ಜೆಡಿಎಸ್‌ಗೆ ಮೇಯರ್ ಸ್ಥಾನಕ್ಕೆ ಪಟ್ಟು ಸಂಜೆ ವೇಳೆಗೆ ನಿರ್ಧಾರ ಸಾಧ್ಯತೆ

0
1037

ಕಲಬುರಗಿ, ಸೆ. 9: ಪಾಲಿಕೆ ಯಲ್ಲಿನ ಅತಂತ್ರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕೈ, ಕಮಲ ಪಕ್ಷಗಳು ಜೆಡಿಎಸ್ ನಾ ಯಕರ ದುಂಬಾಲು ಬಿದ್ದರೆ, ಜೆಡಿ ಎಸ್ ಪಕ್ಷ ತನಗೆ ಕಲಬುರಗಿಯಲ್ಲಿ ಮೇಯರ್ ಸ್ಥಾನಕ್ಕೆ ಬೆಂಬಲಿಸಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದೆ.
ನಾಲ್ವರು ಸದಸ್ಯರನೊಳಗೊಂಡ ಕಲ ಬುರಗಿ ಜೆಡಿಎಸ್ ನಾಯಕರುಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಪಕ್ಷದ ವರಿಷ್ಠ ದೇವೇಗೌಡ ಸೇರಿ ದಂತೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾg Àಸ್ವಾಮಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದ ರ್ಭದಲ್ಲಿ ಮೇಯರ್ ಸ್ಥಾನ ನಮಗೆ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಕಳೆದ ಎರಡು ದಿನಗ ಳಿಂದ ಬೆಂಗಳೂರಿನ ರೆಸಾ ರ್ಟನಲ್ಲಿ ತಂಗಿರುವ ನಾಯಕರು, ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾ ಯವಾಗಿ ತಾವೆ ಕಲಬುರಗಿ ಯಲ್ಲಿ ಪಾಲಿಕೆ ಯಲ್ಲಿ ಮೇಯರ್ ಸ್ಥಾನಗಿ ಟ್ಟಿಸಿಕೊಳ್ಳಲು ತಂತ್ರ ರೂಪಿಸಿ, ಕಾಂಗ್ರೆಸ್, ಬಿಜೆಪಿ ಪಕ್ಷ ಶಾಕ್ ನೀಡಿವೆ.

