ಜೋಡೆತ್ತು ಕಳ್ಳತನ: ಮೂವರ ಬಂಧನ

0
646

ಕಲಬುರಗಿ,ಡಿ.5-ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ನಡೆದ ಎತ್ತುಗಳ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ನರೋಣಾ ಪೊಲೀಸರು ಮೂರು ಜನರನ್ನು ಬಂಧಿಸಿ ಅವರಿಂದ 85 ಸಾವಿರ ರೂ.ಮೌಲ್ಯದ ಎರಡು ಬಿಳಿ ಎತ್ತು, 5 ಲಕ್ಷ ರೂ.ಮೌಲ್ಯದ ಒಂದು ಮಹಿಂದ್ರಾ ಬುಲೆರೋ ಪಿಕಪ್ ಗೂಡ್ಸ್ ವಾಹನ ಮತ್ತು 20 ಸಾವಿರ ರೂ.ನಗದು ಜಪ್ತಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಿದ್ದಾಪೂರದ ಭಾಷಾ ತಂದೆ ಸುಲೇಮಾನಸಾಬ ಖಟಗರ (29), ಬಳ್ಳಾರಿ ಜಿಲ್ಲೆಯ ಕೊಡಗಲ್ ಗ್ರಾಮದ ಭಾಷಾ ತಂದೆ ಹುಸೇನಸಾಬ ಸಯ್ಯದ್ (29) ಮತ್ತು ರಾಯಚೂರು ಜಿಲ್ಲೆಯ ಸಿಂಧನೂರಿನ ಮೊಹ್ಮದ್ ರಫೀಕ್ ತಂದೆ ಹುಸೇನಸಾಬ ಪಠಾಣ (28) ಬಂಧಿತರು.
ಎಸ್.ಪಿ ಇಶಾ ಪಂತ, ಹೆಚ್ಚುವರಿ ಎಸ್.ಪಿ ಪ್ರಸನ್ನ ದೇಸಾಯಿ, ಆಳಂದ ಡಿ.ಎಸ್.ಪಿ. ಮತ್ತು ಸಿಪಿಐ ಅವರ ಮಾರ್ಗದರ್ಶನದಲ್ಲಿ ನರೋಣಾ ಪೊಲೀಸ್ ಠಾಣೆಯ ಪಿ.ಎಸ್.ಐ ವಾತ್ಸಲ್ಯ, ಪಿ.ಎಸ್.ಐ. ಸೈಯದ್ ಮಹೇಬೂಬ (ತನಿಖೆ), ಸಿಬ್ಬಂದಿಗಳಾದ ಭಗವಂತರಾಯ, ಶಾಂತಕುಮಾರ, ಈರಣ್ಣ, ರೇವಣಸಿದ್ದಪ್ಪ, ಸತೀಶ್ಚಂದ್ರ, ಸತೀಶ, ಶರಣು, ಪ್ರದೀಪ ಅವರು ದಾಳಿ ನಡೆಸಿ ಬಾಳಿ ಕ್ರಾಸ್ ಹತ್ತಿರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here