ಕಲಬುರಗಿ, ಆಗಸ್ಟ. 04:ಜಮೀನಿನ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮಹಿಳೆಯೋರ್ವಳ ಮೇಲೆ ಗುಂಡಿನ ದಾಳಿ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಬುಧುವಾರ ನಡೆದ ಬಗ್ಗೆ ವರದಿಯಾಗಿದೆ.
ಕ್ಷಲಕ ಕಾರಣಕ್ಕೆ ಜಮೀನಿನ ವಿಚಾರವಾಗಿ ನಡೆದ ವಾಗ್ವಾದಲ್ಲಿ ಕಡಗಂಚಿ ಗ್ರಾಮದ ನಿರ್ಮಲ ಸಾತಲಿಂಗಪ್ಪ (38) ಎಂಬ ಮಹಿಳೆ ಮೇಲೆಯೆ ಗುಂಡಿನ ದಾಳಿ ನಡೆದಿದೆ.
ಅದೇ ಗ್ರಾಮದ ನಾಗರಾಜ ವಾಣಿ ಎಂಬಾತನೆ ಗುಂಡು ಹಾರಿಸಿದ ಆರೋಪಿಯಾಗಿದ್ದು, ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಎರಡನೇ ಗುಂಡು ನೇರವಾಗಿ ನಿರ್ಮಲಾ ಭುಜಕ್ಕೆ ತಾಗಿ, ಗಾಯಗೊಂಡಿದ್ದಾಳೆ.
ಆರೋಪ ನಾಗರಾಜನನ್ನು ಬಂಧಿಸಲಾಗಿದ್ದು, ಈ ಸಂಬAಧ ನರೋಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.