ಕಲಬುರಗಿಯಲ್ಲಿ ಕಾಟಾಚಾರಕ್ಕೆ ಸೀಮಿತವಾದ ವಿಕೇಂಡ್ ಕರ್ಫ್ಯೂ ಕಣ್ಣಿ ಮಾರುಕಟ್ಟೆಯಲ್ಲಿ ಅಬ್ಬಬ್ಬ ಜನವೋ ಜನ!

0
899

ಕಲಬುರಗಿ, ಆಗಸ್ಟ. ೦೮: ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕರೊನಾ ಮೂರನೇ ಅಲೆಯ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸರಕಾರ ವಾರಾಂತ್ಯದ ಎರಡು ದಿನ ಸಂಪೂರ್ಣ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ನಿಷೇದಾಜ್ಞೆ ಹೊರಡಿಸಿದ್ದು, ಇದು ಕಲಬುಗಿಯಲ್ಲಿ ಕಾಟಾಚಾರಕ್ಕೆ ಮಾತ್ರ ಸೀಮಿತವಾದಂತೆ ಕಂಡುಬರುತ್ತಿದೆ.

ನಗರದ ಕಣ್ಣಿ ಮಾರುಕಟೆನಲ್ಲಿ ತರಕಾರಿ ಖರೀದಿಯ ಭರಾಟೆಯಲ್ಲಿ ಜನರು ಮಾಸ್, ಸಾಮಾಜಿಕ ಅಂತರವಿಲ್ಲದೇ ನಿರತರಾಗಿದ್ದು ನೋಡಿದರೆ ಈ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕಿನಿAದ ವಿನಾಯಿತಿ ನೀಡಿದಂತೆ ಕಾಣುತ್ತಿದೆ. ಎಲ್ಲಿ ನೋಡಿದರೂ ಅಲ್ಲಿ ಜನವೋ ಜನ! ಇದು ವಿಕೇಂಡ್ ಕರ್ಫ್ಯೂ ಗಾಳಿಗೆ ತೂರಿದಂತಾಗಿದೆ.
ತರಕಾರಿ, ಹಣ್ಣು, ಹಂಪಲು, ದಿನಸಿ ಅಂಗಡಿಗಳನ್ನು ಮದ್ಯಾಹ್ನದ ೨ರ ವರೆಗೆ ತೆರೆಯಲು ಸರಕಾರ ಅವಕಾಶ ಕಲ್ಪಿಸಿದೆ, ಆದರೆ ಇದ್ಯಾವುದರಲ್ಲಿಯೂ ಕೋವಿಡ್ ನಿಯಮದೊಂದಿಗೆ ವ್ಯವಹಾರಕ್ಕೆ ಅನುಮತಿಸಿದ್ದು, ಆದರೆ ಎಲ್ಲಿಯೂ ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗುತ್ತಿಲ್ಲ.
ಸರಕಾರದ ಆದೇಶ ಜೊತೆಗೆ ಸಾರ್ವಜನಿಕರು ಕೂಡ ಕೊರೊನಾದಂತಹ ಮಹಾಮಾರಿಗೆ ಕಡಿವಾಣ ಹಕಲು ಸ್ವಂವಾಗಿ ನಿಯಮ ಪಾಲಿಸಿ, ಸರಕಾರದೊಂದಿಗೆ ಕೈಜೊಡಿಸಿದಾಗ ಮಾತ್ರ, ಕೊರೊನಾ ಸೋಂಕನ್ನು ಹೊಡೆದೊಡಿಸಲು ಸಾಧ್ಯ.

LEAVE A REPLY

Please enter your comment!
Please enter your name here