

ಕಲಬುರಗಿ, ಜುಲೈ. 10: ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಪ್ರಥಮವಾಗಿ ಎಸ್.ಎಸ್. ಭಾವಿಕಟ್ಟಿ ಪುಸ್ತಕ ವ್ಯಾಪಾರಿಗಳು ಹಾಗೂ ಪ್ರಕಾಶನದ ವತಿಯಿಂದ ಎಲ್.ಕೆ.ಜಿ., ಯು.ಕೆ.ಜಿ.ನ ಸೆಮಿಸ್ಟರ್ ಆಲ್ ಇನ್ ಒನ್ ವರ್ಕ ಬುಕ್‌ನ್ನು ಶ್ರೀ ಶರಣಬಸವೇಶ್ವರ ಸಂಸ್ಥಾನದ ಮುಂದಿನ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಶರಣಬಸಪ್ಪಾ ಅಪ್ಪ ಅವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪೂಜ್ಯ ಶರಣಬಸಪ್ಪ ಅಪ್ಪಾ ಅವರ ಪುತ್ರಿಯರಾದ ಕು. ಶಿವಾನಿ, ಕು. ಕೋಮಲಾ, ಶ್ರೀಮತಿ ಲಕ್ಷಿ ಪಾಟೀಲ್, ಎಸ್.ಎಸ್. ಭಾವಿಕಟ್ಟಿ ಪ್ರಕಾಶನದ ಮಾಲೀಕರಾದ ಮಹೇಶ ಭಾವಿಕಟ್ಟಿ, ಸಿದ್ದು ಭಾವಿಕಟ್ಟಿ ಮತ್ತು ಕಾರ್ತಿಕ ಭಾವಿಕಟ್ಟಿ, ಮಹೇಶ ಜಿ. ನಿಲಕಾರ್, ಶರತ ಎಂ. ಭಾವಿಕಟ್ಟಿ ಅವರುಗಳು ಉಪಸ್ಥಿತರಿದ್ದರು.