ಕ
ಬೆಂಗಳೂರು: ಅಕ್ಟೋಬರ್ 29:ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ತೀವ್ರ ಹೃದಯಾಪಘಾತದಿಂದ ನಿದನsÀ ಹೊಂದಿದ್ದಾರೆ.
ಬೆಳಿಗ್ಗೆ 11.30 ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಜಿಮ್ ಮಾಡುತ್ತಿರುವ ಸಂದರ್ಭದಲ್ಲಿ ಹಠಾತ ಕುಸಿದು ಬಿದ್ದ ಅವರನ್ನು ವಿಕ್ರಮ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಾ. ರಾಜ್ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರ ತಂಡವೇ ನಟ ಪುನಿತ್ ರಾಜ್‌ಕುಮಾರ ಅವರನ್ನು ತುರ್ತು ನಿರ್ಗಮನ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದರಾದರೂ ಅವರನ್ನು ಉಳಿಸಿಕೊಳ್ಳಲಿಕ್ಕಾಗಲಿಲ್ಲ ಹೇಳಲಾಗಿದೆ.
ನಿನ್ನೆ ರಾತ್ರಿ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಆದರೂ ಅವರು ಅದರತ್ತ ಗಂಭೀರ ಗಮನ ನೀಡಲಿಲ್ಲ.
ಪುನಿತ್ ರಾಜಕುಮಾರ ಅವರಿಗೆ 46 ವರ್ಷ ವಯಸ್ಸಾಗಿತ್ತು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆಸ್ಪತ್ರೆಯ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ರಾಜ್ಯದ ಎಲ್ಲಡೆ ಪುನಿತ್ ರಾಜ್‌ಕುಮಾರ ಅವರ ನಿಧನ ಸುದ್ದಿ ತಿಳಿಯುತ್ತಲೇ ಅಭಿಮಾನಿಗಳು, ಚಿತ್ರ ರಂಗದ ಕಲಾವಿದರು, ನಟ, ನಟಿಯರು ತೀವ್ರ ದಿಗ್ಭಾçಂತರಾಗಿದ್ದಾರೆ.