ಕಲಬುರಗಿ: ಕೋವಿಡ್ ರೂಪಾಂತರಿ ಒಮಿಕ್ರಾನ ಭೀತಿ ಹಿನ್ನಲೆ ಸುಕ್ಷೇತ್ರ ದೇವಲ ಗಾಣಗಾಪುರದ ಶ್ರೀದತ್ತ ಜಯಂತಿ ಹಾಗು ರಥೋತ್ಸವ ಕಾರ್ಯಕ್ರಮ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಡಿಸೆಂಬರ್ 18 ರಂದು ದತ್ತ ಮಹಾರಾಜರ ಜನ್ಮೋತ್ಸವ (ತೊಟ್ಟಿಲು) ಕಾರ್ಯಕ್ರಮ, ಡಿಸೆಂಬರ್ 19 ರಂದು ದತ್ತ ಜಯಂತಿ ಹಾಗೂ ರಥೋತ್ಸವ ಕಾರ್ಯಕ್ರಮ ನಡೆಯಬೇಕಿತ್ತು. ಪ್ರತಿವರ್ಷ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ರೂಡಿ ಇದೆ.
ನೆರೆಯ ಮಹಾರಾಷ್ಟ್ರದಲ್ಲಿ ಒಮಿಕ್ರಾನ ಭೀತಿ ಹೆಚ್ಚಿರುವ ಹಿನ್ನಲೆ ಹಾಗೂ ಕರ್ನಾಟಕದಲ್ಲಿ ಒಮಿಕ್ರಾನ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಢಳಿತ ಜಾತ್ರೆಗೆ ನಿಷೇಧ ಹೇರಿದೆ. ಅರ್ಚಕರು ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ದೇಗುಲ ಆವರಣದಲ್ಲೇ ಸರಳವಾಗಿ ಆಚರಿಸಲು ಮಾತ್ರ ಅನುಮತಿ ನೀಡಲಾಗಿದೆ. ಭಕ್ತರು ದೇಗುಲಕ್ಕೆ ಬರಬಾರದು ಎಂದು ಮನವಿ ಮಾಡಲಾಗಿದೆ.