ಅತೀ ದೊಡ್ಡ ಪಕ್ಷವಾಗಿ ಪಾಲಿಕೆ ಯಲ್ಲಿ ಹೊರಹೊಮ್ಮಿರುವ ಕಾಂ ಗ್ರೆಸ್ 27 ಸ್ಥಾನದೊಂದಿಗೆ ಓರ್ವ ಪಕ್ಷೇತರ ಸದಸ್ಯರ ಬೆಂಬಲದೊAದಿ ಗೆ ಮ್ಯಾಜಿಕ್ ನಂ. 28ಕ್ಕೆ ತಲುಪಿದ ರೂ ಕೂಡ ಇಲ್ಲಿ ಆ ಪಕ್ಷಕ್ಕೆ ಅಧಿಕಾರ ಸಿಗುತ್ತಿಲ್ಲ.
ಇತ್ತ ಬಿಜೆಪಿ 23 ಸ್ಥಾನದೊಂದಿಗೆ ಎಂಎಲ್.ಎ. ಎಂ.ಪಿ ಸೇರಿ 6 ಜನರ ಮತದಾನ ಹಕ್ಕು ಹೊಂದಿದ್ದು, ಅದಕ್ಕೆ ಪಾಲಿಕೆ ಚುಕ್ಕಾಣಿ ಹಿಡಿಯಲು ಇÀÄ್ನ ಮೂರು ಸದಸ್ಯರ ಕೊರತೆ ಕಾಡುತ್ತಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ. ದೇ ವೇಗೌಡ ಅವರು ಕಾಂಗ್ರೆಸ್ ಜೊತೆ ಗೆ ಮೈತ್ರಿಗೆ ಮುಂದಾಗಿ ತಮ್ಮ ಒಲವು ತೋರಿದರೆ, ಇತ್ತ ಹೆಚ್.ಡಿ. ಕುಮಾ ರಸ್ವಾಮಿ ಮಾತ್ರ ಸಂಜೆವರೆಗೆ ಕಾದು ನೋಡಿ ಎನ್ನುವ ಮೂಲಕ ಅನಿಶ್ಚಿತ ತೆ ಪಾಲಿಕೆಯಲ್ಲಿ ಮುಂದುವರೆದಿದೆ.
ಏನಾದರೂ ಒಂದು ಹಂತದ ಲ್ಲಿ ಕಾಂಗೈನೊAದಿಗೆ ಜೆಡಿಎಸ್ ಕೈ ಜೊಡಿಸಿದರೆ ಕಮಲ ಪಕ್ಷದ ಮುಂ ದಿನ ನಡೆಯ ಬಗ್ಗೆ ಕೇಸರಿ ನಾಯಕ ರು ಚರ್ಚೆ ನಡೆಸುತ್ತಿದ್ದು, ಈ ಹಿಂದೆ ಕಲಬುರಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತವಿದ್ದರೂ ಕೂಡ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ಸಿಗಲಿಲ್ಲ, ಆ ಹಂತದಲ್ಲಿ ಬಿಜೆಪಿ ಹೆಣೆದ ತಂತ್ರ ದಿಂದ ಸೇಡಂ ಶಾಸಕ ರಾಜಕುಮಾ ರ ಪಾಟೀಲ್ ತೇಲ್ಕೂರ ಅವರ ಸಾರಥ್ಯದಲ್ಲಿ ಬ್ಯಾಂಕ್‌ಗೆ ಬಿಜೆಪಿ ಲಗ್ಗೆ ಇಟ್ಟು ಈಗ ಆಡಳಿತ ನಡೆಸುತ್ತಿದ್ದು ಇಲ್ಲಿ ಸ್ಮರಿಸಬಹುದಾಗಿದೆ.
ಸ್ಥಳೀಯ ಮಟ್ಟದಲ್ಲಿ ತಂತ್ರ ಗಾರಿಕೆ ಹೆಣೆಯಿತ್ತುರುವ ಬಿಜೆಪಿ ಈಗ ಪಾಲಿಕೆಯಲ್ಲಿ ಮತ್ತೇ ಆಪರೇಷನ್ ಕಮಲದ ಮೂಲಕ ಕಮಾಲ್ ಮಾಡಲಿದ್ದಾರೆ ಎಂಬುದು ರಾಜಕೀ ಯ ವಲಯದಲ್ಲಿ ಚರ್ಚೆ ಆಗುತ್ತಿದೆ.
ಚುನಾವಣೆಯ ಫಲಿತಾಂಶ ಬಂದ 2 ಗಂಟೆಯಲ್ಲಿಯೇ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಕೇಸರಿ ನಾ ಯಕರುಗಳೂ ಆಗಲೇ ತಮ್ಮ ಪಕ್ಷ ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದ್ದು, ಆ ನಿಟ್ಟಿನಲ್ಲಿ ಅಂದಿನಿAದ ಲೇ ಜೆಡಿಎಸ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಬೆಂಬಲ ಖಂಡಿತವಾಗಿಯೂ ಅಭಿ ವೃದ್ಧಿ ಪರವಾಗಿರುವ ವಿಶ್ವಾಸ ವ್ಯಕ್ತ ಪಡಿಸಿದ್ದರು, ಆಪರೇಷನ್ ಕಮಲದ ಬಗ್ಗೆ ಸುಳಿವು ನೀಡದಿದ್ದರೂ, ಅಂತಹ ಪರಿಸ್ಥಿತಿ ಇಲ್ಲಿ ಉದ್ಭವಿಸು ವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದರು, ಆದರೆ ಅಂತಹ ಪರಿ ಸ್ಥಿತಿ ಈಗ ಉದ್ಭವಿಸಿದರೆ ಮತ್ತೇ ಆಪರೇಷನ್ ಕಮಲಕ್ಕೆ ಕೇಸರಿ ಪಡೆ ಮುಂದಾಗಲಿದೆ ಎಂದು ನಂಬಲ ರ್ಹ ಮೂಲಗಳಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here