹೋಗಲು ಮಾಡಿದ ರಂದ್ರಗಳೆಲ್ಲವು ಮುಚ್ಚಿ ನೀರು ಅಂಗಡಗಿ ಒಳಗೆ ನುಗ್ಗಿ, ವ್ಯಾಪಾರಸ್ಥರು, ನೀರು ತಗೆಯಲು ಹರಸಾಹಸ ಪಡಬೇಕಾಯಿತು.
ಉದಾಹರಣೆಗೆ ಜಗತ್ ಅಂಚೆ ಕಛೇರಿ ಪಕ್ಕದಲ್ಲಿರುವ ಕಾಂಪ್ಲೆಕ್ಸ್ ಒಳಗೆ ನೀರು ನುಗ್ಗಿ ಚರಂಡಿಯೆ ನಿರ್ಮಾಣವಾಗಿತ್ತು. ಅಲ್ಲದೇ ಫರ್ನಿಚರ್ ಅಂಗಡಿಗೆ ಚರಂಡಿ ನೀರು ನುಗ್ಗಿ, ದುರ್ವಾಸನೆಯುಂಟಾಗಿತ್ತು.

ಸರಕಾರ ಮಾಡಿದ ಕಳಪೆ ಕಾಮಗಾರಿಗಳಿಂದಾಗಿ ರಸ್ತೆಯೆಲ್ಲ ಚರಂಡಿಯAತಾಗಿದ್ದು, ಅಲ್ಲದೇ ರಸ್ತೆಯ ತುಂಬೆಲ್ಲ ಉಸುಕು, ಕಲ್ಲು, ಕಸ, ಕಡ್ಡಿ ತುಂಬಿ ಹೋಗಿದ್ದವು.

LEAVE A REPLY

Please enter your comment!
Please enter your name here