ಕಲಬುರಗಿ, ನ. 16: ಕಲಬುರಗಿ ಮಹಾನಗರಪಾಲಿಕೆಯ ಮೇಯರ್ ಚುನಾವಣೆಗಾಗಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರುಗಳ ಸೇರ್ಪಡೆ ಮಾಡುವ ಮೂಲಕ ಬಿಜೆಪಿ ಕಾನೂನು ಬಾಹೀರವಾಗಿ ಕೆಲಸ ಮಾಡುತ್ತಿದೆ ಎಂದು ಕೆಪಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಜರಿದಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಸಂಬAಧ ಇಲ್ಲದ ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಸ್ಥಳೀಯ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ವಿಳಾಸದಲ್ಲಿ ಸೇರಿಸುವ ಮೂಲಕ ಶತಾಯಗತಾಯವಾಗಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಬಿಜೆಪಿ ಹವಣಿಸುತ್ತಿದೆ ಎಂದರು.
ಕಲಬುರಗಿ ಮಹಾನಗರಪಾಲಿಕೆ ಮೇಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಮೇಲೆ ಈ ಹೆಸರುಗಳನ್ನು ಸೇರಿಸಿದ್ದು, ಪಾಲಿಕೆಗೆ ಸದಸ್ಯರ ಚುನಾವಣೆ ನಡೆಯುವ ಮುನ್ನ ಪಟ್ಟಿಯಲ್ಲಿ ಹೆಸರು ಸೇರಿಸಬಹುದಿತ್ತು ಆದರೆ, ಕಾನೂನು ಬಾಹೀರವಾಗಿ ಸರಕಾರಿ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಬಿಜೆಪಿ ಅಡ್ಡದಾರಿಯ ಮೂಲಕ ಪಾಲಿಕೆ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಈ ಏಳು ಜನ ಎಮ್‌ಎಲ್‌ಸಿಗಳು ಕಲಬುರಗಿಗೆ ಸಂಬAಧವೆ ಇಲ್ಲ, ಎಮ್‌ಎಲ್‌ಸಿ ಚುನಾವಣೆ ಬಗ್ಗೆ ಚುನಾವಣೆ ಆಯೋಗದ ಕೆಲವೊಂದು ಮಾರ್ಗಸೂಚಿ ಹೊರಡಿಸಿದ್ದು, ಪರಿಷತ್ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳು ಆ ಪ್ರದೇಶದ ನಿವಾಸಿ ಯಾಗಿರಬೇಕೆಂಬ ನಿಯಮವು ಕೂಡ ಇದೆ, ಆದರೆ ಬರೀ ವಾಸವಾಗಿದ್ದರೇ ಸಾಲದು, ಆ ಪ್ರದೇಶದ ಮನೆಯಲ್ಲಿ ಕೆಲದಿನಗಳಿಂದ ಅವರು ತಂಗಿರಬೇಕು, ಒಂದು ದಿನ ಮಲಗದ, ಒಂದು ದಿನ ಕಲಬುರಿಗೆ ಬರವರನ್ನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಬಿಜೆಪಿಯ ಈ ಯತ್ನ ಫಲಿಸದು ಎಂದರು.
ಈಗಾಗಲೇ ಈ ಬಗ್ಗೆ ಹೈಕೋಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದೇವೆ, ಇಂತಹ ಅನ್ಯಾಯ, ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ತೀರ್ಪು ನಮ್ಮ ಪರ ಬರುವ ವಿಶ್ವಾಸವನ್ನು ಪಾಟೀಲ್ ವ್ಯಕ್ತಪಡಿಸಿದರು.