ವಿಕೆಂಡ್ ಕರ್ಫ್ಯೂ: ನಗರದ ಪ್ರದಕ್ಷಿಣೆ ನಡೆಸಿದ ಡಿಸಿಪಿ ಸುಖಾಸುಮ್ಮನೆ ಓಡಾಡುತ್ತಿದ್ದ ವಾಹನಗಳ ಸೀಜ್

0
905

ಕಲಬುರಗಿ, ಆಗಸ್ಟ. 07: ನೆರೆ ರಾಜ್ಯಗಳಲ್ಲಿ ಹೆಚ್ಚಿದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ವೀಕೇಂಡ್ ರ‍್ಫ್ಯೂ ಕಲಬುರಗಿಯಲ್ಲಿ ಬೇಕಾ ಬಿಟ್ಟಿ ಓಡಾಡುತ್ತಿದ್ದ ಜನರ ವಾಹನಗಳನ್ನು ಸೀಜ್ ಮಾಡುವ ಮೂಲಕ ಡಿಸಿಪಿ ಬಿಸಿ ಮುಟ್ಟಿಸಿದರು.

ವಿಕೆಂಡ್ ಲಾಕ್‌ಡೌನ್ ಹಿನ್ನೆಲೆಯ್ಲಲಿ ಡಿಸಿಪಿ ಅಡ್ಡೂರು ಶ್ರೀನವಾಸಲು ಅವರು ಸಿಟಿ ರೌಂಡ್ಸ್ ನಡೆಸಿ, ಹಲವಡೆ ರಸ್ತೆಗಿಳಿದು ಹೋಗಿ ಬರುವ ವಾಹನಗಳನ್ನು ಪರಿಶೀಲಿಸಿ ಸುಖಾಸುಮ್ಮನೆ ಓಡಾಡುತ್ತಿರುವ ವಾಹನಗಳನ್ನು ವಶಕ್ಕೆ ಪಡೆದು, ಟಂಟಂಗಳಲ್ಲಿ ಪೋಲಿಸ್ ಪರೇಡ್ ಮೇದಾನಕ್ಕೆ ಕಳುಹಿಸಿದರು.
ನಗರದ ರ‍್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತ, ಜಗತ್ ರ‍್ಕಲ್, ಸೂಪರ್ ಮಾಕೇಟ್, ಕಿರಾಣಾ ಬಜಾರ ಸೇರಿದಂತೆ ವಿವಿಧೆಡೆ ಸಿಟಿ ರೌಂಡ್ಸ್ ನಡೆಸಿ, ಅನಾವಶ್ಯಕ ತಿರುಗಾಡುತ್ತಿದ್ದವ್ರಿಗೆ ಶಾಕ್ ಕೊಟ್ಟ ಡಿಸಿಪಿ ಶ್ರೀನಿವಾಸಲು ಹಲವಡೆ ಕಾರ್‌ಗಳನ್ನು ಸಹ ಸೀಜ್ ಮಾಡಿದರು.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆ, ಮೆಡಿಕಲ್ ಸೇರಿದಂತೆ ಅವಶ್ಯಕ ಕೆಲಸಗಳಿಗೆ ಮಾತ್ರ ಓಡಾಡುವಂತೆ ವಾಹನ ಚಾಲಕರಿಗೆ, ಕಾರುಗಳ ಮಾಲಿಕರುಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಇದಕ್ಕೂ ಮುಂಚೆ ಸೂಪರ್ ಮರ‍್ಕೆಟ್‌ನಲ್ಲಿ ವೀಕೆಂಡ್ ರ‍್ಫ್ಯೂಗೆ ಕ್ಯಾರೆ ಅನ್ನದ ಹಲವಾರು ಅಂಗಡಿ, ಮುಂಗಟ್ಟುಗಳ ಮಾಲಿಕರುಗಳಿಗೆ ಬ್ರಹ್ಮಪೂರ ಪಿಐ ಬಿಸಿ ಮುಟ್ಟಿಸುವುದರ ಮೂಲಕ ಎರಡು ಮೂರು ಬಾರಿ ಮರ‍್ಕೆಟ್ ರೌಂಡ್ ನಡೆಸಿ, ಬೀದಿ ಬೀದಿ ಬದಿಯಲ್ಲಿ ಬಂಡಿಗಳಲ್ಲಿ ಹಣ್ಣು ಮಾರಾಟ ಮಾಡುವರನ್ನು ಎಚ್ಚರಿಕೆ ನೀಡಿ, ಒಂದೆ ಕಡೆ ನಿಲ್ಲದೇ, ಓಣಿ ಗಳಲ್ಲಿ ಬಂಡಿಯಲ್ಲಿ ಮಾರಾಟಕ್ಕೆ ಸೂಚನೆ ನೀಡಿದರು.
ಆದರೂ ಕೆಲವು ಬಟ್ಟೆ ಅಂಗಡಿಗಳು, ಸ್ಟೇಷನರಿ ಶಾಪ್‌ಗಳು, ಝರಾಕ್ಸ್, ಟೈಪರೆಟಿಂಗ್ ಶಾಪ್‌ಗಳು ರ‍್ಧ ಶೆಟ್ಟರ್ ತೆರೆದು ವಹಿವಾಟು ನಡೆಸುತ್ತಿದ್ದು ಅಲ್ಲಲ್ಲಿ ಕಂಡು ಬಂದಿತ್ತು.
ನಗರದ ಸಂಗತ್ರಾವಾಡಿ ಹಿಡಿದು, ಮಹಾತ್ಮಾ ಬಸವೇಶ್ವರ ಕಾಲೋನಿ, ಆರ‍್ಶ ನಗರ, ರ‍್ಗಾ ಏರಿಯಾಗಳಲ್ಲಿ ರ‍್ಫ್ಯೂಗೆ ನೂರಕ್ಕೆ 90ರಷ್ಟು ಜನರು ಕ್ಯಾರೆ ಅನ್ನದೇ ತಮ್ಮ ತಮ್ಮ ವ್ಯಾಪಾರ ವಹಿವಾಟಿನಲ್ಲಿ ನಿರತರಾಗಿದ್ದರು.

