ಕಲಬುರಗಿ:ಅ.24: ಕಾಲು ಜಾರಿ ನದಿಗೆ ಬಿದ್ದ ಯುವಕನನ್ನು ಮತ್ತೋರ್ವ ರಕ್ಷಣೆ ಮಾಡಲು ಯತ್ನಿಸಿ, ಬಳಿಕ ಇಬ್ಬರೂ ನೀರುಪಾಲಾದ ಘಟನೆ ಅಫಜಲಪುರ ಪಟ್ಟಣದ ಹೊರವಲಯದಲ್ಲಿರುವ ಭೀಮಾನದಿಯಲ್ಲಿ ನಡೆದಿದೆ.
ಸಂತೋಷ್ ಬಸನಾಳ ಹಾಗೂ ರವಿ ಎಂಬುವರೆ ನೀರುಪಾಲಾದ ಯುವಕರು. ಮೊದಲು ಸಂತೋಷ್ ಬಸನಾಳ ಎಂಬಾತ ಕಾಲು ತೊಳೆಯಲು ನದಿ ದಡಕ್ಕೆ ತೆರಳಿದ್ದ. ಈ ವೇಳೆ ಆಯತಪ್ಪಿ ಬಿದ್ದು ಮುಳುಗುತ್ತಿದ್ದಾಗ ಆತನ ರಕ್ಷಣೆಗೆಂದು ರವಿ ಎಂಬಾತ ನೀರಿಗೆ ಧುಮುಕಿದ್ದಾನೆ.
ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇವರಿಬ್ಬರೂ ಜವಳ ಕಾರ್ಯಕ್ರಮಕ್ಕೆಂದು ಅಫಜಲಪುರಕ್ಕೆ ಬಂದಿದ್ದರು. ದುರಂತದಿAದ ಜವಳದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.ಮೃತದೇಹ ಪತ್ತೆಗೆ ನಿನ್ನೆಯಿಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮೀನುಗಾರರ ಸಹಾಯದಿಂದ ಹುಡುಕಾಟ ನಡೆಸಿದ್ದು, ಇಂದು ಬೆಳಗ್ಗೆ ಯುವಕ ರವಿ ಶವ ಪತ್ತೆಯಾಗಿದೆ. ಮತ್ತೋರ್ವನ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆದಿದೆ.
ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.