ಬೊಮ್ಮಾಯಿ ಸೇನೆಯಲ್ಲಿ ಲಿಂಗಾಯಿತರಿಗೆ ಸಿಂಹಪಾಲು 13 ಜಿಲ್ಲೆಗಳಿಗೆ ಸಂಪುಟದಲ್ಲಿ ಸಿಗದ ಪ್ರಾತಿನಿಧ್ಯ

0
1323

ಬೆಂಗಳೂರು, ಆಗಸ್ಟ 04: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಸಂಪುಟದ ಕಸರತ್ತು ಮುಕ್ತಾಯವಾಗಿದ್ದು, ನೂತನವಾಗಿ ಸಂಪುಟಕ್ಕೆ 29 ಜನ ಶಾಸಕರ ಹೆಸರು ಅಂತಿಮವಾಗಿದೆ.
ಪ್ರಾದೇಶಿಕ ಸಮಾನತೆ ಹಾಗೂ ಜಾತಿವಾರು ಲೆಕ್ಕಾಚಾರ, ಹೊಸಬರಿಗೆ ಮತ್ತು ಯುವಕರಿಗೆ ಈ ಬಾರಿಯ ಸಂಪುಟದಲ್ಲಿ ಆದ್ಯತೆ ನಿಡಲಾಗಿದೆ.
ರಾಜ್ಯದ 13 ಜಿಲ್ಲೆಗಳಿಗೆ ಈ ಬಾರಿ ಬೊಮ್ಮಾಯಿ ಸಂಪುಟದಲ್ಲಿ ಆದ್ಯತೆ ಸಿಗದಿದ್ದು, ಮತ್ತೇ ನಿರಾಶೆ ಮೂಡಿದಂತಾಗಿದೆ.
ಬೊಮ್ಮಾಯಿ ಸಂಪುಟದಲ್ಲಿ ಬೆಂಗಳೂರು ನಗರಕ್ಕೆ ಬಂಪತ್ ಸಚಿವ ಸ್ಥಾನಿ ಸಿಕ್ಕಿದು ಒಟ್ಟು 7 ಜನರು ಬೆಂಗಳೂರು ಕ್ಷೇತರ್ ಪ್ರತಿನಿಧಿಸುವ ಸಚಿವರಾಗುತ್ತಿದ್ದಾರೆ.
ಸಂಪುಟದಲ್ಲಿ ಲಿಂಗಾಯಿತ ಸಮುದಾಯಕ್ಕೆ ಸಿಂಹಪಾಳು ಸಿಕ್ಕಿದ್ದು, ಲಿಂಗಾಯಿತ ಸಮುದಾಯದಿಂದ 8 ಶಾಸಕರು ಸಚಿವರಾಗುತ್ತಿದ್ದು, ನಂತರದಲ್ಲಿ ಒಕ್ಕಲಿಗ ಕೋಟಾದಡಿ 7 ಹಾಗೂ ಹಿಂದುಳಿದ ವರ್ಗಗಳಿಗೆ ಒಕ್ಕಲಿಗರಿಗೆ ಸಮನಾಗಿ 7 ಬಂಪರ್ ಸಚಿವ ಸ್ಥಾನಗಳು ಸಿಕ್ಕಿದೆ.
ಉಳಿದಂತೆ ಎಸ್ಸಿ 3, ಎಸ್ಟಿ 01, ರೆಡ್ಡಿ 1, ಬ್ರಾಹ್ಮಣ-2 ಮತ್ತು ಓರ್ವ ಮಹಿಳೆಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ಬಿಎಸ್ವೆöÊ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ ಶೆಟ್ಟರ್, ಸುರೇಶ ಕುಮಾರ, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ, ಆರ್. ಶಂಕರ್, ಶ್ರೀಮಂತ ಪಾಟೀಲ್ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಲಕ್ಷö್ಮಣ ಸವದಿ ಅವರಿಗೆ ಈ ಬಾರಿಯ ಸಂಪುಟದಿAದ ಕೈಬಿಡಲಾಗಿದೆ.
ಮುಖ್ಯಮಂತ್ರಿಗಳು ಸಂಪುಟಕ್ಕೆ ಸೇರ್ಪಡೆಗಾಗಿ ಪ್ರಮಾಣ ವಚನ ಸ್ವೀಕರಕ್ಕೆ ಬರುವಂತೆ ಕರೆ ಮಾಡಲ್ಟಟ್ಟ ನೂತನ ಸಚಿವರುಗಳೆಂದರೆ

