

ಕಲಬುರಗಿ, ಸೆ. 9: ಕಲಬುರಗಿ ಮಹಾನಗರಪಾಲಿಕೆಯ ಚುನಾವಣೆಯ ಫಲಿತಾಂಶದಿAದ ಉಂಟಾದ ಅತಂತ್ರತೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕೋವಿಡ್ ಉಸ್ತುವಾರ ಸಚಿವ ಮುರುಗೇಶ ನಿರಾಣಿ ನಾವು ಫೈನಲ್‌ಗೆ ಬಂದಿದ್ದೇವೆ, ಅದರಲ್ಲಿ ನಾವೇ ಗೆಲ್ತೇವೆ ಎಂದಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಲಿಕೆಯಲ್ಲಿ ಬಿಜೆಪಿ ಪಕ್ಷದ ಆಡಳಿತವಿದ್ದರೆ ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದು, ಹೆಚ್ಚುಹೆಚ್ಚು ಅನುದಾನದಿಂದ ಮತ್ತಷ್ಟು ಸುಂದರ ಜೊತೆಗೆ ಅಭಿವೃದ್ಧಿ ಕಾರ್ಯ ಗಳು ನಡೆಯುವ ದೃಷ್ಟಿಯಿಂದ ಜೆಡಿಎಸ್ ನಮ್ಮೊಂದಿಗೆ ಬರಲಿದೆ ಎಂದು ಕೂಡ ತಿಳಿಸಿದರು.
ಸಧ್ಯ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಯಾವುದೇ ಆಶ್ವಾಸನೆ ನೀಡಿಲ್ಲ, ಆದರೆ ಯಾವುದೇ ಷರತ್ತಿಲ್ಲದೇ ಬಿಜೆಪಿಗೆ ಬೆಂಬಲಿಸೋ ವಿಶ್ವಾಸವನ್ನು ಸಹ ನಿರಾಣಿ ವ್ಯಕ್ತಪಡಿಸಿದರು.
ಸುರಾನಾ ಪ್ರತಿಕ್ರಿಯೆ :
ಕಲಬುರಗಿ ಸೇರಿದಂತೆ ರಾಜ್ಯದ ಮೂರು ಮಹಾನಗರಪಾಲಿಕೆಗಳಳ್ಲಿ ನಮ್ಮ ಪಕ್ಷದವರೇ ಮೇಯರ್ ಆಗ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ ಅವರು ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಲಬುರಗಿ ಭೇಟಿ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಅವರು ಹುಬ್ಭಳ್ಳಿ, ಬೆಳಗಾಂವಿ ಮತ್ತು ಕಲಬುರಗಿ ಈ ಮೂರು ಪಾಲಿಕೆಗಳಲ್ಲಿ ಕೇಸರಿ ಧ್ವಜ ಹಾರಿದ್ದು, ಮೇಯರ್ ಕೂಡ ಕೇಸರಿ ಪಡೆಯದ್ದೆ ಆಗಿರುತ್ತದೆ ಎಂದರು.
ಕಲಬುರಗಿಯಲ್ಲಿ ಬಿಜೆಪಿ ಸಾಧಿಸಿದ 23 ಸ್ತಾನಗಳ ಜೊತೆಗೆ ನಮ್ಮ ಇತರೆ 6 ಮತಗಳು ಸೇರಿ ಜೆಡಿಎಸ್ ಬೆಂಬಲ ಖಂಡಿತವಾಗಿಯೂ ಪಡೆದು ನಾವು ಮೇಯರ್ ಆಗುತ್ತೇವೆ ಎಂದರು.