ಕಲಬುರಗಿ, ಜ. 10: ಸೋಮವಾರ ಜಿಲ್ಲೆಯಲ್ಲಿ 88 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದ ಬಗ್ಗೆ ಆರೋಗ್ಯ ಇಲಾಖೆಯ ಸಂಜೆ ಬುಲೆಟಿನ್‌ನಲ್ಲಿ ತಿಳಿಸಿದೆ.
ನಿನ್ನೆ ರವಿವಾರ 98 ಜನರಿಗೆ ತಗುಲಿದ ಸೋಂಕು ಇಂದು ಹೊಸದಾಗಿ 88 ಜನರಿಗೆ ವಕ್ಕರಿಸಿಕೊಂಡಿದ್ದು, ಇಂದು ಆಸ್ಪತ್ರೆಯಿಂದ 7 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ,
ಇAದು ಯಾವುದೇ ಸಾವು ಸಂಭವಿಸಿಲ್ಲ, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮೊದಲನೇ ಅಲೆಯಿಂದ ಹಿಡಿದು ಇಲ್ಲಿಯವರೆಗೆ 824 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕೂಡ ವೀಕೆಂಡ್ ಕರ್ಫ್ಯೂ ಶನಿವಾರ ಮತ್ತು ರವಿವಾರ ವಿಧಿಸಿರುವುದರಿಂದ ಕೊಂಚ ಸೋಂಕಿನ ಪ್ರಮಾಣ ತಗ್ಗಿದಂತಾಗಿದೆ ಎಂದು ಹೇಳಲಾಗಿದೆ.
ಡಿಸೆಂಬರ್ ವರೆಗೆ ಒಂದೋ ಎರಡೋ ಅಂಕಿಯಲ್ಲಿ ಬರುತ್ತಿದ್ದ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಹೊಸ ವರ್ಷ ಜನವರಿ ಬರುತ್ತಿದ್ದಂತೆ ದಿನಕ್ಕೆ ನೂರಕ್ಕೆ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವುದು ಚಿಂತೆಗೀಡುಮಾಡಿದೆ.
ಸರಕಾರ ಏನೇ ಪ್ರಯತ್ನ ಮಾಡಿದರೂ ಕೂಡ ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದು, ಸಾರ್ವಜನಿಕರು ಸರಕಾರ ಹೊರಡಿಸಿದ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ, ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳಾದ ವಿವಿ ಜೋತ್ಸಾö್ನ ಅವರು ಈಗಾಗಲೇ ಕರೆ ನೀಡಿದ್ದು, ಜನತೆ ಸುಖಾಸುಮ್ಮನೆ ರಾತ್ರಿ ಸಮಯದಲ್ಲಿ ರಸ್ತೆಗಳ ಮೇಲೆ ಇಳಿಯದೇ ತಮ್ಮ ತಮ್ಮ ಮನೆಯಲ್ಲಿ ಸೇಫ್ ಆಗಿ ಇದ್ದರೆ, ಕೊರೊನಾ ನಿಯಂತ್ರಣ ಸಾಧ್ಯ ಎಂದು ತಜ್ಞರ ಅಭಿಪ್ರಾಯವಾಗಿದೆ.
ಕಲಬುರಗಿ: ಇಂದು 88 ಜನರಿಗೆ ಕೊರೊನಾ ಸೋಂಕು
Total Page Visits: 871 - Today Page Visits: 2