ಕೋವಿಡ್‌ನಿಂದ ನಿಧನರಾದ ಕಲಬುರಗಿಯ ಇಬ್ಬರು ಪತ್ರಕರ್ತರಿಗೆ 5 ಲಕ್ಷ ರೂ. ಪರಿಹಾರ ಧನ ಮಂಜೂರು

0
1289

ಬೆAಗಳೂರು, ಜುಲೈ 29: ಕರೊನಾ ಎರಡನೇ ಅಲೆಯಲ್ಲಿ ಕೋವಿಡಗೆ ಬಲಿಯಾದ ಕಲಬುರಗಿಯ ಇಬ್ಬರು ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಐದು ಲಕ್ಷ ರೂ. ಮಂಜೂರು ಮಾಡಿ ಸರಕಾರ ಆದೇಶ ಹೊರಡಿಸಿದೆ.

ಕಲಬುರಗಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯಸ್ಥರಾಗಿದ್ದ ಜಯತೀರ್ಥ ಕಾಗಲಕರ್ ಅವರಿಗೆ ಹಾಗೂ ಗ್ರಿನೋಬಲ್ಸ್ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿದ್ದ ಗುಣಶೇಖರ ಸ್ವಾಮಿ ಅವರುಗಳು ಕೊರೊನಾಗೆ ಬಲಿಯಾಗಿದ್ದರಿಂದ ಅವರ ಪರಿವಾರದವರು ಸಂಕಷ್ಟಕ್ಕಿಡಾಗಿದ್ದ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಅವರು ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೂಡಲೇ ಸರಕಾರದಿಂದ 5 ಲಕ್ಷ ರೂ. ಪರಿಹಾರ ಧನ ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ,
ಸದರಿಯವರ ಆರ್ಥಿಕ ಪರಿಸ್ಥಿತಿ, ಪರಿಹಾರ ಪಡೆಯಲು ಅರ್ಹರಿದ್ದಲ್ಲಿ, ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ವಿವರವಾದ ವರದಿಯನ್ನು ಸಲ್ಲಿಸುವುದರೊಂದಿಗೆ , ಅರ್ಹ ಫಲಾನುಭವಿಗಳಿಗೆ ಸಹಾಯ ಧನದ ಮೊತ್ತವನ್ನು ಆರ್.ಟಿ.ಜಿ.ಎಸ್. ಮುಖಾಂತರ ವರ್ಗಾಯಿಸಲು ಜಿಲ್ಲಾ ಧಿಕಾರಿಗಳ ಬ್ಯಾಂಕ್ ಖಾತೆ ಸಂಖ್ಯೆ ಐಎಫ್‌ಎಸ್‌ಸಿ ಕೋಡ್, ಆರ್.ಟಿ.ಜಿ.ಎಸ್ ಕೋಡ್, ಬ್ಯಾಂAಕ್ ಖಾತೆ ಇತ್ಯಾದಿ ವಿವರಗಳನ್ನು ಸಹ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ವಿವಿ ಜೋತ್ಸಾö್ನ ಅವರಿಗೆ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಪಿ. ಎಸ್. ಗೋಪಾಲ್ ಅವರು ನಿರ್ದೇಶನ ನೀಡಿದ್ದಾರೆ.
ಕೋವಿಡ್‌ಗೆ ಬಲಿಯಾದ ಇಬ್ಬರು ಪತ್ರಕರ್ತರ ಪರಿವಾರ ಆರ್ಥಿಕ ಪರಿಸ್ಥಿತಿ ತುಂಬಾ ಚಿಂತಾಜನಕವಾದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಎಂ. ಠಾಕೂರ, ರಾಜ್ಯ ರ‍್ಯಕಾರಿಣಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವೇಂದ್ರಪ್ಪ ಕಪನೂರ ಅವರುಗಳು ಕೆಯುಡ್ಲೂö್ಯಜಿ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ಅವರಿಗೆ ದಾಖಲೆಗಳೊಂದಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವಂತೆ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಸ್ಪಂದಿಸಿ, ಸಂಕಷ್ಟಕ್ಕೀಡಾದ ಕುಟುಂಬಕ್ಕೆ ಹಣಕಾಸಿನ ನೆರವು ನೀಡಲು ಸಂಘದ ಮನವಿಗೆ ಸ್ಪಂದಿಸಿದ ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸರಕಾರದಿಂದ ಹಣಕಾಸಿನ ನೆರವು ಒದಗಿಸಿದ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂAದ ತಗಡೂರ ಅವರಿಗೂ ಕಲಬುರಗಿ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಕರ‍್ಯಕಾರಿಣಿ ಸಮಿತಿಯ ಸದಸ್ಯರುಗಳು ಅಭಿನಂದನೆಗಳನ್ನು ಸಲ್ಲಿದ್ದಾರೆ.
ದಿನಾಂಕ 13.05.2021ರಂದು ಕೋವಿಡ್ ಸೋಂಕಿನಿAದ ಬಳಲಿ ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಹಾಗೂ ಕಳೆದ ವರ್ಷ ನವೆಂಬರ್ 11ರಂದು ಕಲಬುರಗಿ ನಗರದ ಗೀನೋಬಲ್ಸ್ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿದ್ದ ಗುಣಶೇಖರ ಸ್ವಾಮಿ ಅವರು ನಿಧನರಾಗಿದ್ದರು.

LEAVE A REPLY

Please enter your comment!
Please enter your name here