  1. ಕೆ.ಎಸ್. ಈಶ್ವರಪ್ಪ-ಶಿವಮೊಗ್ಗ
  2. ಆರ್. ಅಶೋಕ-ಪದ್ಮನಾಭ ನಗರ
  3. ಡಾ. ಸಿ.ಎನ್. ಅಶ್ವತ್ಥ ನಾರಾಯಣ-ಮಲ್ಲೇಶ್ವರಂ
  4. ಬಿ.ಶ್ರೀರಾಮುಲು- ಮೊಳಕಾಲುಮ್ಮೂರು,
  5. ಉಮೇಶ್ ಕತ್ತಿ- ಹುಕ್ಕೇರಿ
  6. ಎಸ್.ಟಿ.ಸೋಮಶೇಖರ್- ಯಶವಂತಪುರ
  7. ಡಾ.ಕೆ.ಸುಧಾಕರ್ -ಚಿಕ್ಕಬಳ್ಳಾಪುರ
  8. ಬೈರತಿ ಬಸವರಾಜ – ಕೆ ಆರ್ ಪುರಂ
  9. ಮುರುಗೇಶ್ ನಿರಾಣಿ – ಬಿಳಿಗಿ
  10. ಶಿವರಾಂ ಹೆಬ್ಬಾರ್- ಯಲ್ಲಾಪುರ
  11. ಶಶಿಕಲಾ ಜೊಲ್ಲೆ- ನಿಪ್ಪಾಣಿ
  12. ಕೆ.ಸಿ. ನಾರಾಯಣ್ ಗೌಡ – ಕೆಆರ್ ಪೇಟೆ
  13. ಸುನೀಲ್ ಕುಮಾರ್ -ಕಾರ್ಕಳ
  14. ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ
  15. ಗೋವಿಂದ ಕಾರಜೋಳ-ಮುಧೋಳ
  16. ಮುನಿರತ್ನ- ಆರ್ ಆರ್ ನಗರ
  17. ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
  18. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
  19. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
  20. ಹಾಲಪ್ಪ ಆಚಾರ್ ಯಲಬುರ್ಗಾ
  21. ಶಂಕರ್ ಪಾಟೀಲ್ ಮುನೇನಕೊಪ್ಪ
  22. ಕೋಟಾ ಶ್ರೀನಿವಾಸ ಪೂಜಾರಿ ಎಂ ಎಲ್ ಸಿ
  23. ಪ್ರಭು ಚೌವ್ಹಾಣ್ ಔರಾದ್
  24. ವಿ ಸೋಮಣ್ಣ -ಗೋವಿಂದ್ ರಾಜನಗರ.
  25. ಬಿ.ಸಿ. ನಾಗೇಶ-ತಿಪ್ಪಟೂರು
  26. ಎಸ್. ಅಂಗಾರ
  27. ಆನಂದಸಿAಗ್-ವಿಜಯನಗರ
  28. ಸಿ.ಸಿ. ಪಾಟೀಲ್
  29. ಬಿ.ಸಿ. ಪಾಟೀಲ್
    ಪ್ರಥಮ ಬಾರಿಗೆ ಸಚಿವ ಸ್ಥಾನ ಅದೃಷ್ಟ ಒಲಿದಿರುವುದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ, ಕಾರ್ಕಳದ ಪಿ. ಸುನೀಲ್ ಕುಮಾರ, ರಾಜರಾಶ್ವರಿ ನಗರದ ಶಾಸಕ ಮುನಿರತ್ನ, ತಿಪ್ಪಟೂರು ಶಾಸಕ ಬಿ.ಸಿ. ನಾಗೇಶ.
    13 ಜಿಲ್ಲೆಗಳಿಗೆ ಒಲಿಯದ ಸಚಿವ ಸ್ಥಾನ :
    ಮೈಸೂರು, ಕಲಬುರಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ
    ಕೋಲಾರ, ಯಾದಗಿರಿ ಮತ್ತು ಚಿಕ್ಕಮಗಳೂರು ಈ ಜಿಲ್ಲೆಗಳಿಗೆ ಬೊಮ್ಮಾಯಿ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.
    ಅಲ್ಲದೇ ರಾಜ್ಯದ ಆರು ಜಿಲ್ಲೆಗಳಿಗೆ ಡಬಲ್ ಧಮಾಕ್ ಸಿಕ್ಕಿದ್ದು, ಇಬ್ಬರಿಬ್ಬರು ಸಚಿವರು ಪ್ರತಿನಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here