ಖರ್ಗೆ- ಜಾಧವ್, ಪಾಟೀಲ್ ರಿಗೆ ಆಮಂತ್ರಣ

0
1054

ಕಲಬುರಗಿ: ಜನೇವರಿ 3 ಮತ್ತು 4 ರಂದು ನಡೆಯುವ ಕಾರ್ಯನಿರತ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನದಲ್ಲಿ ಗೌರವ ಅತಿಥಿಗಳಾಗಿ ಹಾಗೂ ಅತಿಥಿಗಳಾಗಿ ಪಾಲ್ಗೊಳ್ಳುವಂತೆ ಸಂಸದರು ಹಾಗೂ ಶಾಸಕರಿಗೆ ಆಮಂತ್ರಣ ನೀಡಲಾಯಿತು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮ್ಮೇಳನದ ಸಮಾರೋಪದಲ್ಲಿ ಸನ್ಮಾನ ನೆರವೇರಿಸಲು ಆಗಮಿಸುವಂತೆ ಆಮಂತ್ರಿಸಲಾಯಿತು.
ಸಮಾರೋಪಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗಮಿಸುತ್ತಿದ್ದು, ತಾವೂ ಪಾಲ್ಗೊಳ್ಳುವಂತೆ ಕೋರಲಾಯಿತು.‌

ಅದೇ ರೀತಿ ಸಂಸದ‌ ಡಾ. ಉಮೇಶ ಜಾಧವ್ ಅವರಿಗೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕೋರಲಾಯಿತು. ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್ ಅವರಿಗೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲಾಯಿತು.‌

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಆವಂಟಿ, ರಾಜ್ಯ ಸಮಿತಿ ಸದಸ್ಯ ಹಣಮಂತರಾವ ಭೈರಾಮಡಗಿ, ಖಜಾಂಚಿ ರಾಜು ದೇಶಮುಖ ಸೇರಿದಂತೆ ಮುಂತಾದವರಿದ್ದರು.

LEAVE A REPLY

Please enter your comment!
Please enter your name here