ಇನ್ನು ಕೋವಿಡ್ -19ರ ಮರ‍್ಗಸೂಚಿಯಂತೆ ಹೋಟೆಲ್, ಬೇಕರಿಗಳಲ್ಲಿ ಪರ‍್ಸಲ್ ಮಾತ್ರ ಅನುಮತಿ ನೀಡಲಾಗಿದ್ದು, ಆದರೆ ಎಲ್ಲಡೆ ಹೊಟೇಲ್‌ಗಳಲ್ಲಿ ಜನ ಜಂಗುಳಿ ಸೇರಿತ್ತು.
ಅವಶ್ಯಕ ವಸ್ತುಗಳಿಗಾಗಿ ಮಾತ್ರ ಸ್ವಲ್ಪ ಮಧ್ಯಾಹ್ನ 2 ಗಂಟೆಯವರೆಗೆ ಸಡಿಲಿಕೆ ನೀಡಿದ್ದು, ಅದರಲ್ಲೂ ಹಣ್ಣು, ಹಾಲು, ತರಕಾರಿ, ದಿನಸಿ ಅಂಗಡಿಗಳು ಎಂದಿನಂತೆ ಸರಕಾರದ ಮರ‍್ಗಸೂಚಿಯಂತೆ ಕರ‍್ಯನರ‍್ವಹಿಸುತ್ತಿದ್ದವು.
ಬಾರ್ ಮತ್ತು ಮದ್ಯದ ಅಂಗಡಿಗಳು ಕೂಡ ಮಧ್ಯಾಹ್ನ 2ರ ನಂತರ ಕಡ್ಡಾಯವಾಗಿ ಮುಚ್ಚುವಂತೆ ಸರಕಾರದ ಆದೇಶ ಇರುವ ಬಗ್ಗೆ ಅಬಕಾರಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದು, ಯಾವುದೇ ಮದ್ಯದಂಗಡಿಗಳು, ಎಂಅರ್‌ಪಿ ಔಟ್‌ಲೆಟ್‌ಗಳು ಮಧ್ಯಾಹ್ನದ ನಂತರ ಸಂಪರ‍್ಣವಾಗಿ ಬಂದ್ ಮಾಡಲು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here