ಕಲಬುರಗಿ, ಆಗಸ್ಟ. 20-ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಮತ್ತೇ ಭೂಮಿಯಿಂದ ಭಾರೀ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿದೆ.
ಶುಕ್ರವಾರ ಬೆಳಿಗ್ಗೆ 9.53ರ ಸುಮಾರಿಗೆ ಭೂಮಿಯಿಂದ ಭಾರೀ ವಿಚಿತ್ರ ರೀತಿಯಲ್ಲಿ ಸದ್ದುಗೊಂಡಿದ್ದು ಇದು ಇಂದು ಮಾತ್ರ ಅಲ್ಲ ಗ್ರಾಮದಲ್ಲಿ ಮೇಲಿಂದ ಮೇಲೆ ಭೂಮಿಯಿಂದ ಈ ರೀತಿಯ ಸದ್ದಿನಿಂದ ಗ್ರಾಮಸ್ಥರಲ್ಲಿ ಭೂ ಕಂಪನದ ಅನುಭವ ಆದಂತಾಗಿದೆ.
ಭೂಕAಪನವೋ ಅಥವಾ ಇನ್ನಾವೊದೋ ಸದ್ದ ಎಂಬ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿದೆ.
ಈವರೆಗೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ ಬಗ್ಗೆ ವರದಿಯಾಗಿಲ್ಲ.